ಚೀನಾ ಸಂಘರ್ಷ: ಪಕ್ಷಭೇದ ಮರೆತು ಭಾರತದ ಬೆಂಬಲಕ್ಕೆ ನಿಂತ ಅಮೆರಿಕನ್ನರು!

ವಾಷಿಂಗ್ಟನ್‌: ಭಾರತ ಮತ್ತು ಚೀನಾ ನಡುವೆ ಗಲ್ವಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಅಮೆರಿಕ, ಭಾರತಕ್ಕೆ ತನ್ನ ಬೆಂಬಲ ಸೂಚಿಸಿದೆ. ಹೌದು ಭಾರತ ಮತ್ತು ಚೀನಾಗಳು ಲಡಾಖ್ ‌ಬಳಿ ಗಡಿಯಲ್ಲಿ ಪರಸ್ಪರ ಸಂಘರ್ಷದ ಹಾದಿ ಹಿಡಿದಿವೆ. ಗಲ್ವಾನ್‌ನಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರು. ಇದಾದ ನಂತರ ಉಭಯ ದೇಶಗಳು ಪರಸ್ಪರ ಸಂಘರ್ಷದ ಹಾದಿ ಹಿಡಿದಿವೆ. ಈ ಸಂಬಂಧ ಮಾತುಕತೆ ನಡೆಯುತ್ತಿದೆಯಾದ್ರೂ ಯಾವುದೇ ಮಹತ್ವಪೂರ್ಣ ಬೆಳವಣಿಗೆಗಾಳಾಗಿಲ್ಲ. ಈ ನಡುವೆ ಅಂತಾಷ್ಟ್ರೀಯ ಸಮುದಾಯ ಚೀನಾ ವಿರುದ್ಧದ ಸಂಘರ್ಷದಲ್ಲಿ ಭಾರತಕ್ಕೆ ಬೆಂಬಲ […]

ಚೀನಾ ಸಂಘರ್ಷ: ಪಕ್ಷಭೇದ ಮರೆತು ಭಾರತದ ಬೆಂಬಲಕ್ಕೆ ನಿಂತ ಅಮೆರಿಕನ್ನರು!
Edited By:

Updated on: Aug 01, 2020 | 3:00 PM

ವಾಷಿಂಗ್ಟನ್‌: ಭಾರತ ಮತ್ತು ಚೀನಾ ನಡುವೆ ಗಲ್ವಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಅಮೆರಿಕ, ಭಾರತಕ್ಕೆ ತನ್ನ ಬೆಂಬಲ ಸೂಚಿಸಿದೆ.

ಹೌದು ಭಾರತ ಮತ್ತು ಚೀನಾಗಳು ಲಡಾಖ್ ‌ಬಳಿ ಗಡಿಯಲ್ಲಿ ಪರಸ್ಪರ ಸಂಘರ್ಷದ ಹಾದಿ ಹಿಡಿದಿವೆ. ಗಲ್ವಾನ್‌ನಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರು. ಇದಾದ ನಂತರ ಉಭಯ ದೇಶಗಳು ಪರಸ್ಪರ ಸಂಘರ್ಷದ ಹಾದಿ ಹಿಡಿದಿವೆ. ಈ ಸಂಬಂಧ ಮಾತುಕತೆ ನಡೆಯುತ್ತಿದೆಯಾದ್ರೂ ಯಾವುದೇ ಮಹತ್ವಪೂರ್ಣ ಬೆಳವಣಿಗೆಗಾಳಾಗಿಲ್ಲ.

ಈ ನಡುವೆ ಅಂತಾಷ್ಟ್ರೀಯ ಸಮುದಾಯ ಚೀನಾ ವಿರುದ್ಧದ ಸಂಘರ್ಷದಲ್ಲಿ ಭಾರತಕ್ಕೆ ಬೆಂಬಲ ಸೂಚಿಸುತ್ತಿವೆ. ಅದ್ರಲ್ಲೂ ಅಮೆರಿಕ ಭಾರತಕ್ಕೆ ಆನೆ ಬಲ ನೀಡುತ್ತಿದೆ. ಅಮೆರಿಕದ ಡೆಮಾಕ್ರೆಟಿಕ್‌ ಮತ್ತು ರಿಪಬ್ಲಿಕ್‌ ಪಕ್ಷಗಳ ಸೆನೆಟರ್‌ಗಳು ಮತ್ತು ಹೌಸ್‌ ಆಫ್‌ ರಿಪ್ರೆಸೆಂಟೇಟಿವ್‌ ಸದಸ್ಯರು ಪಕ್ಷ ಭೇದ ಮರೆತು ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.

ಈ ಸಂಬಂಧ ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಣ್‌ಜಿತ್‌ ಸಿಂಗ್‌ ಸಾಂಧು ಅವರೊಂದಿಗೆ ಪ್ರತಿದಿನವೂ ಪೋನ್‌ ಮುಖಾಂತರ ಭಾರತಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತದ ಜೊತೆ ನಾವಿದ್ದೇವೆ. ಅಂಜಬೇಡಿ, ಚೀನಾಕ್ಕೆ ಸೆಡ್ಡು ಹೊಡೆದಿರುವ ನಿಮ್ಮ ಕ್ರಮಕ್ಕೆ ನಮ್ಮ ಬೆಂಬಲವಿದೆ ಎಂದು ನೈತಿಕ ಬೆಂಬಲ ಸೂಚಿಸುತ್ತಿದ್ದಾರೆ.
ಭಾರತಕ್ಕೆ ಬೆಂಬಲ