ಕೊರೊನಾ ವೈರಸ್​ಗೆ ಚಿಕಿತ್ಸೆ ಹೆಲ್ತ್​ ಇನ್ಷೂರೆನ್ಸ್​ ವ್ಯಾಪ್ತಿಗೆ ಒಳಪಡುತ್ತದಾ?

ಸಾಧು ಶ್ರೀನಾಥ್​

|

Updated on:Mar 06, 2020 | 12:20 PM

ಬೆಂಗಳೂರು: ಡ್ರ್ಯಾಗನ್​ ಸೋಂಕು ಅಂದ್ರೆ ಕೊವಿಡ್ 19 ಸೋಂಕು ಅಕ್ಷರಷಃ ಸಾಂಕ್ರಾಮಿಕವಾಗಿದ್ದು ಆತಂಕ ಮೂಡಿಸಿದೆ. ಈ ಮಧ್ಯೆ ಸೋಂಕು ಪೀಡಿತರು ಮತ್ತು ಸಾರ್ವಜನಿಕರಲ್ಲಿ ಒಂದು ದೊಡ್ಡ ಅತಂಕ ಮನೆಮಾಡಿದೆ. ಕೊರೊನಾ ವೈರಸ್ ಚಿಕಿತ್ಸೆಗೆ ಅಸಲಿಗೆ ಮದ್ದೇ ಇಲ್ಲವಾದರೂ ಅದು ಇದು ಅಂತ ಚಿಕಿತ್ಸೆ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಅದು ದುಬಾರಿಯೂ ಆಗುತ್ತಿವೆ ಎಂಬ ಅಳಲು ಸಾರ್ವಜನಿಕರಲ್ಲಿ ಮೂಡಿವೆ. ಈ ಕೊರೊನಾ ವೈರಸ್​ಗೆ ಚಿಕಿತ್ಸೆಗೆಂದು ಸಾಮಾನ್ಯ ಆರೋಗ್ಯ ವಿಮೆ ಪಾಲಿಸಿಗಳು ಅನ್ವಯವಾಗುತ್ತವಾ? ಎಂದು ಜನ ಪ್ರಶ್ನಿಸತೊಡಗಿದ್ದಾರೆ. […]

ಕೊರೊನಾ ವೈರಸ್​ಗೆ ಚಿಕಿತ್ಸೆ ಹೆಲ್ತ್​ ಇನ್ಷೂರೆನ್ಸ್​ ವ್ಯಾಪ್ತಿಗೆ ಒಳಪಡುತ್ತದಾ?
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಡ್ರ್ಯಾಗನ್​ ಸೋಂಕು ಅಂದ್ರೆ ಕೊವಿಡ್ 19 ಸೋಂಕು ಅಕ್ಷರಷಃ ಸಾಂಕ್ರಾಮಿಕವಾಗಿದ್ದು ಆತಂಕ ಮೂಡಿಸಿದೆ. ಈ ಮಧ್ಯೆ ಸೋಂಕು ಪೀಡಿತರು ಮತ್ತು ಸಾರ್ವಜನಿಕರಲ್ಲಿ ಒಂದು ದೊಡ್ಡ ಅತಂಕ ಮನೆಮಾಡಿದೆ. ಕೊರೊನಾ ವೈರಸ್ ಚಿಕಿತ್ಸೆಗೆ ಅಸಲಿಗೆ ಮದ್ದೇ ಇಲ್ಲವಾದರೂ ಅದು ಇದು ಅಂತ ಚಿಕಿತ್ಸೆ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಅದು ದುಬಾರಿಯೂ ಆಗುತ್ತಿವೆ ಎಂಬ ಅಳಲು ಸಾರ್ವಜನಿಕರಲ್ಲಿ ಮೂಡಿವೆ.

ಈ ಕೊರೊನಾ ವೈರಸ್​ಗೆ ಚಿಕಿತ್ಸೆಗೆಂದು ಸಾಮಾನ್ಯ ಆರೋಗ್ಯ ವಿಮೆ ಪಾಲಿಸಿಗಳು ಅನ್ವಯವಾಗುತ್ತವಾ? ಎಂದು ಜನ ಪ್ರಶ್ನಿಸತೊಡಗಿದ್ದಾರೆ. ಇಷ್ಟಕ್ಕೂ ಕೊರೊನಾ ಚಿಕಿತ್ಸೆ ಆರೋಗ್ಯ ವಿಮೆ ಪಾಲಿಸಿಗೆ ಒಳಪಡುತ್ತದಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದೇ ವೇಳೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವೂ (IRDAI) ವಿಮಾ ಕಂಪನಿಗಳಿಗೆ ಆದೇಶವೊಂದನ್ನು ಹೊರಡಿಸಿದ್ದು, ಕೊರೊನಾ ಚಿಕಿತ್ಸೆ ಪ್ರಕರಣಗಳನ್ನು ತಕ್ಷಣವೇ ಇತ್ಯರ್ಥಪಡಿಸಬೇಕು ಎಂದು ವಿಮೆ ಕಂಪನಿಗಳಿಗೆ ಸೂಚಿಸಿದೆ.

ಇದರ ಫಲವಾಗಿ 44 ಸಾಮಾನ್ಯ ವಿಮೆ ಕಂಪನಿಗಳ ಉನ್ನತ ಮಂಡಳಿಯು ನಿನ್ನೆ ಸಭೆ ಸೇರಿ ಎಲ್ಲಾ ಆರೋಗ್ಯ ವಿಮೆ ಪಾಲಿಸಿಗಳು ಕೊರೊನಾ ವೈರಸ್ ಚಿಕಿತ್ಸೆಯೂ ಎಲ್ಲಾ ಆರೋಗ್ಯ ವಿಮೆಗಳಿಗೆ ಒಳಪಡುತ್ತದೆ ಎಂದು ಸ್ಪಷ್ಟಪಡಿಸಿದೆ. ಇದರಿಂದ ಸಾರ್ವಜನಿಕರು ನಿಟ್ಟುಸಿರುಬಿಟ್ಟಿದ್ದಾರೆ.

ಅದಕ್ಕಿಂತಾ ಹೆಚ್ಚಿಗೆ ಕೊರೊನಾ ಚಿಕಿತ್ಸೆ ವಿಷಯದಲ್ಲಿ ಸ್ವತಹ ಸರ್ಕಾರಗಳೇ ಅತ್ಯಗತ್ಯ ಮುತುವರ್ಜಿ ವಹಿಸಿದ್ದು, ಬಹುತೇಕ ಪ್ರಕರಣಗಳಲ್ಲಿ ಸೋಂಕು ಪೀಡಿತರನ್ನು ತಾನೇ ವಿಚಾರಿಸಿಕೊಳ್ಳುತ್ತಿದೆ ಎಂಬುದು ಗಮನಾರ್ಹವಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada