AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹುಕೋಟಿ ಅವ್ಯವಹಾರ ಆರೋಪಿ ನಿಗೂಢ ಸಾವು, ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆ!

ಬೆಂಗಳೂರು: ಆತ ಬಹುದೊಡ್ಡ ಕೋ-ಆಪರೇಟಿವ್ ಬ್ಯಾಂಕ್​ನ ಮಾಜಿ ಸಿಇಒ. ಹಲವು ವರ್ಷಗಳ ಕಾಲ ಅಧ್ಯಕ್ಷನಾಗಿದ್ದ ಆತನ ವಿರುದ್ಧ ಬಹುಕೋಟಿ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹೈಕೋರ್ಟ್ ಸೂಚನೆ ಮೇರೆಗೆ ತನಿಖೆ ನಡೀತಿತ್ತು, ಇದ್ರ ಬೆನ್ನಲ್ಲೇ ಮಾಜಿ ಸಿಇಒ ಇಹಲೋಕವನ್ನೇ ತ್ಯಜಿಸಿದ್ದಾನೆ. ವಾಸುದೇವ್ ಮಯ್ಯ. ಚಿಕ್ಕಲಸಂದ್ರದ ನಿವಾಸಿಯಾದ ಈತ ಶ್ರೀ ಗುರುರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್​ನ ಮಾಜಿ ಸಿಇಒ. ಆದ್ರೆ ಈತ ಕೆಲ್ಸ ಮಾಡ್ತಿದ್ದಾಗ ಬ್ಯಾಂಕ್ ವಿರುದ್ಧ ಬಹುಕೋಟಿ ಹಗರಣದ ಆರೋಪ ಕೇಳಿ ಬಂದಿತ್ತು. ಅದ್ರಲ್ಲಿ ವಾಸುದೇವ್ […]

ಬಹುಕೋಟಿ ಅವ್ಯವಹಾರ ಆರೋಪಿ ನಿಗೂಢ ಸಾವು, ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆ!
ಆಯೇಷಾ ಬಾನು
|

Updated on:Jul 07, 2020 | 9:42 AM

Share

ಬೆಂಗಳೂರು: ಆತ ಬಹುದೊಡ್ಡ ಕೋ-ಆಪರೇಟಿವ್ ಬ್ಯಾಂಕ್​ನ ಮಾಜಿ ಸಿಇಒ. ಹಲವು ವರ್ಷಗಳ ಕಾಲ ಅಧ್ಯಕ್ಷನಾಗಿದ್ದ ಆತನ ವಿರುದ್ಧ ಬಹುಕೋಟಿ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹೈಕೋರ್ಟ್ ಸೂಚನೆ ಮೇರೆಗೆ ತನಿಖೆ ನಡೀತಿತ್ತು, ಇದ್ರ ಬೆನ್ನಲ್ಲೇ ಮಾಜಿ ಸಿಇಒ ಇಹಲೋಕವನ್ನೇ ತ್ಯಜಿಸಿದ್ದಾನೆ.

ವಾಸುದೇವ್ ಮಯ್ಯ. ಚಿಕ್ಕಲಸಂದ್ರದ ನಿವಾಸಿಯಾದ ಈತ ಶ್ರೀ ಗುರುರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್​ನ ಮಾಜಿ ಸಿಇಒ. ಆದ್ರೆ ಈತ ಕೆಲ್ಸ ಮಾಡ್ತಿದ್ದಾಗ ಬ್ಯಾಂಕ್ ವಿರುದ್ಧ ಬಹುಕೋಟಿ ಹಗರಣದ ಆರೋಪ ಕೇಳಿ ಬಂದಿತ್ತು. ಅದ್ರಲ್ಲಿ ವಾಸುದೇವ್ ಮಯ್ಯ ಮುಖ್ಯ ಆರೋಪಿಯಾಗಿದ್ದ. ಆದ್ರೆ ಅದೇನಾಯ್ತೋ ಗೊತ್ತಿಲ್ಲ. ನಿನ್ನೆ ಅನಾಮತ್ತಾಗಿ ಶವವಾಗಿ ಪತ್ತೆಯಾಗಿದ್ದಾನೆ.

