ನದಿ ಕೊಳ್ಳ ದಾಟಿ ಸೇವೆ ಸಲ್ಲಿಸ್ತಿದ್ದಾರೆ ಈ ಆಶಾ ಕಾರ್ಯಕರ್ತೆಯರು

| Updated By: ಸಾಧು ಶ್ರೀನಾಥ್​

Updated on: Jul 07, 2020 | 11:09 AM

ಮಂಗಳೂರು: ಕೊರೊನಾ ಹೆಮ್ಮಾರಿಯ ಅಟ್ಟಹಾಸದ ನಡುವೆಯೂ ಕೊವಿಡ್‌ ವಾರಿಯರ್ಸ್‌ ತಮ್ಮ ನಿಸ್ವಾರ್ಥ ಸೇವೆ ಮತ್ತು ದೈರ್ಯದಿಂದ ಸಾಮನ್ಯ ಜನರ ಸೇವೆ ಮಾಡುತ್ತಿದ್ದಾರೆ. ಬೆಂಗಳೂರಿನಂಥ ಮೆಟ್ರೋಗಳಲ್ಲಿ ಕೆಲ ವೈದ್ಯರು ಮತ್ತು ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಿರುವ ಘಟನೆಗಳಿವೆ. ಆದ್ರೆ ದೂರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನ ಸೇವೆ ಮಾಡುತ್ತಿರುವ ಕೋವಿಡ್‌ ವಾರಿಯರ್ಸ್‌ ಈಗ ಜನಮನ ಗೆಲ್ಲುತ್ತಿದ್ದಾರೆ. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಟ್ಟ ಅರಣ್ಯ ಪ್ರದೇಶದ ಒಳಗೆ ಇರುವ […]

ನದಿ ಕೊಳ್ಳ ದಾಟಿ ಸೇವೆ ಸಲ್ಲಿಸ್ತಿದ್ದಾರೆ ಈ ಆಶಾ ಕಾರ್ಯಕರ್ತೆಯರು
Follow us on

ಮಂಗಳೂರು: ಕೊರೊನಾ ಹೆಮ್ಮಾರಿಯ ಅಟ್ಟಹಾಸದ ನಡುವೆಯೂ ಕೊವಿಡ್‌ ವಾರಿಯರ್ಸ್‌ ತಮ್ಮ ನಿಸ್ವಾರ್ಥ ಸೇವೆ ಮತ್ತು ದೈರ್ಯದಿಂದ ಸಾಮನ್ಯ ಜನರ ಸೇವೆ ಮಾಡುತ್ತಿದ್ದಾರೆ. ಬೆಂಗಳೂರಿನಂಥ ಮೆಟ್ರೋಗಳಲ್ಲಿ ಕೆಲ ವೈದ್ಯರು ಮತ್ತು ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಿರುವ ಘಟನೆಗಳಿವೆ. ಆದ್ರೆ ದೂರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನ ಸೇವೆ ಮಾಡುತ್ತಿರುವ ಕೋವಿಡ್‌ ವಾರಿಯರ್ಸ್‌ ಈಗ ಜನಮನ ಗೆಲ್ಲುತ್ತಿದ್ದಾರೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಟ್ಟ ಅರಣ್ಯ ಪ್ರದೇಶದ ಒಳಗೆ ಇರುವ ಗ್ರಾಮಗಳಿಗೆ ತೆರಳಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಅದ್ರಲ್ಲೂ ನಕ್ಸಲ್‌ ಪೀಡಿತ ಗ್ರಾಮಗಳಲ್ಲಿ ಯಾವುದೇ ರಸ್ತೆಗಳಿಲ್ಲದ ಸ್ಥಳಗಳಲ್ಲಿ ರಭಸದಿಂದ ಹರಿಯುವ ನದಿ ಕೊಳ್ಳಗಳನ್ನ ದಾಟಿ ಕೊರಗ ಕಾಲೋನಿಯಲ್ಲಿ ಈ ಕಾರ್ಯಕರ್ತೆಯರು ಅಲ್ಲಿನ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ದಟ್ಟ ಅರಣ್ಯದೊಳಗಿರುವ ಈ ಕೊರೊಗ ಕಾಲೋನಿಗೆ ಹಗ್ಗದ ಸೇತುವೆ ಅಥವಾ ಕಾಲು ಸೇತುವೆ ದಾಟಿ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇಲ್ಲಿನ 40ಕ್ಕೂ ಹೆಚ್ಚು ಕುಟುಂಬಗಳಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣ ಕಂಡು ಬಂದಿದೆ. ಹೀಗಾಗಿ ಮಳೆಯಲ್ಲೂ ಹೊಳೆಗಳನ್ನು ದಾಟಿ ಆಶಾ ಕಾರ್ಯಕರ್ತೆಯರು ಈ ಗ್ರಾಮಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.