AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜಾಪ್ರಭುತ್ವಕ್ಕೆ ಬೆದರಿಕೆ ಇರುವುದು ಮಸ್ಕ್​ನಿಂದ ಅಲ್ಲ ಸೊರೊಸ್​ನಿಂದ: ಜಾರ್ಜಿಯಾ ಮೆಲೊನಿ

ಉದ್ಯಮಿ ಜಾರ್ಜ್​ ಸೊರೊಸ್ ಬಗ್ಗೆ ಭಾರತದಲ್ಲಿ ಆರೋಪಗಳು ಕೇಳಿಬಂದಿರುವಂತೆಯೇ, ವಿದೇಶಗಳಲ್ಲಿಯೂ ಕೇಳಿಬಂದಿದೆ. ಎಲಾನ್ ಮಸ್ಕ್​ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಕೂಡ ಸೊರೊಸ್ ವಿರುದ್ಧ ಧ್ವನಿಯೆತ್ತಿದ್ದಾರೆ. ಎಲಾನ್ ಮಸ್ಕ್​ ಹೇಳಿಕೆಗಳು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ. ಯುಎಸ್ ಉದ್ಯಮಿ ಜಾರ್ಜ್ ಸೊರೊಸ್ ಅವರು ಇತರ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಹೇಳಿದ್ದಾರೆ. ಎಲೋನ್ ಮಸ್ಕ್ ಅವರ ರಾಜಕೀಯ ಮಧ್ಯಸ್ಥಿಕೆಗಳು ಆಕ್ರೋಶಕ್ಕೆ ಕಾರಣವಾಗುತ್ತವೆ ಏಕೆಂದರೆ ಅವರು ಎಡಪಂಥೀಯರಲ್ಲ ಎಂದರು.

ಪ್ರಜಾಪ್ರಭುತ್ವಕ್ಕೆ ಬೆದರಿಕೆ ಇರುವುದು ಮಸ್ಕ್​ನಿಂದ ಅಲ್ಲ ಸೊರೊಸ್​ನಿಂದ: ಜಾರ್ಜಿಯಾ ಮೆಲೊನಿ
ಮೆಲೋನಿ, ಮಸ್ಕ್​, ಸೊರೊಸ್
ನಯನಾ ರಾಜೀವ್
|

Updated on: Jan 10, 2025 | 12:02 PM

Share

ವಿದೇಶಿ ವಿಚಾರಗಳ ಬಗ್ಗೆ ಎಲಾನ್ ಮಸ್ಕ್​ ಹೇಳಿಕೆಗಳು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ, ಯುಎಸ್ ಉದ್ಯಮಿ ಜಾರ್ಜ್ ಸೊರೊಸ್ ಅವರು ಇತರ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಹೇಳಿದ್ದಾರೆ. ಎಲಾನ್ ಮಸ್ಕ್ ಅವರ ರಾಜಕೀಯ ಮಧ್ಯಸ್ಥಿಕೆಗಳು ಆಕ್ರೋಶಕ್ಕೆ ಕಾರಣವಾಗುತ್ತವೆ ಏಕೆಂದರೆ ಅವರು ಎಡಪಂಥೀಯರಲ್ಲ ಎಂದರು.

ಮಸ್ಕ್​ ತಮ್ಮ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತಿದ್ದಾರೆ ಆದರೆ ಜಾರ್ಜ್ ಸೊರೊಸ್​ನಂತಹ ಎಡಪಂಥೀಯ ವ್ಯಕ್ತಿಗಳು ಅದನ್ನು ರಾಜಕೀಯ ಹಸ್ತಕ್ಷೇಪವೆಂದು ಆರೋಪಿಸಿದ್ದಾರೆ ಎಂದು ಹೇಳಿದರು. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚುನಾಯಿತ ಸರ್ಕಾರಗಳನ್ನು ತೆಗೆದುಹಾಕಲು ಜಾರ್ಜ್ ಸೊರೊಸ್ ಧನಸಹಾಯ ಮಾಡಿದ್ದಾರೆ ಎನ್ನುವ ಆರೋಪಗಳು ಇತ್ತೀಚೆಗೆ ಕೇಳಿಬಂದಿತ್ತು.

