
ಬೆಂಗಳೂರು: ಆಧುನಿಕ ತಂತ್ರಜ್ಞಾನದ ಮೂಲಕ ರಸ್ತೆ ಪ್ರಯಾಣವನ್ನು ಸುರಕ್ಷಿತಗೊಳಿಸುವ ಜಾಗತಿಕ ಮಟ್ಟದ ಯೋಜನೆಗೆ ಬೆಂಗಳೂರು ಆಯ್ಕೆಯಾಗಿದೆ. ಈ ಮೂಲಕ ಜಗತ್ತಿನ 36 ನಗರಗಳ ಸಾಲಿಗೆ ಬೆಂಗಳೂರು ಕೂಡ ಸೇರ್ಪಡೆಗೊಂಡಿದೆ. ಲಂಡನ್, ಮಾಸ್ಕೋ, ಟೊರೊಂಟೊ, ಬ್ರೆಸಿಲಿಯಾ, ದುಬೈ, ಮೆಲ್ಬೋರ್ನ್ ಇನ್ನಿತರ ಜಾಗತಿಕ ನಗರಗಳು ಇದರಲ್ಲಿ ಸೇರಿವೆ.
ನಿರ್ವಹಣೆ, ಖಾಸಗೀಕರಣದ ರಕ್ಷಣೆ, ಆಧುನಿಕ ಸೈಬರ್ ತಂತ್ರಜ್ಞಾನದ ಮೂಲಕ ವಿಶೇಷ ಚೇತನರಿಗೆ ಉತ್ತಮ ಸೇವೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಈ ಯೋಜನೆಯು ನೆರವಾಗಲಿದೆ.
ಭಾರತದ 4 ನಗರಗಳು ಆಯ್ಕೆ
ವಿಶ್ವ ಆರ್ಥಿಕ ವೇದಿಕೆ (WEF) 22 ದೇಶಗಳ 36 ನಗರಗಳನ್ನು ಈ ಯೋಜನೆಗೆ ಆಯ್ಕೆ ಮಾಡಿದೆ. ಬೆಳೆಯುತ್ತಿರುವ ನಗರಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿವೆ. ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಕೋವಿಡ್ 19ನಂತಹ ಸಾಮುದಾಯಿಕ ಪಿಡುಗಿನಿಂದ ಈ ಕಷ್ಟ ಇನ್ನಷ್ಟು ಹೆಚ್ಚಿದೆ. ಕೇವಲ ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಮಾತ್ರ ಇವುಗಳಿಗೆ ಪರಿಹಾರ ಒದಗಿಸಬಹುದು ಎಂದು WEF ತಿಳಿಸಿದೆ.
Published On - 1:17 pm, Wed, 18 November 20