ಆತ್ಮಹತ್ಯೆ ಮಾಡ್ಕೊಂಡ್ರಾ ಗುರುರಾಘವೇಂದ್ರ ಬ್ಯಾಂಕ್ ಮಾಜಿ ಸಿಇಒ? ಅಂದ್ಹಾಗೇ, ಪೂರ್ಣಪ್ರಜ್ಞಾ ಲೇಔಟ್​ನ ನಿರ್ಜನ ರಸ್ತೆಯಲ್ಲಿ ತಮ್ಮ ಕಾರಿನಲ್ಲಿಯೇ ವಾಸುದೇವ್ ಮಯ್ಯ ಉಸಿರು ಚೆಲ್ಲಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ನಿನ್ನೆ ಮಧ್ಯಾಹ್ನ 2 ಗಂಟೆಗೆ ಕಾರಿನಲ್ಲಿ ಬಂದಿದ್ದ ವಾಸುದೇವ್ ಮಯ್ಯ ಒಂದು ಗಂಟೆ ವಾಕ್ ಮಾಡಿದ್ರಂತೆ. ನಂತ್ರ ಮದ್ಯ ಸೇವಿಸಿದ್ರಂತೆ. ನಂತ್ರ ಹಲವು ಗಂಟೆ ಕಳೆದ್ರೂ ವಾಪಸ್ ಬಂದಿರಲಿಲ್ವಂತೆ. ಇದ್ರಿಂದ ಅನುಮಾನಗೊಂಡ ಸ್ಥಳೀಯರು, ಇಲ್ಲಿ ಹಾವುಗಳ ಕಾಟ ಇದೆ ಇಲ್ಲಿಂದ ಹೋಗಿ ಅಂತಾ ಹೇಳೋಕೆ ಬಂದಿದ್ರಂತೆ. ಆದ್ರೆ ಅಷ್ಟರಲ್ಲೇ ವಾಸುದೇವ್ ಮಯ್ಯ ಜೀವ ಚೆಲ್ಲಿ ಅಂಗಾತ ಮಲಗಿದ್ದ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ 12 ಪುಟಗಳ ದಾಖಲೆ ಸಿಕ್ಕಿದೆ.

ಇನ್ನು ವಾಸುದೇವ್ ಮಯ್ಯ ವಿರುದ್ಧ 1400 ಕೋಟಿ ಅವ್ಯವಹಾರದ ಆರೋಪವಿದೆ. ಇದೇ ವಿಷಯಕ್ಕೆ ಜೂನ್ 18ರಂದು ವಾಸುದೇವ್ ಮಯ್ಯ, ಗುರುರಾಘವೇಂದ್ರ ಬ್ಯಾಂಕ್​ನ ಕೇಂದ್ರ ಕಚೇರಿ ಹಾಗೂ ಅಧ್ಯಕ್ಷನ ಮನೆ ಸೇರಿದಂತೆ 5 ಕಡೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಹೆಚ್ಚಿನ ಬಡ್ಡಿಯ ಆಮಿಷ ನೀಡಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿಸಿಕೊಂಡು, ಯಾವುದೇ ದಾಖಲೆ ಪಡೆಯದೆ ನೂರಾರು ಕೋಟಿ ಲೋನ್ ನೀಡಿರೋದು ಬೆಳಕಿಗೆ ಬಂದಿತ್ತು. ಈ ಮಾಹಿತಿ ಆಧರಿಸಿ ಎಸಿಬಿ ಎಸ್​ಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ಲೋನ್ ಪಡೆದವ್ರ ಮೇಲೆ ದಾಳಿ ಮಾಡಲಾಗಿತ್ತು. ಇನ್ನು ಯಾವಾಗ ಕೇಸ್ ಸೀರಿಯಸ್ ಆಯ್ತೋ ಹೈಕೋರ್ಟ್ ಸಿಐಡಿಗೆ ವರ್ಗಾಯಿಸಿತ್ತು. ಇದ್ರ ಬೆನ್ನಲ್ಲೇ ಇದೀಗ ವಾಸುದೇವ್ ಮಯ್ಯ ಸಾವಿಗೀಡಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸದ್ಯ ಪೊಲೀಸರು ಅಸಹಜ ಸಾವು ಅಂತಾ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಘಟನಾ ಸ್ಥಳಕ್ಕೆ ಬಂದಿದ್ದ ಎಫ್​ಎಸ್​ಎಲ್ ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಅಂತಾ ಕಂಡು ಬಂದ್ರೂ ಕೂಡ ಪೊಲೀಸರ ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.

Published On - 8:11 am, Tue, 7 July 20