ವರುಣನ ನರ್ತನಕ್ಕೆ ತುಂಬಿ ಹರಿಯುತ್ತಿದೆ ಅಗಸ್ತ್ಯ ತೀರ್ಥ ಹೊಂಡ

ಬಾಗಲಕೋಟೆ: ಜಿಲ್ಲೆಯಲ್ಲಿ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಈ ಪರಿಣಾಮ ಬಾದಾಮಿ ಪಟ್ಟಣದ ಐತಿಹಾಸಿಕ ಕಾಲದ ಅಗಸ್ತ್ಯ ತೀರ್ಥ ಹೊಂಡ ಮೈತುಂಬಿ ಹರಿದಿದೆ. ತುಂತುರು ಮಳೆಯಲ್ಲಿ ಮೈ ಕೊರೆಯುವ ಚಳಿಯಲ್ಲಿ ಪ್ರಕೃತಿಯ ಸೌಂದರ್ಯ ಸವಿಯೋದೆ ಒಂದು ರೀತಿಯ ಮುದವಾಗಿದೆ. ಮತ್ತೊಂದೆಡೆ ಭಾರಿ ಮಳೆಯಿಂದ ಬಾದಾಮಿ ಪಟ್ಟಣದ ರಸ್ತೆಗಳಲ್ಲಿ ಜಲಧಾರೆಗಳು ಹರಿಯುತ್ತಿವೆ. ಮನೆಗಳಿಗೆ ಮಳೆ ನೀರು ನುಗ್ಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನಲ್ಲೇ ಮಕ್ಕಳು ಆಟವಾಡ್ತಿದ್ರೆ.. ಹೆತ್ತವರಿಗೆ ಮಳೆಯಿಂದಾದ ಹಾನಿ ಕಣ್ಣೀರು ತರಿಸುತ್ತಿದೆ.

ವರುಣನ ನರ್ತನಕ್ಕೆ ತುಂಬಿ ಹರಿಯುತ್ತಿದೆ ಅಗಸ್ತ್ಯ ತೀರ್ಥ ಹೊಂಡ

Updated on: Sep 26, 2020 | 11:53 AM

ಬಾಗಲಕೋಟೆ: ಜಿಲ್ಲೆಯಲ್ಲಿ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಈ ಪರಿಣಾಮ ಬಾದಾಮಿ ಪಟ್ಟಣದ ಐತಿಹಾಸಿಕ ಕಾಲದ ಅಗಸ್ತ್ಯ ತೀರ್ಥ ಹೊಂಡ ಮೈತುಂಬಿ ಹರಿದಿದೆ.

ತುಂತುರು ಮಳೆಯಲ್ಲಿ ಮೈ ಕೊರೆಯುವ ಚಳಿಯಲ್ಲಿ ಪ್ರಕೃತಿಯ ಸೌಂದರ್ಯ ಸವಿಯೋದೆ ಒಂದು ರೀತಿಯ ಮುದವಾಗಿದೆ. ಮತ್ತೊಂದೆಡೆ ಭಾರಿ ಮಳೆಯಿಂದ ಬಾದಾಮಿ ಪಟ್ಟಣದ ರಸ್ತೆಗಳಲ್ಲಿ ಜಲಧಾರೆಗಳು ಹರಿಯುತ್ತಿವೆ. ಮನೆಗಳಿಗೆ ಮಳೆ ನೀರು ನುಗ್ಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನಲ್ಲೇ ಮಕ್ಕಳು ಆಟವಾಡ್ತಿದ್ರೆ.. ಹೆತ್ತವರಿಗೆ ಮಳೆಯಿಂದಾದ ಹಾನಿ ಕಣ್ಣೀರು ತರಿಸುತ್ತಿದೆ.

Published On - 11:04 am, Sat, 26 September 20