ಬಾಗಲಕೋಟೆ: 40 ದಿನಗಳ ಬಳಿಕ ಮದ್ಯದಂಗಡಿಗಲು ಓಪನ್ ಆಗಿವೆ. ಹೀಗಾಗಿ ಮದ್ಯ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಇಲ್ಲೊಬ್ಬ ಕುಡುಕ ಮದ್ಯಸಿಕ್ಕ ಖುಷಿಗೆ ಹನುಮಂತ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಧ್ಯಾನ ಮಾಡಿ, ನೈವೇದ್ಯ ಅರ್ಪಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಬಳಿ ನಡೆದಿದೆ.
ಮದ್ಯದಂಗಡಿ ಶುರುವಾಗಿದ್ದೇ ತಡ ಸಂಭ್ರಮದಿಂದ ಮದ್ಯ ಖರೀದಿಸಿ ಹನುಮಾನ ದೇವಸ್ಥಾನಕ್ಕೆ ತೆರಳಿ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಎರಡೂ ಕೈ ಮುಗಿದು ಧ್ಯಾನ ಮಾಡಿದ್ದಾನೆ. ನಂತರ ದೇವರಿಗೆ ಸಾರಾಯಿ ನೈವೇದ್ಯ ಅರ್ಪಿಸಿ ತೆರಳಿದ್ದಾನೆ.
Published On - 12:11 pm, Mon, 4 May 20