ವಿರುಷ್ಕಾ ದಂಪತಿಗೆ ಹೆಣ್ಣು ಮಗು; ಟ್ವಿಟರ್​ನಲ್ಲಿ ತೈಮೂರ್ ಮೀಮ್ ಟ್ರೆಂಡಿಂಗ್

ಅನುಷ್ಕಾ ಶರ್ಮಾ ಗರ್ಭಿಣಿ ಎಂಬುದು ಸುದ್ದಿಯಾದ ಹೊತ್ತಲ್ಲಿಯೂ ತೈಮೂರ್ ಹೆಸರು ಟ್ರೆಂಡ್ ಆಗಿತ್ತು.ಇದೀಗ ಹೆಣ್ಣು ಮಗು ಹುಟ್ಟಿರುವುದರಿಂದ ತೈಮೂರ್ ಜನಪ್ರಿಯತೆ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿರುವ ನೆಟ್ಟಿಗರು ಹಲವಾರು ಮೀಮ್​ಗಳನ್ನು ಶೇರ್ ಮಾಡಿದ್ದಾರೆ.

ವಿರುಷ್ಕಾ ದಂಪತಿಗೆ ಹೆಣ್ಣು ಮಗು; ಟ್ವಿಟರ್​ನಲ್ಲಿ ತೈಮೂರ್ ಮೀಮ್ ಟ್ರೆಂಡಿಂಗ್
ತೈಮೂರ್ ಮೀಮ್
ರಶ್ಮಿ ಕಲ್ಲಕಟ್ಟ Edited By:

Updated on: Jan 11, 2021 | 8:07 PM

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗೆ ಮಗು ಹುಟ್ಟಿರುವ ವಿಷಯ ಸದ್ಯದ ಟಾಪ್ ಟ್ರೆಂಡಿಂಗ್. ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ವಿರುಷ್ಕಾ ದಂಪತಿಗಳಿಗೆ ಶುಭಾಶಯ ಕೋರಿ ಟ್ವೀಟಿಸುತ್ತಿರುವ ಹೊತ್ತಿನಲ್ಲಿಯೇ ಬಾಲಿವುಡ್ ದಂಪತಿ ಕರೀನಾ ಕಪೂರ್ ಖಾನ್-ಸೈಫ್ ಅಲಿ ಖಾನ್ ಅವರ ಪುತ್ರ ತೈಮೂರ್ ಹೆಸರು ಟ್ರೆಂಡ್ ಆಗಿದೆ.

ಅಂದಹಾಗೆ ತೈಮೂರ್ ಮಾಧ್ಯಮಗಳ ಫೇವರಿಟ್ ಮಗು. ಮುದ್ದಾದ ಆ ಮಗುವಿನ ಫೋಟೊ ಕ್ಲಿಕ್ಕಿಸಲು, ಆತನ ತುಂಟಾಟಗಳನ್ನು ವಿಡಿಯೊದಲ್ಲಿ ಸೆರೆ ಹಿಡಿಯಲು ಮಾಧ್ಯಮಗಳು ಮುಗಿಬೀಳುತ್ತವೆ. ಪಾಪರಾಜಿಗಳ ಕಣ್ತಪ್ಪಿಸಿ ಕರೀನಾ ತೈಮೂರ್​ನ್ನು ಕರೆದುಕೊಂಡು ಹೋಗುತ್ತಿರುವ ವಿಡಿಯೊ, ಫೋಟೊ ಆಗೊಮ್ಮ ಈಗೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುತ್ತದೆ.

ಅನುಷ್ಕಾ ಶರ್ಮಾ ಗರ್ಭಿಣಿ ಎಂಬುದು ಸುದ್ದಿಯಾದ ಹೊತ್ತಲ್ಲಿಯೂ ತೈಮೂರ್ ಹೆಸರು ಟ್ರೆಂಡ್ ಆಗಿತ್ತು.ಇದೀಗ ಹೆಣ್ಣು ಮಗು ಹುಟ್ಟಿರುವುದರಿಂದ ತೈಮೂರ್ ಜನಪ್ರಿಯತೆ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿರುವ ನೆಟ್ಟಿಗರು ಹಲವಾರು ಮೀಮ್​ಗಳನ್ನು ಶೇರ್ ಮಾಡಿದ್ದಾರೆ.

ವಿರಾಟ್-ಅನುಷ್ಕಾ ದಂಪತಿಗೆ ನೆಟ್ಟಿಗರಿಂದ ಶುಭಾಶಯಗಳ ಮಹಾಪೂರ

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Loading...
Unable to load recommendations.
Follow Us