ಅಮೆರಿಕದಲ್ಲಿ ಸಿದ್ಧವಾಯ್ತು ಕೊರೊನಾ ವ್ಯಾಕ್ಸಿನ್, ಟ್ರಂಪ್ ವೈಜ್ಞಾನಿಕ ಸಲಹೆಗಾರ ಹೇಳಿದ್ದೇನು?
ವಾಷಿಂಗ್ ಟನ್: ಇಡೀ ವಿಶ್ವವೇ ಕೊರೊನಾ ವೈರಸ್ ವಿರುದ್ಧದ ಯುದ್ಧದಲ್ಲಿ ಒಂದಾಗಿದೆ. ಆದ್ರೂ ಮಹಾಮಾರಿ ವಿರುದ್ಧ ಗೆದ್ದು ಬೀಗಲು ಸಾಧ್ಯವಾಗುತ್ತಿಲ್ಲ. ಅತ್ತ ವಿಶ್ವದ ದೊಡ್ಡಣ್ಣ ಅಮೆರಿಕ ಕೊರೊನಾ ವೈರಸ್ನ ಅಟ್ಟಹಾಸದ ಎದುರು ತತ್ತರಿಸಿ ಹೋಗಿದ್ದರೆ. ಇತ್ತ ಬಡರಾಷ್ಟ್ರಗಳು ಹೆಮ್ಮಾರಿ ಕಾಟದಿಂದ ವಿಲವಿಲ ಒದ್ದಾಡುತ್ತಿವೆ. ಈ ಹೊತ್ತಲ್ಲೇ ಕೊರೊನಾಗೆ ಔಷಧ ಹುಡುಕುವ ಪ್ರಯತ್ನದಲ್ಲಿ ಭಾರಿ ದೊಡ್ಡ ಯಶಸ್ಸು ಸಿಕ್ಕಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಕೊರೊನಾಗೆ ಔಷಧಿ ಬರಲಿದೆಯಂತೆ. ಡ್ರ್ಯಾಗನ್ ನಾಡಿನ ಕಂಟಕ ಇಡೀ ವಿಶ್ವಕ್ಕೆ ಕಾಲಿಟ್ಟು ಗಢಗಢ ನಡುಗುವಂತೆ […]
ವಾಷಿಂಗ್ ಟನ್: ಇಡೀ ವಿಶ್ವವೇ ಕೊರೊನಾ ವೈರಸ್ ವಿರುದ್ಧದ ಯುದ್ಧದಲ್ಲಿ ಒಂದಾಗಿದೆ. ಆದ್ರೂ ಮಹಾಮಾರಿ ವಿರುದ್ಧ ಗೆದ್ದು ಬೀಗಲು ಸಾಧ್ಯವಾಗುತ್ತಿಲ್ಲ. ಅತ್ತ ವಿಶ್ವದ ದೊಡ್ಡಣ್ಣ ಅಮೆರಿಕ ಕೊರೊನಾ ವೈರಸ್ನ ಅಟ್ಟಹಾಸದ ಎದುರು ತತ್ತರಿಸಿ ಹೋಗಿದ್ದರೆ. ಇತ್ತ ಬಡರಾಷ್ಟ್ರಗಳು ಹೆಮ್ಮಾರಿ ಕಾಟದಿಂದ ವಿಲವಿಲ ಒದ್ದಾಡುತ್ತಿವೆ. ಈ ಹೊತ್ತಲ್ಲೇ ಕೊರೊನಾಗೆ ಔಷಧ ಹುಡುಕುವ ಪ್ರಯತ್ನದಲ್ಲಿ ಭಾರಿ ದೊಡ್ಡ ಯಶಸ್ಸು ಸಿಕ್ಕಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಕೊರೊನಾಗೆ ಔಷಧಿ ಬರಲಿದೆಯಂತೆ.
ಡ್ರ್ಯಾಗನ್ ನಾಡಿನ ಕಂಟಕ ಇಡೀ ವಿಶ್ವಕ್ಕೆ ಕಾಲಿಟ್ಟು ಗಢಗಢ ನಡುಗುವಂತೆ ಮಾಡಿದೆ. ಪ್ರಪಂಚವೇ ಬಾಗಿಲು ಮುಚ್ಚಿದ ಮನೆಯಂತಾಗಿದ್ದು, ಜಗತ್ತಿನ ಭಾಗಶಃ ದೇಶಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಅದರಲ್ಲೂ ದೈತ್ಯ ಆರ್ಥಿಕ ಶಕ್ತಿಗಳಂತೆ ಗುರುತಿಸಿಕೊಂಡಿದ್ದ ರಾಷ್ಟ್ರಗಳು ದಿವಾಳಿಯಾಗಿ, ಬೀದಿಪಾಲಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಔಷಧ ಕಂಡುಹಿಡಿಯಲು ಜಗತ್ತಿಗೆ ಜಗತ್ತೇ ಪರದಾಡ್ತಿದೆ. ಆದರೂ ಡೆಡ್ಲಿ ಕೊರೊನಾ ವಿರುದ್ಧ ಪರಿಣಾಮಕಾರಿ ಮದ್ದು ಇನ್ನೂ ಲಭ್ಯವಾಗಿಲ್ಲ. ಈ ಹೊತ್ತಲ್ಲೇ ಅಮೆರಿಕದಿಂದ ಸಂತಸದ ಸುದ್ದಿಯೊಂದು ಜಗತ್ತನ್ನು ಬಡಿದೆಬ್ಬಿಸಿದೆ.
