Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ‘ಉಗ್ರ’ ಪರ ಗೋಡೆ ಬರಹ ಪ್ರಕರಣ: ತನಿಖೆಗೆ ಎನ್​ಐಎ ತಂಡ

ಮಂಗಳೂರು: ನಗರದಲ್ಲಿ ಕಾಣಿಸಿಕೊಂಡಿದ್ದ ಉಗ್ರ ಸಂಘಟನೆಗಳ ಪರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ (National Investigation Agency -NIA) ತನಿಖೆ ಆರಂಭವಾಗಿದ್ದು, ಇನ್ನೆರೆಡು ದಿನಗಳಲ್ಲಿ ತನಿಖಾಧಿಕಾರಿಗಳ ತಂಡ ನಗರಕ್ಕೆ ಭೇಟಿ ನೀಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮುನೀರ್ (22) ಮತ್ತು ಮೊಹಮದ್ ಶಾರೀಖ್ (21) ಅವರಿಂದ ಪೊಲೀಸರು ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಇವರಿಗೆ ಉಗ್ರಗಾಮಿಗಳ ನಂಟು ಇರುವ ಬಗ್ಗೆ ಎನ್​ಐಎ ತನಿಖೆ ನಡೆಸಲಿದೆ. ನಗರದ ಖಾಸಗಿ ಕಾಲೇಜಿನಲ್ಲಿ […]

ಮಂಗಳೂರಿನಲ್ಲಿ ‘ಉಗ್ರ’ ಪರ ಗೋಡೆ ಬರಹ ಪ್ರಕರಣ: ತನಿಖೆಗೆ ಎನ್​ಐಎ ತಂಡ
ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ (ಸಂಗ್ರಹ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 16, 2020 | 9:22 AM

ಮಂಗಳೂರು: ನಗರದಲ್ಲಿ ಕಾಣಿಸಿಕೊಂಡಿದ್ದ ಉಗ್ರ ಸಂಘಟನೆಗಳ ಪರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ (National Investigation Agency -NIA) ತನಿಖೆ ಆರಂಭವಾಗಿದ್ದು, ಇನ್ನೆರೆಡು ದಿನಗಳಲ್ಲಿ ತನಿಖಾಧಿಕಾರಿಗಳ ತಂಡ ನಗರಕ್ಕೆ ಭೇಟಿ ನೀಡಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮುನೀರ್ (22) ಮತ್ತು ಮೊಹಮದ್ ಶಾರೀಖ್ (21) ಅವರಿಂದ ಪೊಲೀಸರು ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಇವರಿಗೆ ಉಗ್ರಗಾಮಿಗಳ ನಂಟು ಇರುವ ಬಗ್ಗೆ ಎನ್​ಐಎ ತನಿಖೆ ನಡೆಸಲಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಎಂಟೆಕ್ ಮಾಡುತ್ತಿದ್ದ ಮುನೀರ್, ಲಾಕ್​ಡೌನ್ ಆಗಿ ಕಾಲೇಜು ತರಗತಿಗಳು ಸ್ಥಗಿತಗೊಂಡಿದ್ದಾಗ ಮನೆಯಿಂದ ಹೊರಗೆ ಹೋಗಲೂ ಅವಕಾಶ ಇರಲಿಲ್ಲ. ಫುಡ್ ಡೆಲಿವರಿಗೆ ಅವಕಾಶವಿದೆ ಎಂಬ ಕಾರಣಕ್ಕೆ ಜೊಮೆಟೊದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.

ಬಲ್ಮಠದ ಆರ್ಯಸಮಾಜ ರಸ್ತೆಯ ಅಪಾರ್ಟ್​ಮೆಂಟ್​ ಒಂದರಲ್ಲಿ ತಂದೆ ಮತ್ತು ತಮ್ಮನೊಂದಿಗೆ ವಾಸವಿದ್ದ. ಈತನನ್ನು ಭೇಟಿಯಾಗಲು ಮೊಹಮದ್ ಶಾರೀಖ್ ಆಗಾಗ ಬರುತ್ತಿದ್ದ ಎನ್ನಲಾಗಿದೆ. ಗೋಡೆ ಬರಹ ಬರೆದ ನಂತರವೂ ಆರೋಪಿಗಳು ಇದೇ ಮನೆಗೆ ಹಿಂದಿರುಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆ ಬರಹ..; ಉರ್ದುವಿನಲ್ಲಿ ಬರೆದಿದ್ದನ್ನು ಅಳಿಸಿದ ಪೊಲೀಸರು

ಕಡಲ ನಗರಿಯಲ್ಲಿ ಉಗ್ರ ಸಂಘಟನೆಗಳ ಪರ ಗೋಡೆ ಬರಹ, ಲಷ್ಕರ್ ಉಗ್ರರನ್ನ ಕರೆಸುವುದಾಗಿ ಬೆದರಿಕೆ..

Published On - 9:18 am, Wed, 16 December 20