AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price: ಗ್ರಾಹಕರಿಗೆ ಇಂದು ಖುಷಿ ಸುದ್ದಿ; ಚಿನ್ನದ ದರದಲ್ಲಿ ಇಳಿಕೆ

Gold Silver Rate: ಚಿನ್ನ ಖರೀದಿದಾರರಿಗೆ ಇಂದು ಸಿಹಿ ಸುದ್ದಿ. ಚಿನ್ನ ಇಂದು ಇಳಿಕೆಯತ್ತ ಮುಖ ಮಾಡಿದ್ದು, 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹47,730 ಹಾಗೂ 22 ಕ್ಯಾರೆಟ್​ 10ಗ್ರಾಂಗೆ ₹43,750 ಇದೆ.

Gold Price: ಗ್ರಾಹಕರಿಗೆ ಇಂದು ಖುಷಿ ಸುದ್ದಿ; ಚಿನ್ನದ ದರದಲ್ಲಿ ಇಳಿಕೆ
ಸಾಂದರ್ಭಿಕ ಚಿತ್ರ
shruti hegde
|

Updated on:Feb 18, 2021 | 9:35 AM

Share

ಬೆಂಗಳೂರು: ಇಂದು ಚಿನ್ನದ ಬೆಲೆ 22 ಕ್ಯಾರೆಟ್​ 10ಗ್ರಾಂಗೆ ₹43,750 ಹಾಗೂ 24 ಕ್ಯಾರೆಟ್ 10ಗ್ರಾಂಗೆ ₹47,730 ಇದೆ. ಚಿನ್ನದ ದರ ಕೆಲ ಐದು ದಿನಗಳಿಂದ ಇಳಿಕೆಯತ್ತ ಸಾಗುತ್ತಿದೆ. ಹೂಡಿಕೆಯ ದೃಷ್ಟಿಯಿಂದ ಚಿನ್ನ ದರ ಇಳಿಕೆಯತ್ತ ಸಾಗುತ್ತಿರುವುದು ಕಹಿ ಸುದ್ದಿಯಾದರೂ ಸಹ, ಚಿನ್ನ ಖರೀದಿದಾರರಿಗೆ ಹೆಚ್ಚು ಖುಷಿಯ ವಿಚಾರ ಎಂದೇ ಹೇಳಬಹುದು. ಇನ್ನು, ಬೆಳ್ಳಿ ದರ 1 ಕೆಜಿಗೆ ₹71,200 ಇದೆ. ನಿನ್ನೆಗೆ ಹೋಲಿಸಿದರೆ ಬೆಳ್ಳಿ ಮೌಲ್ಯ ಇಂದೂ ಕೂಡಾ ಸ್ಥಿರತೆಯನ್ನು ಕಾಪಾಡಿಕೊಂಡಿದೆ.

ಹಿಂದಿನ ವರ್ಷದಲ್ಲಿ 24 ಕ್ಯಾರೆಟ್ ಚಿನ್ನದ ದರ ₹57 ಸಾವಿರದ ಸನಿಹಕ್ಕೆ ತಲುಪಿತ್ತು. ಅದಾದ ನಂತರದಲ್ಲಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿತು. ಚಿನ್ನದ ದರ ₹47 ಸಾವಿರಕ್ಕೆ ಬಂದು ತಲುಪಿತು. ಮಧ್ಯಂತರದಲ್ಲಿ ದರ ಹಾವು ಏಣಿ ಆಟ ಪ್ರಾರಂಭಿಸಿದ್ದರೂ ಸಹ ಇದೀಗ ಬೆಂಗಳೂರಿನಲ್ಲಿ ಚಿನ್ನದ ದರ ₹43,730 ಆಗಿದೆ. ಚಿನ್ನ ಖರೀದಿಗೆಂದು ಹಣ ಕೂಡಿಟ್ಟ ಜನರಿಗೆ ಇದು ಭಾರೀ ಪ್ರಮಾಣದ ಖುಷಿ ತಂದಿದೆ.

