ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾದ ಆರ್ಭಟ ದಿನೇ ದಿನೆ ಹೆಚ್ಚುತ್ತಲೇ ಇದೆ. ಈ ಗ್ರಾಮವು ಸೀಲ್ಡೌನ್, ಆ ಪಟ್ಟಣದಲ್ಲಿ ಕೊರೊನಾ ಕೇಸ್ ಹೀಗೆ ಹತ್ತು ಹಲವಾರು ಕೋವಿಡ್ ಪ್ರಕರಣಗಳಿಂದ ಜಿಲ್ಲೆಯ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ.
ಇದೀಗ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದ ಆಶಾ ಕಾರ್ಯಕರ್ತೆ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಪೇಷಂಟ್ ನಂಬರ್ 11414 ಎಂದು ಗುರುತಿಸಲಾದ ನಲವತ್ತು ವರ್ಷದ ಆಶಾ ಕಾರ್ಯಕರ್ತೆ ಕಳೆದ ಹಲವು ದಿನಗಳಿಂದ ಕೊರೊನಾ ಬಗ್ಗೆ ಮಾಹಿತಿ ಸಂಗ್ರಹಿಸಲು ಗ್ರಾಮದಲ್ಲೆಲ್ಲಾ ಓಡಾಡಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋದಾಗ ಸೋಂಕು ಪತ್ತೆಯಾಗೆದೆ. ಆದರೆ, ಆಶಾ ಕಾರ್ಯಕರ್ತೆಗೆ ಸೋಂಕು ಹೇಗೆ ತಗಲಿತು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಹಾಗಾಗಿ ಗ್ರಾಮಸ್ಥರಲ್ಲಿ ಇದೀಗ ಆತಂಕ ಮನೆಮಾಡಿದೆ.
ಜಿಲ್ಲಾ ಪೊಲೀಸರಿಗೂ ವಕ್ಕರಿಸಿದ ವೈರಸ್
ಇದೀಗ ಜಿಲ್ಲೆಯಲ್ಲಿ ಮತ್ತಿಬ್ಬರು ಪೊಲೀಸರಿಗೂ ವೈರಸ್ ವಕ್ಕರಿಸಿದೆ. ಜಿಲ್ಲೆಯ ಗ್ರಾಮಾಂತರ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಱಂಡಮ್ ಟೆಸ್ಟ್ ವೇಳೆ ಸೋಂಕು ದೃಢವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
Published On - 9:29 am, Sun, 28 June 20