ಬೆಂಗಳೂರು ವಿವಿ ಕುಲಪತಿ ವಿರುದ್ಧ ಡಿಸಿಎಂಗೆ ಸಿಂಡಿಕೇಟ್ ಸದಸ್ಯರ ದೂರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 05, 2021 | 7:54 PM

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್ ವಿರುದ್ಧ ವಿವಿಯ 7 ಸಿಂಡಿಕೇಟ್ ಸದಸ್ಯರು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರಿಗೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರು ವಿವಿ ಕುಲಪತಿ ವಿರುದ್ಧ ಡಿಸಿಎಂಗೆ ಸಿಂಡಿಕೇಟ್ ಸದಸ್ಯರ ದೂರು
ಬೆಂಗಳೂರು ವಿಶ್ವವಿದ್ಯಾಲಯ
Follow us on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್ ವಿರುದ್ಧ ವಿವಿಯ 7 ಸಿಂಡಿಕೇಟ್ ಸದಸ್ಯರು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಅವರಿಗೆ ದೂರು ಸಲ್ಲಿಸಿದ್ದಾರೆ. ಕುಲಪತಿಗಳು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬುದು ಸಿಂಡಿಕೇಟ್ ಸದಸ್ಯರ ಆರೋಪವಾಗಿದ್ದು, ಉನ್ನತ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಲಾಗಿದೆ.

ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಕುಲಪತಿ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಸಿಂಡಿಕೇಟ್ ಸದಸ್ಯರ ಅಭಿಪ್ರಾಯ ಕೇಳಿಲ್ಲ. 12 ವಿಚಾರಗಳಲ್ಲಿ ಕುಲಪತಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದು, ಸಿಂಡಿಕೇಟ್ ಸದಸ್ಯರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 7 ಸಿಂಡಿಕೇಟ್ ಸದಸ್ಯರಿದ್ದು, ಮನವಿಗೆ ಸ್ಪಂದಿಸದಿದ್ದರೆ, ರಾಜ್ಯಪಾಲರ ಭೇಟಿಗೂ ಮುಂದಾಗುವುದಾಗಿ ಸಿಂಡಿಕೇಟ್ ಸದಸ್ಯರು ತಿಳಿಸಿದ್ದಾರೆ.

ಬೆಂಗಳೂರು ವಿವಿ ಹಾಸ್ಟೆಲ್​ ಅವ್ಯವಸ್ಥೆಯ ಆಗರ: ವಿದ್ಯಾರ್ಥಿನಿಯರ ಗೋಳು ಕೇಳೋರು ಯಾರು?

Published On - 7:34 pm, Tue, 5 January 21