ಅಮೆರಿಕದಲ್ಲಿ ಸಿದ್ಧವಾಯ್ತಾ ಕೊರೊನಾ ವ್ಯಾಕ್ಸಿನ್? ಕೊರೊನಾ ವೈರಸ್ ಈಗಾಗಲೇ ಸುಮಾರು 33 ಲಕ್ಷ ಜನರಿಗೆ ಹಬ್ಬಿದ್ದು, ಎಲ್ಲೆಲ್ಲೂ ಆತಂಕ ಸೃಷ್ಟಿಸಿದೆ. ಸಾವಿನ ಪ್ರಮಾಣ ಎರಡೂವರೆ ಲಕ್ಷದತ್ತ ಸಾಗುತ್ತಿದೆ. ಇದು ಮನುಕುಲದ ಎದೆ ನಡುಗುವಂತೆ ಮಾಡಿದೆ. ಅದ್ರಲ್ಲೂ ಅಮೆರಿಕ ಅತಿಹೆಚ್ಚು ಜನರನ್ನ ಕಳೆದುಕೊಂಡಿದ್ದು, ದೊಡ್ಡಣ್ಣನ ನಾಡಿನಲ್ಲಿ ಈವರೆಗೆ ಸುಮಾರು 63 ಸಾವಿರ ಜನ ಅಸುನೀಗಿದ್ದಾರೆ.
ಇಂತಹ ಹೊತ್ತಲ್ಲೇ ಅಮೆರಿಕದಲ್ಲಿ ಕೊರೊನಾ ವ್ಯಾಕ್ಸಿನ್ ಸಿದ್ಧವಾಗಿರುವ ಬಗ್ಗೆ ಹಿಂಟ್ ಸಿಕ್ಕಿದೆ. ರಿಮ್‌ಡಿಸಿವಿರ್ ಔಷಧ ಸಾಕಷ್ಟು ಹೋಪ್ ಕ್ರಿಯೇಟ್ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ವೈಜ್ಞಾನಿಕ ಸಲಹೆಗಾರ ಡಾ. ಫೌಸಿ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಲಭ್ಯವಿರುವ ಔಷಧಗಳಲ್ಲಿ ‘ರಿಮ್‌ಡಿಸಿವಿರ್’ ಸಾಕಷ್ಟು ವಿಶ್ವಾಸ ಮೂಡಿಸಿದೆಯಂತೆ. ರಿಮ್‌ಡಿಸಿವಿರ್ ಔಷಧ ನೀಡಿದ್ದ ಸೋಂಕಿತರ ಪೈಕಿ 50ರಷ್ಟು ಜನ 5 ರಿಂದ 10 ದಿನದಲ್ಲಿ ಚೇತರಿಸಿಕೊಂಡಿದ್ದಾರಂತೆ.
ಅಂದಹಾಗೆ ಸಾಮಾನ್ಯವಾಗಿ ಔಷಧಿ ಕಂಡು ಹಿಡಿಯಲು 12 ರಿಂದ 18 ತಿಂಗಳ ಸಮಯ ಬೇಕು. ಆದರೆ ಕೆಲ ಕಂಪನಿಗಳ ಔಷಧಿಗಳು ಪ್ರಾಣಿಗಳ ಮೇಲಿನ ಪ್ರಯೋಗ ದಾಟಿ, ಮನುಷ್ಯರ ಮೇಲೂ ಪ್ರಯೋಗ ನಡೆಸುತ್ತಿವೆ. ಇಂಥ ಸಂಸ್ಥೆಗಳ ಪೈಕಿ ಅಮೆರಿಕದ ‘ಗಿಲೇಡ್ ಸೈನ್ಸಸ್’ ಕೂಡ ಒಂದು.
‘ಗಿಲೇಡ್ ಸೈನ್ಸಸ್’ ತಯಾರಿಸಿರುವ ರಿಮ್‌ಡಿಸಿವಿರ್ ಕೊರೊನಾ ಸೋಂಕಿತರ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆ. ಸೋಂಕಿತರು ಬಹುಬೇಗ ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಿಮ್‌ಡಿಸಿವಿರ್ ಕೊರೊನಾಗೆ ರಾಮಬಾಣವಾಗಲಿದೆ ಅನ್ನೋದು ಡಾ. ಫೌಸಿ ಅಭಿಪ್ರಾಯ.
ಒಟ್ನಲ್ಲಿ ಯಾರಾದರೂ ಆಗಲಿ ಮೊದಲು ಕೊರೊನಾ ವಿರುದ್ಧ ಹೋರಾಡಲು ಔಷಧ ಹೊರಬರಲಿ ಅನ್ನೋದು ಭೂಮಿ ಮೇಲೆ ಬದುಕಿರುವ ಪ್ರತಿಯೊಬ್ಬರ ಆಶಯ. ಇದು ಅಮೆರಿಕದಲ್ಲೇ ಸಾಧ್ಯವಾಗುತ್ತೇ ಅನ್ನೋ ಭರವಸೆ ಈಗ ಮೂಡಿದೆ. ಆದ್ರೆ ಈ ಬಗ್ಗೆ ಇನ್ನೂ ಪಕ್ಕಾ ರಿಸಲ್ಟ್ ಪಡೆಯಲು ಮತ್ತೊಂದಷ್ಟು ದಿನಗಳ ಕಾಲ ಕಾಯಲೇಬೇಕಾಗಿದೆ.
Published On - 6:32 am, Fri, 1 May 20