ವಿಷ್ಣುವರ್ಧನ್ 11ನೇ ವರ್ಷದ ಪುಣ್ಯತಿಥಿ: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕಕ್ಕೆ ಪೂಜೆ
ಕಾಮನ್ ಡಿಪಿ ಟ್ರೆಂಡ್ ಅನ್ನು ಅಭಿಮಾನಿಗಳು ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ವಿಷ್ಣು ಪ್ರತಿಮೆ ಧ್ವಂಸ ಪ್ರಕರಣ ಬೇಸರ ತರಿಸಿತ್ತು. ಹೀಗಾಗಿ ಪುಣ್ಯತಿಥಿ ದಿನ ಕಾಮನ್ ಡಿಪಿ ಅಭಿಯಾನಕ್ಕೆ ನಿರ್ಧಾರ ಮಾಡಲಾಗಿದೆ.
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ 11ನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ನಗರದ ಅಭಿಮಾನ್ ಸ್ಟುಡಿಯೋದಲ್ಲಿ ಬುಧವಾರ (ಡಿ.30) ಅಭಿಮಾನಿಗಳು ಪೂಜೆ ನೆರವೇರಿಸಲಿದ್ದಾರೆ. ವಿಷ್ಣುವರ್ಧನ್ ಪತ್ನಿ ಭಾರತಿ ಮೈಸೂರಿನಲ್ಲಿರುವ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಇವರ ಜೊತೆಗೆ ಅಭಿಮಾನಿಗಳು ಕೂಡ ಪಾಲ್ಗೊಳ್ಳಲಿದ್ದಾರೆ.
ಇನ್ನು, ಕಾಮನ್ ಡಿಪಿ ಟ್ರೆಂಡ್ ಅನ್ನು ಅಭಿಮಾನಿಗಳು ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ವಿಷ್ಣು ಪ್ರತಿಮೆ ಧ್ವಂಸ ಪ್ರಕರಣ ಬೇಸರ ತರಿಸಿತ್ತು. ಹೀಗಾಗಿ ಪುಣ್ಯತಿಥಿ ದಿನ ಕಾಮನ್ ಡಿಪಿ ಅಭಿಯಾನಕ್ಕೆ ನಿರ್ಧಾರ ಮಾಡಲಾಗಿದೆ.
ಸೋಮವಾರ ವಿಷ್ಣು ಪ್ರತಿಮೆ ಮರುಸ್ಥಾಪನೆಗೆ ಭೂಮಿಪೂಜೆ ನಡೆದಿತ್ತು. ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್ ಪ್ರತಿಮೆಯನ್ನು ಮರುಸ್ಥಾಪನೆ ಮಾಡಲಾಗುವುದು ಎಂದು ಅವರ ಅಭಿಮಾನಿಗಳು ಹೇಳಿದ್ದರು. ಈ ಕಾರ್ಯಕ್ರಮ ಕೂಡ ನಾಳೆ ನೆರವೇರುವ ಸಾಧ್ಯತೆ ಇದೆ. ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ನಟ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿ ಬಹಳಷ್ಟು ಜನರು ಆಕ್ರೋಶ ಕೂಡ ಹೊರ ಹಾಕಿದ್ದರು.
ಡಾ.ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ: ಧ್ವಂಸವಾದ ಜಾಗದಲ್ಲೇ ಮತ್ತೆ ತಲೆ ಎತ್ತಲಿದೆ ಸಾಹಸಸಿಂಹನ ಪ್ರತಿಮೆ