ಬೆಂಗಳೂರಿನಲ್ಲಿ ಅತಿ ಗರಿಷ್ಠಕ್ಕೆ ತಲುಪಿದ ಚಿನ್ನದ ಮೌಲ್ಯವೆಂದರೆ, 22 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹ 52 ಸಾವಿರ ಹಾಗೂ 24 ಕ್ಯಾರೆಟ್ ಚಿನ್ನದ ದರ ₹57,600 ತಲುಪಿದ್ದು. ಬೇರೆಲ್ಲಾ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ,ಲಕ್ನೊ, ಮಧುರೈ, ಜೈಪುರ, ಅಹಮದಾಬಾದ್​ ನಗರಗಳಲ್ಲಿ ಚಿನ್ನದ ದರ ಏರಿಕೆ ಪ್ರಮಾಣ ಹೆಚ್ಚಿದ್ದು, ದರ ₹50 ಸಾವಿರಕ್ಕೂ ದಾಟಿದೆ.

ಬೆಂಗಳೂರಿನಲ್ಲಿ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ದರ ಗ್ರಾಂ       22 ಕ್ಯಾರೆಟ್ ಚಿನ್ನ (ಇಂದು)     22 ಕ್ಯಾರೆಟ್ ಚಿನ್ನದ (ನಿನ್ನೆ)

1 ಗ್ರಾಂ             ₹4,375                                             ₹4,425 8ಗ್ರಾಂ             ₹35,000                                           ₹35,400 10 ಗ್ರಾಂ          ₹43,750                                            ₹44,250 100ಗ್ರಾಂ         ₹4,37,500                                        ₹4,42,500

ಬೆಂಗಳೂರಿನಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ದರ: ಗ್ರಾಂ  24 ಕ್ಯಾರೆಟ್ ಚಿನ್ನದ ದರ(ಇಂದು)  24 ಕ್ಯಾರೆಟ್ ಚಿನ್ನದ (ನಿನ್ನೆ)

1ಗ್ರಾಂ                ₹4,773                                           ₹4,829 8ಗ್ರಾಂ                ₹38,184                                        ₹38,632 10ಗ್ರಾಂ              ₹47,730                                        ₹48,290 100ಗ್ರಾಂ           ₹4,77,300                                     ₹4,82,900

ಬೆಳ್ಳಿ ದರ: ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ನಿನ್ನೆಯೂ ಕೂಡಾ ಬೆಳ್ಳಿ ದರ 1 ಕೆಜಿಗೆ ₹71,200 ಇತ್ತು. ಇಂದೂ ಕೂಡಾ ದರ ಸ್ಥಿರವಾಗಿದ್ದು ನಿನ್ನೆಯ ಮೌಲ್ಯವನ್ನೇ ಹೊಂದಿದೆ. ಮನೆಯ ವಿಶೆಷ ಪೂಜೆಗೆ ಬೆಳ್ಳಿಯನ್ನು ಖರೀದಿಸುವವರಿಗೆ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ಗ್ರಾಂ      ಬೆಳ್ಳಿ ದರ (ಇಂದು)           ನಿನ್ನೆ 1ಗ್ರಾಂ        ₹71.20                       ₹71.20 8ಗ್ರಾಂ        ₹556.60                    ₹556.60 10ಗ್ರಾಂ      ₹712                           ₹712 100 ಗ್ರಾಂ   ₹7,120                      ₹7,120 1 ಕೆ.ಜಿ         ₹71,200                    ₹71,200

ಇದನ್ನೂ ಓದಿ : Gold Rate: ಚಿನ್ನದ ಬೆಲೆ ಮತ್ತೆ ಗಗನಕ್ಕೆ, ಬೆಳ್ಳಿ ಬೆಲೆಯೂ ಏರಿದೆ.. ಬೆಂಗಳೂರಲ್ಲಿ ಚಿನ್ನದ ದರ ಎಷ್ಟಿದೆ ಗೊತ್ತಾ?

Published On - 8:48 am, Thu, 18 February 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