ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವನ್ನು ಲಾಕ್ಡೌನ್ ಮಾಡಲಾಗಿದೆ. ಜನರು ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಧರಿಸುವುದು ಅತ್ಯವಶ್ಯಕ. ಹೀಗಾಗಿ ಬಿಬಿಎಂಪಿ ಒಂದು ಮಹತ್ವದ ಆದೇಶ ಹೊರಡಿಸಿದೆ.
ನೀವು ಮಾಸ್ಕ್ ಹಾಕದೇ ಓಡಾಡುವವರೇ ಹಾಗಿದ್ರೆ ಹುಷಾರ್! ಇನ್ಮುಂದೆ ಮಾಸ್ಕ್ ಹಾಕದೇ ಓಡಾಡಿದ್ರೆ ಫೈನ್ ಬೀಳುತ್ತೆ. ಮಾಸ್ಕ್ ಧರಿಸದೇ ತಿರುಗಾಡುವವರಿಗೆ 1 ಸಾವಿರ ರೂ. ದಂಡದ ಜೊತೆಗೆ ಕೇಸ್ ದಾಖಲಿಸಲು ನಿರ್ಧಾರಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಇಂದಿನಿಂದ್ಲೇ ಬೆಂಗಳೂರಿನಲ್ಲಿ ಈ ಹೊಸ ನಿಯಮ ಜಾರಿಯಾಗಿದ್ದು, ನಿಯೋಜಿತ ಅಧಿಕಾರಿಗಳ ಕೈಗೆ ಸಿಕ್ಕರೆ ದಂಡ ಬೀಳುತ್ತೆ. ಪೊಲೀಸರು, ಬಿಬಿಎಂಪಿ ಮಾರ್ಷಲ್, ಹೆಲ್ತ್ ಇನ್ಸ್ಪೆಕ್ಟರ್ಗಳ ಕೈಗೆ ಸಿಕ್ರೆ ಜೇಬು ಖಾಲಿಯಾಗೋದು ಗ್ಯಾರಂಟಿ.