ಅಬ್ಬಾ.. ಮಿನಿ ಮಲೆನಾಡಿನ ದಟ್ಟ ಅರಣ್ಯದಲ್ಲಿ ಕೈ ಬೀಸಿ ಕರೆಯುತ್ತಿವೆ ಅಪರೂಪದ ಜಲಪಾತಗಳು

ಕಲಬುರಗಿ: ಮಳೆಗಾಲ ಬಂದ್ರೆ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಜನರು ಜಲಪಾತಗಳ ಸುಂದರ ಕ್ಷಣಗಳನ್ನು ಸವಿಯಲು ಮಲೆನಾಡಿಗೆ ಹೋಗ್ತಾರೆ. ಅಲ್ಲಿ ಕಣ್ಣು ಹಾಯಿಸಿದಷ್ಟು ಹಸಿರು ಹೊದ್ದು ಕಾಣುವ ಅರಣ್ಯದ ನಡುವೆ ಭೋರ್ಗರೆಯುವ ಜಲಧಾರೆಯನ್ನು ನೋಡಿ ಸುಂದರ ಕ್ಷಣಗಳನ್ನು ಆಸ್ವಾಧಿಸುತ್ತಾರೆ. ಹಾಗಂತ ಕಲಬುರಗಿ ಜಿಲ್ಲೆಯಲ್ಲಿ ಜಲಪಾತಗಳೇ ಇಲ್ಲಾ ಅಂತಲ್ಲ. ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಕೆಲವೆಡೆ ಜಲಪಾತಗಳಿದ್ದು, ನೋಡಗರ ಕಣ್ಣಿಗೆ ಹಬ್ಬವನ್ನು ನೀಡುವ ಚೆಲುವನ್ನು ಹೊಂದಿವೆ. ಹೌದು ಕಲಬುರಗಿ ಜಿಲ್ಲೆಯ ಮಿನಿ ಮಲೆನಾಡು ಅಂತ ಕರೆಸಿಕೊಳ್ಳುವ ಚಿಂಚೋಳಿಯ ವನ್ಯಜೀವಿಧಾಮದಲ್ಲಿರುವ […]

ಅಬ್ಬಾ.. ಮಿನಿ ಮಲೆನಾಡಿನ ದಟ್ಟ ಅರಣ್ಯದಲ್ಲಿ ಕೈ ಬೀಸಿ ಕರೆಯುತ್ತಿವೆ ಅಪರೂಪದ ಜಲಪಾತಗಳು
Follow us
ಆಯೇಷಾ ಬಾನು
|

Updated on:Jul 05, 2020 | 9:19 AM

ಕಲಬುರಗಿ: ಮಳೆಗಾಲ ಬಂದ್ರೆ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಜನರು ಜಲಪಾತಗಳ ಸುಂದರ ಕ್ಷಣಗಳನ್ನು ಸವಿಯಲು ಮಲೆನಾಡಿಗೆ ಹೋಗ್ತಾರೆ. ಅಲ್ಲಿ ಕಣ್ಣು ಹಾಯಿಸಿದಷ್ಟು ಹಸಿರು ಹೊದ್ದು ಕಾಣುವ ಅರಣ್ಯದ ನಡುವೆ ಭೋರ್ಗರೆಯುವ ಜಲಧಾರೆಯನ್ನು ನೋಡಿ ಸುಂದರ ಕ್ಷಣಗಳನ್ನು ಆಸ್ವಾಧಿಸುತ್ತಾರೆ.

ಹಾಗಂತ ಕಲಬುರಗಿ ಜಿಲ್ಲೆಯಲ್ಲಿ ಜಲಪಾತಗಳೇ ಇಲ್ಲಾ ಅಂತಲ್ಲ. ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಕೆಲವೆಡೆ ಜಲಪಾತಗಳಿದ್ದು, ನೋಡಗರ ಕಣ್ಣಿಗೆ ಹಬ್ಬವನ್ನು ನೀಡುವ ಚೆಲುವನ್ನು ಹೊಂದಿವೆ. ಹೌದು ಕಲಬುರಗಿ ಜಿಲ್ಲೆಯ ಮಿನಿ ಮಲೆನಾಡು ಅಂತ ಕರೆಸಿಕೊಳ್ಳುವ ಚಿಂಚೋಳಿಯ ವನ್ಯಜೀವಿಧಾಮದಲ್ಲಿರುವ ಕಿರು ಜತಲಾಪತಗಳಿದ್ದು, ಮುಂಗಾರು ಮಳೆಗೆ ಅವೆಲ್ಲಾ ಇದೀಗ ಮೈದುಂಬಿಕೊಂಡಿವೆ.

ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ವನ್ಯಜೀವಿಧಾಮದಲ್ಲಿರುವ ಎತ್ತಿಪೋತ ಜಲಪಾತ, ಮಾಣಿಕಪುರ ಜಲಪಾತಗಳು ಮುಂಗಾರು ಮಳೆಗೆ ಜೀವಕಳೆಯನ್ನು ತುಂಬಿಕೊಂಡಿದ್ದು, ಇದೀಗ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿವೆ. ತೆಲಂಗಾಣದ ಕೆಲವೆಡೇ ಹೆಚ್ಚಿನ ಮಳೆಯಾಗುತ್ತಿರುವುದು ಮತ್ತು ಚಿಂಚೋಳಿ ತಾಲೂಕಿನಲ್ಲಿ ಕೂಡಾ ಕೆಲ ದಿನಗಳಿಂದ ಬಾರಿ ಮಳೆ ಸುರಿಯುತ್ತಿರುವುದರಿಂದ ಬೇಸಿಗೆಯಲ್ಲಿ ಹನಿ ನೀರಿಲ್ಲದೆ ಬತ್ತಿದ್ದ ಜಲಪಾತಗಳಿಗೆ ಇದೀಗ ಜೀವ ಕಳೆ ಬಂದಿದೆ.

