ಹುಳಿಮಾವು ಕೆರೆ ಏರಿ ಒಡೆಯಲು ಬಿಬಿಎಂಪಿ ಉಪಮೇಯರ್ ಕಾರಣ?

ಬೆಂಗಳೂರು: ಹುಳಿಮಾವು ಕೆರೆಯ ಏರಿ ಒಡೆದ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ದೇವಸ್ಥಾನದೊಳಗೆ ಬರ್ತಿದ್ದ ಕೆರೆಯ ನೀರು ತಪ್ಪಿಸಲು ಇಡೀ ಊರನ್ನೇ ಮುಳುಗಿಸಿದ್ರಾ? ಹುಳಿಮಾವು ಕೆರೆ ಏರಿ ಒಡೆಯಲು ಉಪಮೇಯರ್ ರಾಮ್ ಮೋಹನ್ ರಾಜ್ ಕಾರಣ? ಎಂಬ ಆರೋಪಗಳು ಕೇಳಿಬರುತ್ತಿವೆ. ದೇಗುಲಕ್ಕೆ ಬರ್ತಿದ್ದ ಕೆರೆ ನೀರು ತಪ್ಪಿಸಲು ಸೂಚನೆ: ಹುಳಿಮಾವು ಕೆರೆ ಏರಿ ಮೇಲೆ ಕಟ್ಟೆ ಗಂಗಮ್ಮ ದೇವಸ್ಥಾನವಿದೆ. ಈ ದೇವಸ್ಥಾನದೊಳಗೆ ಕೆರೆ ನೀರು ಬಂದು ತುಂಬಿಕೊಳ್ಳುತ್ತಿತ್ತು. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮತ್ತು ಬಿಬಿಎಂಪಿ […]

ಹುಳಿಮಾವು ಕೆರೆ ಏರಿ ಒಡೆಯಲು ಬಿಬಿಎಂಪಿ ಉಪಮೇಯರ್ ಕಾರಣ?
Follow us
ಸಾಧು ಶ್ರೀನಾಥ್​
|

Updated on:Nov 27, 2019 | 7:51 AM

ಬೆಂಗಳೂರು: ಹುಳಿಮಾವು ಕೆರೆಯ ಏರಿ ಒಡೆದ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ದೇವಸ್ಥಾನದೊಳಗೆ ಬರ್ತಿದ್ದ ಕೆರೆಯ ನೀರು ತಪ್ಪಿಸಲು ಇಡೀ ಊರನ್ನೇ ಮುಳುಗಿಸಿದ್ರಾ? ಹುಳಿಮಾವು ಕೆರೆ ಏರಿ ಒಡೆಯಲು ಉಪಮೇಯರ್ ರಾಮ್ ಮೋಹನ್ ರಾಜ್ ಕಾರಣ? ಎಂಬ ಆರೋಪಗಳು ಕೇಳಿಬರುತ್ತಿವೆ.

ದೇಗುಲಕ್ಕೆ ಬರ್ತಿದ್ದ ಕೆರೆ ನೀರು ತಪ್ಪಿಸಲು ಸೂಚನೆ: ಹುಳಿಮಾವು ಕೆರೆ ಏರಿ ಮೇಲೆ ಕಟ್ಟೆ ಗಂಗಮ್ಮ ದೇವಸ್ಥಾನವಿದೆ. ಈ ದೇವಸ್ಥಾನದೊಳಗೆ ಕೆರೆ ನೀರು ಬಂದು ತುಂಬಿಕೊಳ್ಳುತ್ತಿತ್ತು. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮತ್ತು ಬಿಬಿಎಂಪಿ ಉಪಮೇಯರ್​ಗೆ ದೇವಸ್ಥಾನದವರು ದೂರು ನೀಡಿದ್ದರು. ಅದರಂತೆ ಕೆರೆ ನೀರನ್ನ ಹರಿ ಬೀಡುವಂತೆ ಬಿಬಿಎಂಪಿ ಅಧಿಕಾರಿ ಶಿಲ್ಪಾಗೆ ಉಪಮೇಯರ್ ರಾಮ್ ಮೋಹನ್ ರಾಜ್ ಸೂಚಿಸಿದ್ದರು.

ಜೆಸಿಬಿ ಚಾಲಕನ ಎಡವಟ್ಟು! ಆದ್ರೆ, ನೀರು ಹರಿಬಿಡಲು ಪ್ರಾರಂಭದಲ್ಲಿ ಬಿಬಿಎಂಪಿ ಕೆರೆ ವಿಭಾಗದ ಎಂಜಿನಿಯರ್ ಶಿಲ್ಪಾ ಒಪ್ಪಿರಲಿಲ್ಲ. ನಂತರ ಕೆರೆ ಪಕ್ಕದ ರಾಜಕಾಲುವೆಗೆ ಸಣ್ಣದಾಗಿ ಕೆರೆ ನೀರು ಹರಿ ಬಿಡಲು ಶಿಲ್ಪಾ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಜೆಸಿಬಿ ಮೂಲಕ ಕೆರೆ ನೀರನ್ನ ಹರಿಬಿಡುವಂತೆ ಉಪಮೇಯರ್ ಸೂಚನೆ ನೀಡಿದ್ದಾರೆ. ಆದ್ರೆ, ಜೆಸಿಬಿ ಚಾಲಕ ಕೆರೆಯ ಏರಿಯನ್ನೇ ಒಡೆದು ಎಡವಟ್ಟು ಮಾಡಿದ್ದಾನೆ. ಇದರಿಂದ ಏರಿ ಒಡೆದು ಇಡೀ ಊರಿಗೇ ಕೆರೆಯ ನೀರು ನುಗ್ಗಿದೆ ಎಂದು ಟಿವಿ9 ಗೆ ಬಿಬಿಎಂಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Published On - 7:48 am, Wed, 27 November 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್