ಅಮೆಜಾನ್​ ಸಂಸ್ಥೆಯಿಂದ ಚೀನಾಗೆ ಶಾಕ್​: ಭಾರತದಲ್ಲೇ ಡಿವೈಸ್​ ಉತ್ಪಾದನೆ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 17, 2021 | 8:53 PM

ಭಾರತದಲ್ಲೇ ವಸ್ತುಗಳನ್ನು ಉತ್ಪಾದನೆ ಮಾಡುವ ನಿರ್ಧಾರದಿಂದ ಭಾರತದ ಆರ್ಥಿಕತೆಗೆ ಉತ್ತೇಜನ ಸಿಗಲಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎನ್ನುವುದು ಅಮೆಜಾನ್​ ಸಂಸ್ಥೆಯ ಅಭಿಪ್ರಾಯ.

ಅಮೆಜಾನ್​ ಸಂಸ್ಥೆಯಿಂದ ಚೀನಾಗೆ ಶಾಕ್​: ಭಾರತದಲ್ಲೇ ಡಿವೈಸ್​ ಉತ್ಪಾದನೆ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆಜಾನ್​ ಸಂಸ್ಥೆ ತನ್ನ ಸಾಧನಗಳನ್ನು ಭಾರತದಲ್ಲೇ ಉತ್ಪಾದನೆ ಮಾಡುವ ನಿರ್ಧಾರಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ಕೇಂದ್ರ ಸರ್ಕಾರದ ಕನಸಿನ ಯೋಜನೆ ಮೇಕ್​ ಇನ್​ ಇಂಡಿಯಾಗೆ (Make-in-India) ಉತ್ತೇಜನ ಸಿಗಲಿದೆ. ಅಲ್ಲದೆ, ಚೀನಾ ವಸ್ತುಗಳನ್ನುಬಹಿಷ್ಕಾರ ಮಾಡುವ ಭಾರತೀಯರ ಆಂದೋಲನಕ್ಕೂ ಬೆಂಬಲ ಸಿಕ್ಕಂತಾಗುತ್ತಿದೆ.

ಮೊದಲ ಹಂತದಲ್ಲಿ ಸ್ಮಾರ್ಟ್​ ಟಿವಿ ಸ್ಟ್ರೀಮಿಂಗ್​ಗೆ ಬೇಕಾಗುವ ಫೈರ್​ ಟಿವಿ ಸ್ಟಿಕ್​ಗಳನ್ನು ಚೆನ್ನೈನಲ್ಲಿ ಉತ್ಪಾದನೆ ಮಾಡುತ್ತಿದೆ. ವರ್ಷಾಂತ್ಯಕ್ಕೆ ಚೆನ್ನೈನಲ್ಲಿ ಈ ಘಟಕ ಆರಂಭ ಆಗುವ ನಿರೀಕ್ಷೆ ಇದೆ. ಭಾರತಕ್ಕೆ ಬೇಕಾಗುವ ಫೈರ್​ ಟಿವಿ ಸ್ಟಿಕ್​​ಗಳಿಗಾಗಿ ಅಮೆಜಾನ್ ಸಂಸ್ಥೆ​ ಚೀನಾ ಹಾಗೂ ತೈವಾನ್​ ದೇಶದ ಮೇಲೆ ಅವಲಂಬಿತವಾಗಿದೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ ಭಾರತದಲ್ಲೇ ಇದರ ಘಟಕ ಆರಂಭಗೊಳ್ಳಲಿದೆ. ಬೇಡಿಕೆ ನೋಡಿಕೊಂಡು ಎಷ್ಟು ಉತ್ಪಾದನೆ ಮಾಡಬೇಕು ಎನ್ನುವುದು ನಿರ್ಧಾರವಾಗುತ್ತದೆ ಎಂದು ಅಮೆಜಾನ್​ ತನ್ನ ಬ್ಲಾಗ್​ನಲ್ಲಿ ತಿಳಿಸಿದೆ.

ಭಾರತದಲ್ಲೇ ವಸ್ತುಗಳನ್ನು ಉತ್ಪಾದನೆ ಮಾಡುವ ನಿರ್ಧಾರದಿಂದ ಭಾರತದ ಆರ್ಥಿಕತೆಗೆ ಉತ್ತೇಜನ ಸಿಗಲಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎನ್ನುವುದು ಅಮೆಜಾನ್​ ಸಂಸ್ಥೆಯ ಅಭಿಪ್ರಾಯ.

ಅಮೆಜಾನ್​ ನಿರ್ಧಾರವನ್ನು ಸ್ವಾಗತ ಮಾಡಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್​ ಪ್ರಸಾದ್​, ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಅವಧಿಯಲ್ಲಿ ಭಾರತ ದೊಡ್ಡ ದೊಡ್ಡ ಹೂಡಿಕೆಗಳನ್ನು ಪಡೆದಿದೆ. ಅಮೆಜಾನ್​ ಇದಕ್ಕೆ ಹೊಸ ಸೇರ್ಪಡೆ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Explainer | ಅಮೆಜಾನ್ ಸಿಇಒ ಹುದ್ದೆಯಿಂದ ಬಿಜೊಸ್ ಕೆಳಗಿಳಿಯುತ್ತಿರುವುದೇಕೆ? ಇನ್ಮುಂದೆ ಕಂಪನಿ ಮುನ್ನಡೆಸುವವರು ಯಾರು?