AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಬಂಧುಗಳು.. ಇವರೇ ಮುಕ್ತಿದಾತರು

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಅಂತ್ಯಸಂಸ್ಕಾರ ಮಾಡುವ ವಿಚಾರಕ್ಕೆ ಸಂಬಂಧಿಸಿ ಬಹುತೇಕ ಕಡೆ ಅಮಾನವೀಯ ಘಟನೆಗಳು ನಡೆದಿವೆ. ಆ ಅಂತ್ಯ ಸಂಸ್ಕಾರವನ್ನು ನೋಡಿದ ಜನ ಕೆಂಡಾಮಂಡಲವಾಗಿದುಂಟು. ಇಷ್ಟೆನಾ ಮನುಷ್ಯ ಜೀವನ ಎಂದು ಜಿಗುಫ್ಸೆ ಬಂದಿದುಂಟು. ಬಿಬಿಎಂಪಿ, ಆರೋಗ್ಯ ಸಿಬ್ಬಂದಿ ಸೋಂಕಿತರ ದೇಹವನ್ನು ಅಂತ್ಯ ಸಂಸ್ಕಾರ ಮಾಡುವುದರಲ್ಲಿ ಬಹುತೇಕ ಬಾರಿ ಎಡವಿದ್ದಾರೆ. ಬಳ್ಳಾರಿ, ದಾವಣಗೆರೆ ಹೀಗೆ ಅನೇಕ ಕಡೆ ನಡೆದ ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಆಕ್ರೋಶಗಳು ಕೂಡ ವ್ಯಕ್ತವಾಗಿದ್ದವು. ಆದ್ರೆ ಇಲ್ಲೊಂದು ತಂಡ ಬೆಂಗಳೂರಿನ ಪಾಲಿಗೆ […]

ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಬಂಧುಗಳು.. ಇವರೇ ಮುಕ್ತಿದಾತರು
ಆಯೇಷಾ ಬಾನು
|

Updated on:Jul 07, 2020 | 9:41 AM

Share

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಅಂತ್ಯಸಂಸ್ಕಾರ ಮಾಡುವ ವಿಚಾರಕ್ಕೆ ಸಂಬಂಧಿಸಿ ಬಹುತೇಕ ಕಡೆ ಅಮಾನವೀಯ ಘಟನೆಗಳು ನಡೆದಿವೆ. ಆ ಅಂತ್ಯ ಸಂಸ್ಕಾರವನ್ನು ನೋಡಿದ ಜನ ಕೆಂಡಾಮಂಡಲವಾಗಿದುಂಟು. ಇಷ್ಟೆನಾ ಮನುಷ್ಯ ಜೀವನ ಎಂದು ಜಿಗುಫ್ಸೆ ಬಂದಿದುಂಟು.

ಬಿಬಿಎಂಪಿ, ಆರೋಗ್ಯ ಸಿಬ್ಬಂದಿ ಸೋಂಕಿತರ ದೇಹವನ್ನು ಅಂತ್ಯ ಸಂಸ್ಕಾರ ಮಾಡುವುದರಲ್ಲಿ ಬಹುತೇಕ ಬಾರಿ ಎಡವಿದ್ದಾರೆ. ಬಳ್ಳಾರಿ, ದಾವಣಗೆರೆ ಹೀಗೆ ಅನೇಕ ಕಡೆ ನಡೆದ ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಆಕ್ರೋಶಗಳು ಕೂಡ ವ್ಯಕ್ತವಾಗಿದ್ದವು. ಆದ್ರೆ ಇಲ್ಲೊಂದು ತಂಡ ಬೆಂಗಳೂರಿನ ಪಾಲಿಗೆ ಕರುಣಾಮಯಿಗಳಾಗಿದ್ದಾರೆ. ಕೋವಿಡ್​ನಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು.

ಎಲ್ಲಾ ಜಾತಿ ಧರ್ಮ ಮೀರಿ ಮಾನವೀಯತೆ ಸಾರಿದ್ದಾರೆ. ಕುಟುಂಬದವರು ಬಾರದೇ ಇದ್ದರೇ ಅವರ ಪಾಲಿಗೆ ಇವರೇ ಸಂಬಂಧಿಕರಾಗಿ ಕೊರೊನಾದಿಂದ ಮೃತಪಟ್ಟ ಎಷ್ಟೋ ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ಮಾಡಿ ಮುಕ್ತಿ ಕೊಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕಿತರು ಪಕ್ಕ ಬಂದ್ರೆ ಸಾಕು ಸಾವು ನಮ್ಮದೆ ಎಂದು ಓಡುವ ಪರಿಸ್ಥಿತಿ ಉಂಟಾಗಿದೆ.

ಈ ನಡುವೆ ಅಂತ್ಯ ಸಂಸ್ಕಾರ ಮಾಡಬೇಕಿದ್ದ ಸಂಬಂಧಿಕರಿಗೆ ಕೊರೊನಾದಿಂದ ಮೃತಪಟ್ಟವರ ಶವವನ್ನು ಹಸ್ತಾತರಿಸುವಂತಿಲ್ಲ. ಯಾಕೆಂದರೆ ಸೋಂಕು ಮತ್ತಷ್ಟು ಹರಡುವ ಭೀತಿ ಇದೆ. ಆದರೆ ಸರ್ಕಾರ ಕೂಡ ಮೃತರ ಅಂತ್ಯ ಸಂಸ್ಕಾರವನ್ನು ಸರಿಯಾದ ನಿಯಮ ಪಾಲನೆಯಿಂದ ಮಾಡುತ್ತಿಲ್ಲ. ಹೇಗೆಂದರೆ ಹಾಗೆ ಮೃತದೇಹವನ್ನು ಎಳೆಯಲಾಗುತ್ತಿದೆ. ಇದನ್ನು ಗಮನಿಸಿದ ತಂಡವೊಂದು ಸ್ವಯಂ ಪ್ರೇರಿತರಾಗಿ ಮೃತರ ಧರ್ಮದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.

ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ಇಲ್ಲಿಯವರಗೆ ಬೆಂಗಳೂರಲ್ಲಿ ಕೊರೊನಾ ದಿಂದ ಮೃತಪಟ್ಟ 100ಕ್ಕೂ ಹೆಚ್ಚು ಜನರ ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ. ಹಲವು ಸವಾಲುಗಳ ನಡುವೆ ಅಂತ್ಯಕ್ರಿಯೆ ನಡೆಸುವ ಈ ತಂಡಕ್ಕೆ ಕೆಲವೊಮ್ಮೆ ವಿರೋಧ, ಅಂತ್ಯಸಂಸ್ಕಾರ ನಡೆಸಲು ಹೋದಾಗ ಕಲ್ಲು ತೂರಾಟ ಕೂಡ ನಡೆದಿದೆ. ಇದೆಲ್ಲವನ್ನೂ ಮೀರಿ ಈ ತಂಡ ಕೆಲಸ ಮುಂದುವರೆಸಿದೆ. ತಮ್ಮ ಆರೋಗ್ಯ, ಕಾಳಜಿ ಎಲ್ಲವನ್ನು ಬದಿಗಿಟ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪುಣ್ಯದ ಕಾರ್ಯ ಮಾಡುತ್ತಿದೆ.

Published On - 9:36 am, Tue, 7 July 20