ಬೆಂಗಳೂರು: ಜೆಡಿಎಸ್ ಶಾಸಕ ಹಾಗೂ ಹಿರಿಯ ಬಿಜೆಪಿ ಕಾರ್ಪೊರೇಟರ್ ನಡುವೆ ಆಂಬ್ಯುಲೆನ್ಸ್ಗಳ ವಿಷಯದಲ್ಲಿ ಶುರುವಾದ ವಾಗ್ವಾದ, ಹೊಡೆದಾಟದ ಹಂತ ತಲುಪಿದ ಪ್ರಸಂಗ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಮಂಗಳವಾರದಂದು ನಡೆಯಿತು.
ವಾಸ್ತವದಲ್ಲಿ, ವಾದ-ವಿವಾದ ಆರಂಭಗೊಂಡಿದ್ದು ಶಾಸಕ ರಮೇಶ್ ಗೌಡ ಹಾಗೂ ಮೇಯರ್ ಗೌತಮ್ ಕುಮಾರ್ ಮಧ್ಯೆ. ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದಾಗ ರಮೇಶ್, ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆಯಲ್ಲಿ ಆಂಬುಲೆನ್ಸ್ಗಳಿಲ್ಲ ಎಂದು ಹೇಳಿದರು. ಆವರ ಆರೋಪದಿಂದ ಕೊಂಚ ಸಂಯಮ ಕಳೆದುಕೊಂಡ ಮೇಯರ್, ಪಾಲಿಕೆಯಲ್ಲಿ 700 ಆಂಬುಲೆನ್ಸ್ಗಳಿವೆ ಎಂದು ಜೋರು ದನಿಯಲ್ಲಿ ಹೇಳಿದರು.
Published On - 6:13 pm, Tue, 28 July 20