ವಿಜಯನಗರ ಜಿಲ್ಲೆ ಸ್ಥಾಪನೆ: ಸಚಿವ ಆನಂದ್ ಸಿಂಗ್ ಕೊಟ್ಟ ಗುಡ್​ ನ್ಯೂಸ್​ ಏನು?

ವಿಜಯನಗರ ಜಿಲ್ಲೆ ಸ್ಥಾಪನೆ: ಸಚಿವ ಆನಂದ್ ಸಿಂಗ್ ಕೊಟ್ಟ ಗುಡ್​ ನ್ಯೂಸ್​ ಏನು?

ಬೆಂಗಳೂರು: ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ಅದಮ್ಯ ತುಡಿತ ಅಲ್ಲಿನ ಜನ, ಜನಪ್ರತಿನಿಧಿಗಳ ಬಹುದಿನದ ಕನಸು. ಅದೀಗ ಕೈಗೂಡುವ ಕಾಲ ಸಮೀಪಿಸಿದೆ. ಐತಿಹಾಸಿಕ ತೀರ್ಮಾನವಾಗಿದೆ ವಿಜಯನಗರ ಜಿಲ್ಲೆಯಾಗಬೇಕೆಂಬ ಬಹುದಿನದ ಬೇಡಿಕೆಗೆ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ನೇತೃತ್ವದ  ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ದೊರೆತಿದೆ.  ಇದರಿಂದ ಐತಿಹಾಸಿಕ ತೀರ್ಮಾನ ಮಾಡಿದಂತಾಗಿದೆ ಎಂದು ಬೆಂಗಳೂರಿನಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳನ್ನೊಳಗೊಂಡ ಈ ನೂತನ ಜಿಲ್ಲೆ ರಚನೆ […]

sadhu srinath

|

Nov 18, 2020 | 12:13 PM

ಬೆಂಗಳೂರು: ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ಅದಮ್ಯ ತುಡಿತ ಅಲ್ಲಿನ ಜನ, ಜನಪ್ರತಿನಿಧಿಗಳ ಬಹುದಿನದ ಕನಸು. ಅದೀಗ ಕೈಗೂಡುವ ಕಾಲ ಸಮೀಪಿಸಿದೆ.

ಐತಿಹಾಸಿಕ ತೀರ್ಮಾನವಾಗಿದೆ ವಿಜಯನಗರ ಜಿಲ್ಲೆಯಾಗಬೇಕೆಂಬ ಬಹುದಿನದ ಬೇಡಿಕೆಗೆ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ನೇತೃತ್ವದ  ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ದೊರೆತಿದೆ.  ಇದರಿಂದ ಐತಿಹಾಸಿಕ ತೀರ್ಮಾನ ಮಾಡಿದಂತಾಗಿದೆ ಎಂದು ಬೆಂಗಳೂರಿನಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳನ್ನೊಳಗೊಂಡ ಈ ನೂತನ ಜಿಲ್ಲೆ ರಚನೆ ಮಾಡಬೇಕೆಂಬ ದೀರ್ಘಕಾಲದ ಬೇಡಿಕೆ ಈಡೇರಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada