ಶಾಲಾ ಮಕ್ಕಳಿಗೆ ಕೊಡುವ ಬಿಸಿ ಊಟದ ಆಹಾರಕ್ಕೆ ಕನ್ನ.. ಬೀದರ್​ನ ಶಿಕ್ಷಕಿ ಮೇಲೆ ಗಂಭೀರ ಆರೋಪ

|

Updated on: Feb 26, 2021 | 8:09 AM

ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗಬೇಕು, ಹಸಿವು ನೀಗಬೇಕು ಅನ್ನೋ ಉದ್ದೇಶದಿಂದ ಸರ್ಕಾರ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಇದಕ್ಕಾಗಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ಹಣವನ್ನೂ ವೆಚ್ಚ ಮಾಡ್ತಿದೆ. ಇನ್ನೂ ಶಿಕ್ಷಕರಿಗೆ ಈ ಯೋಜನೆ ಜವಾಬ್ದಾರಿ ವಹಿಸಲಾಗಿದೆ. ಆದರೆ ಜವಾಬ್ದಾರಿ ಹೊತ್ತವರ ವಿರುದ್ಧವೇ ಮೋಸದ ಆರೋಪ ಕೇಳಿ ಬಂದಿದೆ.

ಶಾಲಾ ಮಕ್ಕಳಿಗೆ ಕೊಡುವ ಬಿಸಿ ಊಟದ ಆಹಾರಕ್ಕೆ ಕನ್ನ.. ಬೀದರ್​ನ ಶಿಕ್ಷಕಿ ಮೇಲೆ ಗಂಭೀರ ಆರೋಪ
ಬಿಸಿಯೂಟ
Follow us on

ಬೀದರ್: ಶಾಲಾ ‌ಮಕ್ಕಳ ಬಿಸಿಯೂಟದ ಪದಾರ್ಥಕ್ಕೂ ಕನ್ನಾ. ಮಕ್ಕಳಿಗೆ ಆಹಾರ ತಲುಪಿಸುವ ಜವಾಬ್ದಾರಿ ಹೊತ್ತವರ ವಿರುದ್ಧವೇ ಮೋಸದ ಆರೋಪ. ಅಂದಹಾಗೆ ಈ ಘಟನೆ ನಡೆದಿರೋದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಯನಗುಂದು ಗ್ರಾಮದಲ್ಲಿ.

ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಕಾಳೆ ಮಕ್ಕಳಿಗೆ ಕೊಡುವ ಬಿಸಿ ಊಟದ ಆಹಾರಕ್ಕೆ ಕನ್ನ ಹಾಕುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಶಾಲೆ ಮುಖ್ಯಶಿಕ್ಷಕಿ ವಿರುದ್ಧ ಇಂತಹ ಗಂಭೀರ ಕೇಳಿ ಬಂದಿದೆ. ಈ ಮೊದಲು ಶಾಲೆಯಲ್ಲೇ ಮಕ್ಕಳಿಗೆ ಬಿಸಿಯೂಟ ಕೊಡಲಾಗುತ್ತಿತ್ತು. ಆದರೆ ಕೊರೊನಾದಿಂದಾಗಿ 1 ವರ್ಷದಿಂದ್ಲೂ ಮಕ್ಕಳಿಗೆ ಅವರವರ ಮನೆಗೆ ಬಿಸಿಯೂಟದ ಆಹಾರ ಪದಾರ್ಥ ಕೊಡಬೇಕು ಅಂತಾ ಸರ್ಕಾರ ಆದೇಶಿಸಿದೆ. ಜೊತೆಗೆ ಮಗುವಿಗೆ ಅದರ ವಯಸ್ಸಿಗೆ ಅನುಗುಣವಾಗಿ ಆಹಾರ ಪದಾರ್ಥಗಳ ವಿತರಣೆಗೆ ಸೂಚಿಸಿದೆ. ಆದರೆ ಮುಖ್ಯ ಶಿಕ್ಷಕಿ ಈ ವಿಚಾರದಲ್ಲಿ ಮೋಸ ಮಾಡ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೇಲೆ ಆರೋಪ ಕೇಳಿ ಬಂದಿದೆ

ಇನ್ನು ಶಾಲೆ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನ ಕಾನೂನು ಬಾಹೀರವಾಗಿ ಡ್ರಾ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಶಿಕ್ಷಣ ಸಚಿವರಿಗೂ ದೂರು ನೀಡಲಾಗಿದೆಯಂತೆ, ಆದರೆ ಕ್ರಮ ಕೈಗೊಂಡಿಲ್ಲ ಅಂತಾ ಆಕ್ರೋಶ ವ್ಯಕ್ತವಾಗುತ್ತಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಒಟ್ನಲ್ಲಿ ಬಡ ಮಕ್ಕಳ ಹಸಿವು ನೀಗಿಸುವ ಸರ್ಕಾರ ಖರ್ಚು ಮಾಡ್ತಿರೋ ಹಣ ಬೇರೆಯವರ ಪಾಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಇದನ್ನ ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಬೀದರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು

ಬೀದರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು

ಇದನ್ನೂ ಓದಿ: ಬೆಂಗಳೂರಿನಲ್ಲಿ 12 ಲಕ್ಷ ಮೌಲ್ಯದ ದುಬಾರಿ ಮದ್ಯ ಜಪ್ತಿ; ನ್ಯೂ ಇಯರ್ ಸೆಲೆಬ್ರೆಷನ್ ಕಿಕ್ಕೇರಿಸಲು ಹೊರಟವರು ಅಂದರ್​