ಗ್ರೀನ್ ಜೋನ್ ಹಾವೇರಿಯಲ್ಲಿ ಮೊದಲ ಸೋಂಕು, ರಾಜ್ಯದ ಅಪ್ಡೇಟ್ಸ್ ಇಲ್ಲಿದೆ
ಬೆಂಗಳೂರು: ಒಂದೂ ಕೊರೊನಾ ಕೇಸ್ ಇಲ್ಲದೆ ಗ್ರೀನ್ ಜೋನ್ ಜಿಲ್ಲೆಯಾಗಿದ್ದ ಹಾವೇರಿಯಲ್ಲಿ ಇಂದು ಮೊದಲ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದಾರೆ. ಏಪ್ರಿಲ್ 29ರಂದು ಮೂವರು ಮುಂಬೈನಿಂದ ಹಾವೇರಿ ಜಿಲ್ಲೆ ಸವಣೂರಿಗೆ ಬಂದಿದ್ದಾರೆ. ಮುಂಬೈನಿಂದ ಬಂದು ಮನೆಯಲ್ಲಿಯೇ ಇದ್ದರು. ಈ ಪೈಕಿ 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇನ್ನಿಬ್ಬರ ವೈದ್ಯಕೀಯ ವರದಿ ಬರಬೇಕಿದೆ. ರಾಜ್ಯದಲ್ಲಿ ಇಂದು 28 ಜನರಿಗೆ ಮಹಾಮಾರಿ […]
ಬೆಂಗಳೂರು: ಒಂದೂ ಕೊರೊನಾ ಕೇಸ್ ಇಲ್ಲದೆ ಗ್ರೀನ್ ಜೋನ್ ಜಿಲ್ಲೆಯಾಗಿದ್ದ ಹಾವೇರಿಯಲ್ಲಿ ಇಂದು ಮೊದಲ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದಾರೆ.
ಏಪ್ರಿಲ್ 29ರಂದು ಮೂವರು ಮುಂಬೈನಿಂದ ಹಾವೇರಿ ಜಿಲ್ಲೆ ಸವಣೂರಿಗೆ ಬಂದಿದ್ದಾರೆ. ಮುಂಬೈನಿಂದ ಬಂದು ಮನೆಯಲ್ಲಿಯೇ ಇದ್ದರು. ಈ ಪೈಕಿ 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇನ್ನಿಬ್ಬರ ವೈದ್ಯಕೀಯ ವರದಿ ಬರಬೇಕಿದೆ.
ರಾಜ್ಯದಲ್ಲಿ ಇಂದು 28 ಜನರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. ಮಂಡ್ಯ 2, ಕಲಬುರಗಿ 2, ಹಾವೇರಿ 1, ವಿಜಯಪುರ 1, ಚಿಕ್ಕಬಳ್ಳಾಪುರ 1, ದಾವಣಗೆರೆಯಲ್ಲಿ 21 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ದಾವಣಗೆರೆಯಲ್ಲಿ 21 ಕೇಸ್ ಪತ್ತೆಯಾಗಿರುವ ಬಗ್ಗೆ ಭಾನುವಾರವೇ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದರು.
ಕರ್ನಾಟಕದಲ್ಲಿ 642 ಕೊರೊನಾ ಸೋಂಕಿತರ ಪೈಕಿ 304 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಿದ್ದಾರೆ. 642 ಸೋಂಕಿತರ ಪೈಕಿ ಈವರೆಗೆ 26 ಮಂದಿ ಮೃತಪಟ್ಟಿದ್ದು, 312 ಜನರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Published On - 12:29 pm, Mon, 4 May 20