Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price: ಮಹಿಳೆಯರಿಗೆ ಇಂದು ಶುಭ ಶುಕ್ರವಾರ; ಬೆಂಗಳೂರಿನಲ್ಲಿ ಇಳಿಕೆಯತ್ತ ಚಿನ್ನದ ದರ!

Gold Silver Rate: ಮಹಿಳೆಯರಿಗೆ ಇಂದು ಶುಭ ಶುಕ್ರವಾರ. ಚಿನ್ನದ ದರ ಇಳಿಕೆಯತ್ತ ಮುಖ ಮಾಡಿದೆ. ಹಾಗಿದ್ದಲ್ಲಿ ಎಷ್ಟಿದೆ ಚಿನ್ನ ದರ? ಇಂದು ಚಿನ್ನ ಕೊಳ್ಳುವ ಆಸೆ ಇದ್ದರೆ ದರದ ಬಗೆಗೆ ಮಾಹಿತಿ ಇಲ್ಲಿದೆ.

Gold Silver Price:  ಮಹಿಳೆಯರಿಗೆ ಇಂದು ಶುಭ ಶುಕ್ರವಾರ; ಬೆಂಗಳೂರಿನಲ್ಲಿ ಇಳಿಕೆಯತ್ತ ಚಿನ್ನದ ದರ!
ಸಾಂದರ್ಭಿಕ ಚಿತ್ರ
Follow us
shruti hegde
| Updated By: Digi Tech Desk

Updated on:Feb 26, 2021 | 1:20 PM

ಬೆಂಗಳೂರು: ಬುಧವಾರಕ್ಕೆ ಹೋಲಿಸಿದರೆ ನಿನ್ನೆ ಅಂದರೆ ಗುರವಾರ ಚಿನ್ನದ ದರ ಸ್ವಲ್ಪ ಏರಿಕೆಯತ್ತ ಸಾಗಿತ್ತು. ಆದರೆ ಇದೀಗ ಶುಕ್ರವಾರ ಚಿನ್ನ ದರ ಇಳಿಕೆಯತ್ತ ಸಾಗಿದೆ. 22 ಕ್ಯಾರೆಟ್​ 10ಗ್ರಾಂ ಚಿನ್ನ ದರ ಇದೀಗ 43,400 ರೂ ಆಗಿದೆ. ನಿನ್ನೆ 22 ಕ್ಯಾರೆಟ್​ ಚಿನ್ನದ ದರ 43,750 ರೂ ಇತ್ತು. ದೈನಂದಿನ ಬದಾಲಣೆಯಲ್ಲಿ 350ರೂ.ಗಳಷ್ಟು ಇಳಿಕೆ ಕಂಡಿದೆ. ಶುಭ ಶುಕ್ರವಾರದಂದು ಚಿನ್ನದ ದರ ಇಳಿಕೆಯತ್ತ ಸಾಗಿರುವುದು ಗ್ರಾಹಕರಿಗೆ ಸಂತೋಷ ತಂದಿದೆ. ಹಾಗೆಯೇ 24 ಕ್ಯಾರೆಟ್​ 10ಗ್ರಾಂ ಚಿನ್ನ 47,350 ಆಗಿದೆ. ನಿನ್ನೆ 47,730 ರೂಗೆ ಚಿನ್ನ ಮಾರಾಟವಾಗುತ್ತಿತ್ತು, ದೈನಂದಿನ ಬದಲಾವಣೆಯಲ್ಲಿ 380ರೂ.ಗಳಷ್ಟು ಇಳಿಕೆ ಕಂಡಿರುವುದು ಚಿನ್ನ ಕೊಂಡುಕೊಳ್ಳುವವರಿಗೆ ಖುಷಿ ನೀಡಿದೆ.

ಇಂದು ಚಿನ್ನ ಖರೀದಿದಾರರಿಗೆ ಶುಭ ಶುಕ್ರವಾರ ಎಂದೇ ಹೇಳ ಬಹುದು. ಸಾಮಾನ್ಯವಾಗಿ ವಿಶೇಷ ಪೂಜೆ- ಸಭೇ ಸಮಾರಂಭಗಳನ್ನು ಶುಕ್ರವಾರದಂದು ಆಚರಿಸುತ್ತೇವೆ. ಶುಕ್ರವಾರ ಮಹಿಳೆಯರಿಗೆ ಒಳ್ಳೆಯ ದಿನ. ಹಾಗೂ ದೇವರ ಕಾರ್ಯ ನೆರವೇರಿಸಲು ಶುಭ ದಿನ ಎಂಬುದು ಮೊದಲಿನಿಂದಲೂ ಬಂದಿರುವಂತದ್ದು. ಹಾಗೂ ಒಳ್ಳೆಯ ಕೆಲಸ ಮಾಡುವಾಗ ಮಂಗಳವಾರ ಅಥವಾ ಶುಕ್ರವಾರವನ್ನು ಹೆಚ್ಚು ಆಯ್ಕೆ ಮಾಡಿ ಕೊಳ್ಳುತ್ತೇವೆ. ಇಂದು ಶುಕ್ರವಾರ ಚಿನ್ನ ದರ ಇಳಿಕೆಯತ್ತ ಸಾಗಿರುವುದು ಚಿನ್ನ ಖರೀಸಿದಾರರಿಗೆ ಸಂತೋಷದ ದಿನ.

