ಸಂಪುಟ ವಿಸ್ತರಣೆ ವಿಚಾರ: ದೆಹಲಿಯಲ್ಲಿ ನಡೆದ ಮಾತುಕತೆಯ ವಿವರಗಳು ನನಗೆ ಗೊತ್ತಿಲ್ಲ ಎಂದ ವಿಜಯೇಂದ್ರ

| Updated By: ganapathi bhat

Updated on: Apr 06, 2022 | 9:07 PM

ದೆಹಲಿಯಲ್ಲಿ ನಡೆದ ಮಾತುಕತೆಯ ವಿವರಗಳು ನನಗೆ ಗೊತ್ತಿಲ್ಲ. ದೆಹಲಿಗೆ ನಾನು ನನ್ನ ವೈಯಕ್ತಿಕ ಕಾರ್ಯಕ್ರಮ ನಿಮಿತ್ತ ಹೋಗಿದ್ದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ವಿಚಾರ: ದೆಹಲಿಯಲ್ಲಿ ನಡೆದ ಮಾತುಕತೆಯ ವಿವರಗಳು ನನಗೆ ಗೊತ್ತಿಲ್ಲ ಎಂದ ವಿಜಯೇಂದ್ರ
ಬಿ.ವೈ.ವಿಜಯೇಂದ್ರ
Follow us on

ಹಾಸನ: ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂದು ನಾಳೆ ನಿರ್ಧಾರವಾಗಲಿದೆ. ಅದನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ನಿರ್ಧಾರ ಮಾಡುತ್ತಾರೆ. ನಾಳೆ ಬೆಳಗ್ಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಸಂಪುಟ ವಿಸ್ತರಣೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕೆಂದ್ರ ನಾಯಕರ ಜೊತೆ ಚರ್ಚೆ ಮಾಡಿ ನಂತರ ಸಂಪುಟ ವಿಸ್ತರಣೆ ನಿರ್ಧಾರವಾಗಿದೆ. ಆದರೆ, ದೆಹಲಿಯಲ್ಲಿ ನಡೆದ ಮಾತುಕತೆಯ ವಿವರಗಳು ನನಗೆ ಗೊತ್ತಿಲ್ಲ ಎಂದು ಹಾಸನದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ದೆಹಲಿಗೆ ನಾನು ಅವರ ಜೊತೆಗೆ ಹೋಗಿದ್ದೆ ಅಷ್ಟೇ. ನಾನು ನನ್ನ ವೈಯಕ್ತಿಕ ಕಾರ್ಯಕ್ರಮ ನಿಮಿತ್ತ ಹೋಗಿದ್ದೆ ಎಂದು ತಿಳಿಸಿದ್ದಾರೆ.

ತಮಗೂ ಸಚಿವ ಸ್ಥಾನ ಸಿಗಬೇಕೆಂಬ ಮಾಜಿ ಸಚಿವ ರೇಣುಕಾಚಾರ್ಯ ಸೇರಿ ಹಲವರ ಹೇಳಿಕೆ ವಿಚಾರವಾಗಿ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರು ಕೂತು ಮಾತನಾಡಿ ಸಮಾಧಾನ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಮೂಲ ಬಿಜೆಪಿಗರು, ಹೊಸಬರು ಎಂಬ ಭಿನ್ನತೆ ಇಲ್ಲ. ಹೊಸಬರು‌ ಕೂಡ ನಮ್ಮ ಪಕ್ಷದ ಚಿಹ್ನೆ ಮೇಲೆ‌ ಗೆದ್ದು ಬಂದಿದ್ದಾರೆ. ಅವರು ಬಿಜೆಪಿ ಜೊತೆ ಸೇರಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಹಳಬರು ಹೊಸಬರು ಎನ್ನುವ ಮಾತೇ ಬರುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ದೊಡ್ಡ ಪಕ್ಷ. 119 ಸ್ಥಾನಗಳಲ್ಲಿ ನಮ್ಮ ಶಾಸಕರು ಗೆದ್ದಿದ್ದಾರೆ. ಹಾಗಾಗಿ ಅಪೇಕ್ಷೆ ಜಾಸ್ತಿ ಇದೆ. ಹಲವರು ಎರಡರಿಂದ ಮೂರುಬಾರಿ ಗೆದ್ದವರು ಇದ್ದಾರೆ. ನಿರೀಕ್ಷೆಗಳು ಇರುವುದು ಸಹಜ. ಇವೆಲ್ಲವನ್ನೂ ಸರಿದೂಗಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡುತ್ತಾರೆ. ನಾಳೆ ಸಂಜೆ 3.50 ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ.

Published On - 8:09 pm, Tue, 12 January 21