ಜಾರ್ಜ್ ಸೊರೊಸ್ ಜೊತೆ ಸಂಪರ್ಕವಿದೆ ಎಂದು ಆರೋಪಿಸಿ ಬಿಜೆಪಿ ಹಲವು ಬಾರಿ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಿತ್ತು. ಇತ್ತೀಚೆಗೆ, ಸೊರೊಸ್‌ಗೆ ಸಂಬಂಧಿಸಿರುವ ಟ್ರಸ್ಟ್‌ಗೆ ಅವರ ಲಿಂಕ್‌ಗಳನ್ನು ಎತ್ತಿ ತೋರಿಸುವುದರ ಮೂಲಕ ಸೋನಿಯಾ ಗಾಂಧಿಯವರನ್ನೂ ಗುರಿಯಾಗಿಸಲಾಯಿತು.

ಜಾರ್ಜ್ ಸೋರೋಸ್ ಫೌಂಡೇಶನ್​​ನಿಂದ ಫಂಡಿಂಗ್ ಪಡೆದಿರುವ ಎಫ್​ಡಿಎಲ್-ಎಪಿ ಫೌಂಡೇಶನ್​ನಲ್ಲಿ ಸೋನಿಯಾ ಗಾಂಧಿ ಸಹ-ಅಧ್ಯಕ್ಷೆಯಾಗಿದ್ದಾರೆ ಎಂಬುದು ಆಡಳಿತ ಪಕ್ಷವಾದ ಬಿಜೆಪಿಯ ನಾಯಕರು ಮಾಡುತ್ತಿರುವ ಬಹಿರಂಗ ಆರೋಪ.

ಮತ್ತಷ್ಟು ಓದಿ: ಕೆಲ ಭಾರತೀಯರನ್ನು ರೊಚ್ಚಿಗೆಬ್ಬಿಸಿರುವ ಜಾರ್ಜ್ ಸೋರೋಸ್ ಎಂಬ ಉದ್ಯಮಿ ಯಾರು? ಇವರ ಆಸ್ತಿ, ಶಕ್ತಿ ಎಷ್ಟು?

ಮಸ್ಕ್ ಅವರು ಜಾರ್ಜ್ ಸೊರೊಸ್ ಮೇಲೆ ಕಟುವಾದ ದಾಳಿಯನ್ನು ಪ್ರಾರಂಭಿಸಿದರು, ಅವರನ್ನು ಮಾನವೀಯತೆಯ ಶತ್ರು ಎಂದು ಕರೆದರು. ಜಾರ್ಜ್ ಸೊರೊಸ್ ಉಗ್ರಗಾಮಿ ಗುಂಪು ಹಮಾಸ್‌ಗೆ 15 ಮಿಲಿಯನ್ ಡಾಲರ್‌ಗಳ ಸಹಾಯವನ್ನು ನೀಡಿದ್ದಾರೆ. ಅದೇ ಹಮಾಸ್ ಭಯೋತ್ಪಾದಕರು ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ದಾಳಿ ಮಾಡಿ ನೂರಾರು ಜನರನ್ನು ಒತ್ತೆಯಾಳಾಗಿ ಮಾಡಿಕೊಂಡಿದ್ದರು.

ಭಯೋತ್ಪಾದಕರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 700 ಕ್ಕೂ ಹೆಚ್ಚು ಜನರನ್ನು ಕೊಂದಿದ್ದರು. ಇಸ್ರೇಲ್‌ನ ಯುಎನ್ ರಾಯಭಾರಿ ಗಿಲಾಡ್ ಎರ್ಡಾನ್ ಅವರು ಜಾರ್ಜ್ ಸೊರೊಸ್ ಹಮಾಸ್‌ಗೆ 15 ಮಿಲಿಯನ್ ಡಾಲರ್‌ಗಳ ಬೃಹತ್ ಹಣವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಬಂಧಿಸಿದ ವರದಿಯೊಂದರ ಬಗ್ಗೆ ಎಲೋನ್ ಮಸ್ಕ್ ಕೂಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಜಾರ್ಜ್ ಸೊರೊಸ್ ಒಬ್ಬ ಬಿಲಿಯನೇರ್ ಹೂಡಿಕೆದಾರ ಮತ್ತು ಓಪನ್ ಸೊಸೈಟಿ ಫೌಂಡೇಶನ್ಸ್ ಸಂಸ್ಥಾಪಕ. ಸೊರೊಸ್ ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಅವರು ಭಾರತೀಯ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