22 ಕ್ಯಾರೆಟ್​ ಚಿನ್ನ ದರ: 1ಗ್ರಾಂ ಚಿನ್ನ ದರ ನಿನ್ನೆ 4,475 ಇತ್ತು. ಇದೀಗ 35 ರೂ ಇಳಿಕೆ ಕಂಡಿದ್ದು, ದರ 4,340 ರೂ ಆಗಿದೆ. 8ಗ್ರಾಂ ಚಿನ್ನ ನಿನ್ನೆ 35,000 ರೂ.ಗೆ ಮಾರಾಟವಾಗುತ್ತಿದ್ದು, ದೈನಂದಿನ ದರ ಬದಲಾವಣೆಯಲ್ಲಿ 280 ರೂ ಇಳಿಕೆ ಕಂಡಿದೆ. ಇಂದಿನ ದರ 34,720ರೂ. ಹಾಗೆಯೇ 10ಗ್ರಾಂ ಚಿನ್ನ ದರ ನಿನ್ನೆ 43,750 ರೂ.ಗೆ ಮಾರಾಟವಾಗುತ್ತಿದ್ದು, 350 ರೂ. ಇಳಿಕೆಯಾಗಿದ್ದು ಇಂದಿನ ದರ 43,400 ರೂ. ಆಗಿದೆ. ನಿನ್ನೆ 100ಗ್ರಾಂ ಚಿನ್ನ ದರ 4,37,500 ರೂ.ಗೆ ಮಾರಾವಾಗಿದದು, ಇಂದಿನ ದರ 4,34,000 ಇದೆ. ದೈನಂದಿನ ದರ ಬದಲಾವಣೆಯಲ್ಲಿ 3,500 ರೂ ಕಡಿಮೆಯಾಗಿದೆ.

24 ಕ್ಯಾರೆಟ್ ಚಿನ್ನ ದರ: 1ಗ್ರಾಂ ಚಿನ್ನ ದರ ನಿನ್ನೆ 4,773 ರೂ.ಗೆ ಮಾರಾಟವಾಗಿದ್ದು, ಇಂದು ದರ 4,735 ರೂ ಆಗಿದೆ. ದೈನಂದಿನದ ದರ ಬದಲಾವಣೆಯಲ್ಲಿ 38ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನ ದರ ನಿನ್ನೆ 38,184 ರೂ.ಗೆ ಮಾರಾಟವಾಗಿದ್ದು, ಇಂದಿನ ದರ 47,350 ಆಗಿದೆ. 304ರೂ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 47,730 ರೂಪಾಯಿಗೆ ಮಾರಟವಾಗಿದ್ದು, ಇಂದಿನ ದರ 47,350 ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 380 ರೂ. ಇಳಿಕೆಯಾಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,77,300 ರೂ ಇದ್ದು, ಇಂದಿನ ದರ 4,73,500 ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,800 ರೂ ಇಳಿಕೆಯತ್ತ ಸಾಗಿದೆ.

ಬೆಳ್ಳಿ ದರ: ನಿನ್ನೆಯ ಬೆಳ್ಳಿ ದರವನ್ನು ಗಮನಿಸಿದರೆ ಇಂದು ದರ ಕೊಂಚ ಏರಿಕೆ ಕಂಡಿದೆ. ನಿನ್ನೆ 1 ಕೆ.ಜಿ ಬೆಳ್ಳಿ ದರ 70.010 ರೂ.ಗೆ ಮಾರಾಟವಾಗಿತ್ತು. ಇಂದಿನ ದರ 70.600 ರೂ ಆಗಿದೆ. ಅಂದರೆ ದೈನಂದಿನ ಬದಲಾವಣೆಯಲ್ಲಿ 590 ರೂ. ಏರಿಕೆ ಕಂಡಿದೆ.

1ಗ್ರಾಂ ಬೆಳ್ಳಿ ದರ ನಿನ್ನೆ 70.01ರೂಪಾಯಿಗೆ ಮಾರಾಟವಾಗಿದ್ದು. ಇಂದಿನ ದರ 70.60 ರೂ. ಆಗಿದೆ. 8 ಗ್ರಾಂ ಬೆಳ್ಳಿದರ ನಿನ್ನೆ 560.08 ರೂ ಇದ್ದು, ಇಂದಿನ ದರ 564.80 ರೂ ಆಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 700.10 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 706 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 7,001 ರೂಪಾಯಿಗೆ ಮಾರಾಟವಾಗಿದ್ದು ಇಂದಿನ ದರ 7,060 ರೂ ಆಗಿದೆ. ಹಾಗೆಯೇ 1 ಕ.ಜಿ ಬೆಳ್ಳಿ ದರ ನಿನ್ನೆ 70,010 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 70.600 ರೂಪಾಯಿ. ದೈನಂದಿನ ಬದಲಾವಣೆಯಲ್ಲಿ 590 ರೂಪಾಯಿ ಏರಿಕೆ ಕಂಡಿದೆ.

ಇದನ್ನೂ ಓದಿ: Gold Price: ಗ್ರಾಹಕರಿಗೆ ಇಂದು ಖುಷಿ ಸುದ್ದಿ; ಚಿನ್ನದ ದರದಲ್ಲಿ ಇಳಿಕೆ

ಇದನ್ನೂ ಓದಿ: Gold – Silver Price: ಚಿನ್ನದ ದರ ಕೊಂಚ ಏರಿಕೆ; 24 ಕ್ಯಾರೆಟ್ ಚಿನ್ನ 10ಗ್ರಾಂಗೆ 47,840 ರೂಪಾಯಿ

Published On - 9:08 am, Fri, 26 February 21

ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