ಅಕ್ರಮ ಸಂಬಂಧ: ಪ್ರಶ್ನಿಸಲು ಹೋದ ಪತಿ ಮೇಲೆ ನಾಯಿ ಛೂ ಬಿಟ್ಟ ಕಿರಾತಕ!
ಹುಬ್ಬಳ್ಳಿ: ಅಕ್ರಮ ಸಂಬಂಧ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತಿರಾಯನ ಮೇಲೆ ನಾಯಿಯನ್ನು ಛೂಬಿಟ್ಟು, ಹಲ್ಲೆ ಮಾಡಿರುವ ಘಟನೆ ಕೇಶ್ವಾಪುರದ ಮುಕ್ತಿಧಾಮದ ಬಳಿ ನಡೆದಿದೆ. ಪತಿ ಸಂತೋಷ್ ಮೇಲೆ ಪತ್ನಿ ರೂಪಾದೇವಿ ಹಾಗೂ ಪ್ರಿಯಕರ ಸನ್ನಿ ಹಲ್ಲೆ ಮಾಡಿದ್ದಾರೆ. ರೂಪಾದೇವಿ ಜೊತೆ ಸನ್ನಿ ಎಂಬುವನು ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಈ ವಿಷಯವನ್ನ ಪ್ರಶ್ನಿಸಲು ಹೋದಾಗ ಹಲ್ಲೆ ಮಾಡಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದ ಸಂತೋಷ್ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಸಂತೋಷ್ ಕಾಂಬ್ಳೆ […]
Follow us on
ಹುಬ್ಬಳ್ಳಿ: ಅಕ್ರಮ ಸಂಬಂಧ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತಿರಾಯನ ಮೇಲೆ ನಾಯಿಯನ್ನು ಛೂಬಿಟ್ಟು, ಹಲ್ಲೆ ಮಾಡಿರುವ ಘಟನೆ ಕೇಶ್ವಾಪುರದ ಮುಕ್ತಿಧಾಮದ ಬಳಿ ನಡೆದಿದೆ. ಪತಿ ಸಂತೋಷ್ ಮೇಲೆ ಪತ್ನಿ ರೂಪಾದೇವಿ ಹಾಗೂ ಪ್ರಿಯಕರ ಸನ್ನಿ ಹಲ್ಲೆ ಮಾಡಿದ್ದಾರೆ.
ರೂಪಾದೇವಿ ಜೊತೆ ಸನ್ನಿ ಎಂಬುವನು ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಈ ವಿಷಯವನ್ನ ಪ್ರಶ್ನಿಸಲು ಹೋದಾಗ ಹಲ್ಲೆ ಮಾಡಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದ ಸಂತೋಷ್ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಸಂತೋಷ್ ಕಾಂಬ್ಳೆ ಸೇರಿ ಇಬ್ಬರಿಗೆ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.