ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR.. B.L.ಸಂತೋಷ್ ಹೆಸರಲ್ಲಿ 30 ಲಕ್ಷ ವಂಚನೆ

|

Updated on: Jan 11, 2021 | 8:12 AM

ಸಿಸಿಬಿ ಕಸ್ಟಡಿಯಲ್ಲಿರುವ ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR ದಾಖಲಾಗಿದೆ.

ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR.. B.L.ಸಂತೋಷ್ ಹೆಸರಲ್ಲಿ 30 ಲಕ್ಷ ವಂಚನೆ
ಯುವರಾಜ್
Follow us on

ಬೆಂಗಳೂರು: ಸಿಸಿಬಿ ಕಸ್ಟಡಿಯಲ್ಲಿರುವ ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ B.L.ಸಂತೋಷ್ ಹೆಸರಿನಲ್ಲಿ ಬಿಲ್ಡರ್‌ ಇನಿತ್‌ಕುಮಾರ್ ಎಂಬುವವರಿಗೆ ವಂಚಿಸಿರುವ ಆರೋಪ ಯುವರಾಜ್ ವಿರುದ್ಧ ಕೇಳಿ ಬಂದಿದೆ.

ತಾನು B.L.ಸಂತೋಷ್ ಅಣ್ಣನ ಮಗನೆಂದು ಪರಿಚಯಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಯೂತ್ ಐಕಾನ್ ಮಾಡುವುದಾಗಿ ನಂಬಿಸಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮನ್ ಮಾಡುವುದಾಗಿ ಹೇಳಿ ಯುವರಾಜ್, ಇನಿತ್‌ಕುಮಾರ್​ನನ್ನು ನಂಬಿಸಿದ್ದಾನೆ. ಹಾಗೂ ಇದಕ್ಕಾಗಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ.

ಅಷ್ಟು ಹಣ ನನ್ನ ಬಳಿ ಇಲ್ಲ ಎಂದಿದ್ದಕ್ಕೆ ಕೊನೆಗೆ 30 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ಯುವರಾಜ್ ವಿರುದ್ಧ ಬಿಲ್ಡರ್ ಇನಿತ್‌ಕುಮಾರ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವರಾಜ್​ ಪ್ರಕರಣದಲ್ಲಿ ಸುಮಾರು 8-10 ಪ್ರಮುಖ ನಟಿಯರು ಭಾಗಿಯಾಗಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್