ಬೆಂಗಳೂರಿನಲ್ಲಿ 12 ಲಕ್ಷ ಮೌಲ್ಯದ ದುಬಾರಿ ಮದ್ಯ ಜಪ್ತಿ; ನ್ಯೂ ಇಯರ್ ಸೆಲೆಬ್ರೆಷನ್ ಕಿಕ್ಕೇರಿಸಲು ಹೊರಟವರು ಅಂದರ್​

ಬೆಂಗಳೂರಿನಲ್ಲಿ 12 ಲಕ್ಷ ಮೌಲ್ಯದ ದುಬಾರಿ ಮದ್ಯ ಜಪ್ತಿ; ನ್ಯೂ ಇಯರ್ ಸೆಲೆಬ್ರೆಷನ್ ಕಿಕ್ಕೇರಿಸಲು ಹೊರಟವರು ಅಂದರ್​
ಬಂಧಿತ ಆರೋಪಿಗಳು

ಮಿಲ್ಟ್ರಿ ಕ್ಯಾಂಟಿನ್​ನಲ್ಲಿ ಬೇರೆಯವರ ಕಾರ್ಡ್ ಬಳಸಿ ಮದ್ಯ ಖರೀದಿಸಿದ ಕಿರಾತಕರ ತಂಡ ಬಳಿಕ ಪಾರ್ಟಿಗಳಿಗೆ ಬಾರ್ ರೇಟ್​ಗಿಂತ ಕಡಿಮೆ ರೇಟ್​ಗೆ ಡ್ರಿಂಕ್ಸ್ ಮಾರಾಟಕ್ಕೆ ಯತ್ನ ನಡೆಸಿದ್ದರು. ವಿಚಾರದ ತಿಳಿದ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

pruthvi Shankar

|

Dec 30, 2020 | 8:22 AM

ಬೆಂಗಳೂರು: ನ್ಯೂ ಇಯರ್ ಸೆಲೆಬ್ರೆಷನ್ ಕಿಕ್ಕೇರಿಸಲು ಅಕ್ರಮ ಮದ್ಯ ಮಾರಾಟಕ್ಕೆ ಯತ್ನಿಸಿದವರನ್ನು ಅಬಕಾರಿ ಡಿಸಿ ವೀರಣ್ಣ ಬಾಗೇವಾಡಿ ಅಂಡ್ ಟೀಂನ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬಂಧಿಸಲಾಗಿದೆ.

ಮಣಿ ಮತ್ತು ರಾಮು ಬಂಧಿತ ಆರೋಪಿಗಳಾಗಿದ್ದು, ಈ ಇಬ್ಬರು ಸರ್ಕಾರಕ್ಕೆ ತೆರಿಗೆ ವಂಚಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ. 12 ಲಕ್ಷ ಮೌಲ್ಯದ 110 ಬಾಟೆಲ್ ಕಾಸ್ಟ್ಲಿ ಡ್ರಿಂಕ್ಸ್​ ಜಪ್ತಿ ಮಾಡಲಾಗಿದೆ. ಇದರಲ್ಲಿ ಬ್ಲಾಕ್ ಲೇಬಲ್, ಬ್ಲಾಕ್ ಅಂಡ್ ವೈಟ್, ಟೀಚರ್ಸ್,100 ಪೈಪರ್, ಮಾರ್ಫಿಸ್ ಹೀಗೆ ಎಲ್ಲಾ ಕಾಸ್ಟ್ಲೀ ಡ್ರಿಂಕ್ಸ್​ಗಳನ್ನು ಮಿಲ್ಟ್ರಿ ಕ್ಯಾಂಟಿನ್ ಹಾಗೂ ಡ್ಯೂಟಿ ಫ್ರೀ ಶಾಪ್​ಗಳಿಂದ ಖರೀದಿ ಮಾಡಿದ್ದ ಗ್ಯಾಂಗ್, ಸರ್ಕಾರಕ್ಕೆ ಟ್ಯಾಕ್ಸ್ ವಂಚಿಸಿ ಹೊಸ ವರ್ಷಕ್ಕೆ ಸಪ್ಲೈ ಮಾಡಲು ಸಂಚು ರೂಪಿಸಿದ್ದರು.

ಮಿಲ್ಟ್ರಿ ಕ್ಯಾಂಟಿನ್​ನಲ್ಲಿ ಬೇರೆಯವರ ಕಾರ್ಡ್ ಬಳಸಿ ಮದ್ಯ ಖರೀದಿಸಿದ ಕಿರಾತಕರ ತಂಡ ಬಳಿಕ ಪಾರ್ಟಿಗಳಿಗೆ ಬಾರ್ ರೇಟ್​ಗಿಂತ ಕಡಿಮೆ ರೇಟ್​ಗೆ ಡ್ರಿಂಕ್ಸ್ ಮಾರಾಟಕ್ಕೆ ಯತ್ನ ನಡೆಸಿದ್ದರು. ವಿಚಾರದ ತಿಳಿದ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಅಕ್ರಮ ಮಾರಾಟ ಜಾಲದಲ್ಲಿ ಮತ್ತಷ್ಟು ಆರೋಪಿಗಳ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada