ಸಿಂಪಲ್​ ಆಗಿ ಎಂಗೇಜ್​ ಆಗಲಿರೋ ಡಿಕೆಶಿ ಪುತ್ರಿ: ಖಾಸಗಿ ಹೋಟೆಲ್​ನಲ್ಲಿ ನಿಶ್ಚಿತಾರ್ಥಕ್ಕೆ ಸಜ್ಜು

  • Updated On - 1:34 pm, Wed, 18 November 20
ಸಿಂಪಲ್​ ಆಗಿ ಎಂಗೇಜ್​ ಆಗಲಿರೋ ಡಿಕೆಶಿ ಪುತ್ರಿ: ಖಾಸಗಿ ಹೋಟೆಲ್​ನಲ್ಲಿ ನಿಶ್ಚಿತಾರ್ಥಕ್ಕೆ ಸಜ್ಜು
ಐಶ್ವರ್ಯಾ ಮತ್ತು ಅಮರ್ಥ್ಯ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ಮೊಮ್ಮಗ ಮತ್ತು ಕಾಫಿ ಡೇ ಮಾಲೀಕ ದಿ. ಸಿದ್ದಾರ್ಥ್ ಪುತ್ರ ಅಮರ್ತ್ಯ ಹೆಗಡೆ ಅವರ ನಿಶ್ಚಿತಾರ್ಥ ನಡೆಯಲಿದೆ. ಐಶ್ವರ್ಯ ಮತ್ತು ಅಮರ್ತ್ಯರ ನಿಶ್ಚಿತಾರ್ಥ ಕಾರ್ಯಕ್ರಮ ನಾಳೆ ನೆರವೇರಲಿದೆ.

ಅಮರ್ತ್ಯ ಹೆಗಡೆ ಜೊತೆಗೆ ಐಶ್ವರ್ಯರ ಎಂಗೇಜ್​ಮೆಂಟ್ ನಾಳೆ ನಗರದ ಖಾಸಗಿ ಹೊಟೇಲ್​ನಲ್ಲಿ ನೆರವೇರಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಖಾಸಗಿ ಹೊಟೇಲ್​ನಲ್ಲಿ ನಿಶ್ಚಿತಾರ್ಥಕ್ಕೆ ವೇದಿಕೆ ರೆಡಿ ಮಾಡಲಾಗಿದೆ.

ಕುಟುಂಬಸ್ಥರು ಮತ್ತು ಆತ್ಮೀಯರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು ಧಾಂ ಧೂಂ ಅನ್ನೋ ಸದ್ದು ಗದ್ದಲವಿಲ್ಲದೆ ಸಮಾರಂಭ ನೆರವೇರಲಿದೆ ಎಂದು ಹೇಳಲಾಗಿದೆ. S.M. ಕೃಷ್ಣ ಕುಟುಂಬಸ್ಥರು ಹಾಗೂ ಡಿ.ಕೆ. ಶಿವಕುಮಾರ್ ಫ್ಯಾಮಿಲಿ ಮಾತ್ರ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ನಿಶ್ಚಿತಾರ್ಥ ಕಾರ್ಯಕ್ರಮ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿರೋ ತಾಜ್ ಹೋಟೆಲ್​ನಲ್ಲಿ ನೆರವೇರಿಲಿದೆ. ಸಮಾರಂಭಕ್ಕೆ ಬೇರೆ ರಾಜ್ಯಗಳಿಂದ ಆಗಮಿಸೋ ಅತಿಥಿಗಳ ಅನುಕೂಲಕ್ಕಾಗಿ ಟರ್ಮಿನಲ್ ಬಳಿಯಿರೋ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಏಪರ್ಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ‌ ಹೋಟೆಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದೆ. ಜೊತೆಗ, ಈಗಾಗಲೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತಾಜ್ ಹೋಟೆಲ್​ನ 50 ಕೊಠಡಿಗಳನ್ನು ಬುಕ್​ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

Click on your DTH Provider to Add TV9 Kannada