ಬಸ್ ಸೇವೆ ಇಲ್ಲದೆ ಸ್ವಗ್ರಾಮಕ್ಕೆ ತೆರಳಲು ಯೋಧ ದಂಪತಿ ಪರದಾಟ

ಬೆಳಗಾವಿ: ಕಿಲ್ಲರ್ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಇಂದು ಲಾಕ್​ಡೌನ್ ಮಾಡಲಾಗಿದೆ. ಹೀಗಾಗಿ ಬಸ್ ಸೇವೆ ಇಲ್ಲ. ಆದರೆ ಪತ್ನಿ ಸಮೇತ ಆಗಮಿಸಿದ ಯೋಧ ಬಸ್​ಗಾಗಿ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ. ಡೆಹ್ರಾಡೂನ್ ನಿಂದ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ್ದ ದಂಪತಿ. ಬೆಂಗಳೂರಿನಿಂದ ಬೆಳಗಾವಿಗೆ ಕ್ಯಾಬ್​ನಲ್ಲಿ ಬಂದಿದ್ದಾರೆ. ಕ್ಯಾಬ್‌ನವನು ಮಂಗಸೂಳಿ ಗ್ರಾಮಕ್ಕೆ ಹೋಗಲು ನಕಾರ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿ ಬಸ್ ನಿಲ್ದಾಣದಲ್ಲೇ ಇಳಿದುಕೊಂಡ ಯೋಧ ಅರುಣ್ ಪಾಟೀಲ್ ಹಾಗೂ ಪತ್ನಿ ಕಾಗವಾಡ ತಾಲೂಕಿನ ಮಂಗಸೂಳಿ […]

ಬಸ್ ಸೇವೆ ಇಲ್ಲದೆ ಸ್ವಗ್ರಾಮಕ್ಕೆ ತೆರಳಲು ಯೋಧ ದಂಪತಿ ಪರದಾಟ

Updated on: Jul 05, 2020 | 8:48 AM

ಬೆಳಗಾವಿ: ಕಿಲ್ಲರ್ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಇಂದು ಲಾಕ್​ಡೌನ್ ಮಾಡಲಾಗಿದೆ. ಹೀಗಾಗಿ ಬಸ್ ಸೇವೆ ಇಲ್ಲ. ಆದರೆ ಪತ್ನಿ ಸಮೇತ ಆಗಮಿಸಿದ ಯೋಧ ಬಸ್​ಗಾಗಿ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.

ಡೆಹ್ರಾಡೂನ್ ನಿಂದ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ್ದ ದಂಪತಿ. ಬೆಂಗಳೂರಿನಿಂದ ಬೆಳಗಾವಿಗೆ ಕ್ಯಾಬ್​ನಲ್ಲಿ ಬಂದಿದ್ದಾರೆ. ಕ್ಯಾಬ್‌ನವನು ಮಂಗಸೂಳಿ ಗ್ರಾಮಕ್ಕೆ ಹೋಗಲು ನಕಾರ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿ ಬಸ್ ನಿಲ್ದಾಣದಲ್ಲೇ ಇಳಿದುಕೊಂಡ ಯೋಧ ಅರುಣ್ ಪಾಟೀಲ್ ಹಾಗೂ ಪತ್ನಿ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಹೋಗಲು ಪರದಾಡುತ್ತಿದ್ದಾರೆ. ತುರ್ತು ರಜೆ ಮೇಲೆ ಗ್ರಾಮಕ್ಕೆ ಹಿಂತಿರುಗಿರುವ ಯೋಧ ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಾಹನದ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.