ಮೈಸೂರು ಕಾರ್ಯದರ್ಶಿ ಕೊಲೆ ಕೇಸ್​: ಅಪ್ಪ ಕೊಲೆ ಆರೋಪಿ.. ಮಗಳು ಅನನ್ಯಾ ಭಟ್​ ಹೇಳೋದೇನು?

ಮೈಸೂರು: ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಖ್ಯಾತ ಗಾಯಕಿ ಅನನ್ಯಾ ಭಟ್​ ತಂದೆ ವಿಶ್ವನಾಥ ಭಟ್ (52) ಬಂಧನವಾಗಿದೆ. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಕೇಸ್​ನಲ್ಲಿ ವಿಶ್ವನಾಥ ಭಟ್ ಅರೆಸ್ಟ್​ ಆಗಿದ್ದಾರೆ. ಪರಶಿವಮೂರ್ತಿ ಪ್ರತಿ ತಿಂಗಳು ಕಮಿಷನ್‌ಗಾಗಿ ವಿಶ್ವನಾಥ ಭಟ್​ರನ್ನು ಪೀಡಿಸುತ್ತಿದ್ದರು ಎಂದು ಹೇಳಲಾಗಿದೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ಸಹ ನೀಡುತ್ತಿದ್ದರಂತೆ. ಇದರಿಂದ ಮನನೊಂದು ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್‌ರಿಂದ ಕೊಲೆಗೆ ಸುಪಾರಿ […]

ಮೈಸೂರು ಕಾರ್ಯದರ್ಶಿ ಕೊಲೆ ಕೇಸ್​: ಅಪ್ಪ ಕೊಲೆ ಆರೋಪಿ.. ಮಗಳು ಅನನ್ಯಾ ಭಟ್​ ಹೇಳೋದೇನು?
Edited By:

Updated on: Oct 28, 2020 | 1:55 PM

ಮೈಸೂರು: ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಖ್ಯಾತ ಗಾಯಕಿ ಅನನ್ಯಾ ಭಟ್​ ತಂದೆ ವಿಶ್ವನಾಥ ಭಟ್ (52) ಬಂಧನವಾಗಿದೆ. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಕೇಸ್​ನಲ್ಲಿ ವಿಶ್ವನಾಥ ಭಟ್ ಅರೆಸ್ಟ್​ ಆಗಿದ್ದಾರೆ.

ಪರಶಿವಮೂರ್ತಿ ಪ್ರತಿ ತಿಂಗಳು ಕಮಿಷನ್‌ಗಾಗಿ ವಿಶ್ವನಾಥ ಭಟ್​ರನ್ನು ಪೀಡಿಸುತ್ತಿದ್ದರು ಎಂದು ಹೇಳಲಾಗಿದೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ಸಹ ನೀಡುತ್ತಿದ್ದರಂತೆ. ಇದರಿಂದ ಮನನೊಂದು ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್‌ರಿಂದ ಕೊಲೆಗೆ ಸುಪಾರಿ ನೀಡಲಾಗಿತ್ತು ಎಂದು ಹೇಳಲಾಗಿದೆ.

ಇತ್ತ, ಅರೋಪಿ ವಿಶ್ವನಾಥ್ ಭಟ್​ರ ಮಗಳು ಹಾಗೂ ಖ್ಯಾತ ಗಾಯಕಿ ಅನನ್ಯಾ ಭಟ್‌ ತಮ್ಮ ತಂದೆಯವರಿಂದ ಕಳೆದ ಎರಡು ವರ್ಷಗಳಿಂದ ದೂರವಾಗಿದ್ದೇವೆ ಎಂದು ತಿಳಿಸಿದ್ದಾರೆ. ವಿಶ್ವನಾಥ್ ಭಟ್ ತಮ್ಮ ಪತ್ನಿ ಮತ್ತು ಮಗಳನ್ನು ಬಿಟ್ಟು ಬೇರೆಯಾಗಿರುವುದಾಗಿ ತಿಳಿದುಬಂದಿದೆ.

ಸಂಸ್ಕೃತ ಪಾಠಶಾಲೆ ಕಾರ್ಯದರ್ಶಿ ಕೊಲೆ ಕೇಸ್​: ಮೈಸೂರು ಪೊಲೀಸರ ಭರ್ಜರಿ ಬೇಟೆ, ಗಾಯಕಿ ಅನನ್ಯಾ ಭಟ್ ತಂದೆ ಸೆರೆ

Published On - 1:18 pm, Wed, 28 October 20