ಹೌದು ಚಿಂಚೋಳಿ ತಾಲೂಕಿನ ಒಂಟಿಚಿತ್ತಾ ಮತ್ತು ಸಂಗಾಪುರದ ನಡುವೆ ಇರುವ ಎತ್ತಿಪೋತಾ ನಾಲೆಗೆ ಅಪಾರ ಪ್ರಮಾಣದ ನೀರು ಹರಿದು ಬರ್ತಿದೆ. ಹೀಗಾಗಿ ಎತ್ತಿಪೋತಾ ಮತ್ತು ಸಂಗಾಪುರ ಜಲಪಾತಗಳು ಜೀವ ಕಳೆಯನ್ನು ತುಂಬಿಕೊಂಡಿವೆ. ಕರಿ ಕಲ್ಲಿನಿಂದ ನೀರು ಮೇಲಿನಿಂದ ಬೀಳುವ ದೃಶ್ಯ ಮನಮೋಹಕವಾಗಿದೆ. ಹಸಿರ ಕಾನನದಲ್ಲಿ ಇದೀಗ ಪುಟ್ಟ ಪುಟ್ಟ ಜಲಪಾತಗಳು ಜುಳುಜುಳ ನಿನಾದ ಕೇಳುತ್ತಿದೆ. ಒಂದೆಡೆ ಹಸಿರ ಹೊದ್ದಿಗೆಯನ್ನು ಹೊಂದಿರುವ ಕುಂಚಾವರಂ ಅರಣ್ಯ ಮತ್ತೊಂದಡೆ ಅಲ್ಲಲ್ಲಿ ಪುಟ್ಟ ಜಲಪಾತಗಳು ನೋಡಗರ ಕಣ್ಣಿಗೆ ಹಬ್ಬ, ಮನಸಿಗೆ ಆನಂದವನ್ನು ನೀಡುತ್ತಿವೆ.

ಪ್ರವಾಸಿಗರಿಗೆ ನಿರಾಸೆ ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯದಲ್ಲಿ ಎತ್ತಿಪೋತಾ ಜಲಪಾತವಿದ್ರು ಕೂಡಾ ಅದನ್ನು ನೋಡುವ ಸೌಭಾಗ್ಯ ಮಾತ್ರ ಎಲ್ಲರಿಗೂ ಕಷ್ಟ. ಯಾಕಂದ್ರೆ ದಟ್ಟ ಅರಣ್ಯದಲ್ಲಿ ಈ ಜಲಪಾತಗಳಿರುವದರಿಂದ ಒಬ್ಬರೇ ಹೋಗುವದು ಕಷ್ಟಸಾದ್ಯ. ಸೂಕ್ತ ಮಾರ್ಗದರ್ಶನ ಮತ್ತು ಸರಿಯಾದ ರಸ್ತೆ ಇಲ್ಲದೇ ಇರುವುದರಿಂದ ಪ್ರವಾಸಿಗರಿಗೆ ಎತ್ತಿಪೋತ ಜಲಾಶಯಕ್ಕೆ ಹೋಗುವುದು ಕಷ್ಟವಾಗುತ್ತಿದೆ.

ಕೆಲ ದಿನಗಳ ಹಿಂದೆ ಇದೇ ಅರಣ್ಯದಲ್ಲಿ ಚಿರತೆ ಕೂಡಾ ಕಾಣಿಸಿಕೊಂಡಿದ್ದು, ಮತ್ತಷ್ಟು ಭಯ ಹೆಚ್ಚಾಗುವಂತೆ ಮಾಡಿದೆ. ಆದ್ರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರ ಮಾರ್ಗದರ್ಶನ ಸಹಾಯ ಪಡೆದು, ಎತ್ತಿಪೋತ ಜಲಪಾತಕ್ಕೆ ಹೋಗಿ ಬರಬಹುದಾಗಿದೆ. ಇದೀಗ ಎತ್ತಿಪೋತ ಜಲಾಶಯ, ಕುಂಚಾವರಂ ಅಭಯಾರಣ್ಯ, ಚಂದ್ರಪಳ್ಳಿ ಜಲಾಶಯಗಳನ್ನು ನೋಡಲು ಪ್ರವಾಸಿಗರಿಗೆ ಅವಕಾಶವಿದೆ. ಒಂದು ದಿನ ಪಿಕ್ ನಿಕ್ ರೀತಿಯಲ್ಲಿ ಬಂದು ಹೋಗಲು ಇದೀಗ ಪ್ರಸಕ್ತವಾಗಿದೆ. (ವಿಶೇಷ ಬರಹ- ಸಂಜಯ್. ಚಿಕ್ಕಮಠ)

Published On - 9:18 am, Sun, 5 July 20