ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿತಿದೆ. ಈ ಮಧ್ಯೆ ಮಳೆಯಲ್ಲಿ ಯಾರಪ್ಪಾ ನೆನಿತಾರೆ ಅಂತಾ ಬೆಚ್ಚಗೆ ಸೂರು ಹುಡುಕೋರೆ ಜಾಸ್ತಿ. ಅಂಥದ್ರಲ್ಲಿ ಸುರಿವ ಮಳೆಯಲ್ಲೇ ಛತ್ರಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಪೇದೆಯ ವಿಡಿಯೋ ಸಖತ್ ವೈರಲ್ ಆಗಿದೆ.
ಜಿಲ್ಲೆಯ ಕಲಾದಗಿ ಹಳ್ಳಿಯಿಂದ ಅಬಕಾರಿ ಸಬ್ ಇನ್ಸ್ಪೆಕ್ಟರ್ ಮದುವೆಗೆ ಹೋಗಿಬಂದಿದ್ದ ಯುವಕನಿಂದ ಗ್ರಾಮದಲ್ಲಿ ಹಲವರಿಗೆ ಸೋಂಕು ತಗಲಿತ್ತು. 40ಕ್ಕೂ ಹೆಚ್ಚು ಕೇಸ್ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಹಳ್ಳಿಯನ್ನ ಸೀಲ್ಡೌನ್ ಮಾಡಲಾಗಿದೆ. ಹೀಗಾಗಿ, ಸೀಲ್ಡೌನ್ ಏರಿಯಾದಿಂದ ಯಾರೂ ಹೊರಬರದಂತೆ ಕಲಾದಗಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಕೊಡೆ ಹಿಡಿದು ಮಳೆಯ ಮಧ್ಯೆಯೂ ಕರ್ತವ್ಯ ನಿರ್ವಹಿಸಿರೋದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Published On - 5:11 pm, Wed, 8 July 20