ಜೆಎಂಬಿ ಭಯೋತ್ಪಾದಕರ ವಿರುದ್ಧ ಬೆಂಗಳೂರಲ್ಲಿ ಎನ್ಐಎ ಚಾರ್ಜ್ಶೀಟ್!
2018ರಲ್ಲಿ ಜೆಎಂಬಿ ಸಂಘಟನೆಯ ಉಗ್ರರ ಅಗತ್ಯಗಳನ್ನು ಪೂರೈಸಲು (ಮಾಲ್ ಎ ಗಣಿಮಾತ್) ಹಣ ಸಂಗ್ರಹಕ್ಕೆ ಯತ್ನಿಸಿದ್ದರು. ವಿಧ್ವಂಸಕ ಕೃತ್ಯವೆಸಗಲು ಶಸ್ತ್ರಾಸ್ತ್ರ, ಸ್ಫೋಟಕಗಳ ವಸ್ತುಗಳ ಸಂಗ್ರಹಕ್ಕೆ ಮುಂದಾಗಿದ್ದರು.
ಬೆಂಗಳೂರು: ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ ಉಗ್ರ ಸಂಘಟನೆಯ 11 ಸದಸ್ಯರ ವಿರುದ್ಧ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ನಜೀರ್ ಶೇಖ್, ಆರಿಫ್ ಹುಸೇನ್, ಆಸಿಫ್ ಇಕ್ಬಾಲ್, ಜಹೀದುಲ್ಲ ಇಸ್ಲಾಂ, ಮುಸ್ತಫಾ ಇಸ್ಸೂರ್ ರೆಹಮಾನ್, ಆದಿಲ್ ಶೇಕ್, ಅಬ್ದುಲ್ ಕರೀಂ, ಮುಸ್ತಾಫಾ ಹುಸೇನ್ ಸೇರಿ 11 ಆರೋಪಿಗಳ ವಿರುದ್ಧ NIA ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ.
2018ರಲ್ಲಿ ಜೆಎಂಬಿ ಸಂಘಟನೆಯ ಉಗ್ರರ ಅಗತ್ಯಗಳನ್ನು ಪೂರೈಸಲು (ಮಾಲ್ ಎ ಗನಿಮತ್) ಹಣ ಸಂಗ್ರಹಕ್ಕೆ ಯತ್ನಿಸಿದ್ದರು. ವಿಧ್ವಂಸಕ ಕೃತ್ಯವೆಸಗಲು ಶಸ್ತ್ರಾಸ್ತ್ರ, ಸ್ಫೋಟಕಗಳ ವಸ್ತುಗಳ ಸಂಗ್ರಹಕ್ಕೆ ಮುಂದಾಗಿದ್ದರು. ಈ ಬಗ್ಗೆ ಕೆ.ಆರ್.ಪುರಂ, ಅತ್ತಿಬೆಲೆ ಠಾಣೆಯಲ್ಲಿ FIR ದಾಖಲಾಗಿತ್ತು. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಎನ್ಐಎ ಶೋಧ ಕಾರ್ಯ ನಡೆಸುತ್ತಿದೆ.
2014-18ರ ಅವಧಿಯಲ್ಲಿ ಜೆಎಂಬಿ ಬೆಂಗಳೂರಿನಲ್ಲಿ 20-22 ಅಡಗುತಾಣಗಳನ್ನು ಸ್ಥಾಪನೆ ಮಾಡಿತ್ತು. ಈ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಕಾರ್ಯವನ್ನು ವಿಸ್ತರಣೆ ಮಾಡಿಕೊಳ್ಳುವುದು ಈ ಸಂಘಟನೆಯ ಉದ್ದೇಶವಾಗಿತ್ತು. ಇದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತಡೆಯುತ್ತಲೇ ಬರುತ್ತಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ‘ಉಗ್ರ’ ಪರ ಗೋಡೆ ಬರಹ ಪ್ರಕರಣ: ತನಿಖೆಗೆ ಎನ್ಐಎ ತಂಡ