ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ವಿರುದ್ಧ ರಾಶಿಕಾ ಶೆಟ್ಟಿ ತಿರುಗಿ ಬಿದ್ದಿದ್ದಾರೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ವೇಳೆ ಗಿಲ್ಲಿಯನ್ನು ರಾಶಿಕಾ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಅವರು ಕಾರಣ ನೀಡಿದ್ದಾರೆ. ‘ಗಿಲ್ಲಿ ಪ್ರತಿ ದಿನ ಒಂದೊಂದು ಪಾತ್ರ ಮಾಡುತ್ತಿದ್ದಾನೆ. ಆತ ತುಂಬಾ ದೊಡ್ಡ ಕುತಂತ್ರಿ’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಫಿನಾಲೆ ಸಮೀಪಿಸುತ್ತಿದೆ. ನಟಿ ರಾಶಿಕಾ ಶೆಟ್ಟಿ (Rashika Shetty) ಅವರು ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ ಗಿಲ್ಲಿಯನ್ನು ರಾಶಿಕಾ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಅವರು ಕಾರಣ ನೀಡಿದ್ದಾರೆ. ‘ಗಿಲ್ಲಿ ಪ್ರತಿ ದಿನ ಒಂದೊಂದು ಪಾತ್ರ ಮಾಡುತ್ತಿದ್ದಾನೆ. ಅವನು ಬಹಳ ದೊಡ್ಡ ಕುತಂತ್ರಿ’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ. ಇಷ್ಟು ದಿನ ಸೀಕ್ರೆಟ್ ರೂಮ್ನಲ್ಲಿ ಇದ್ದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರು ಈಗ ಪುನಃ ಬಿಗ್ ಬಾಸ್ ಮನೆಗೆ ಬಂದು ಆಟ ಮುಂದುವರಿಸಿದ್ದಾರೆ. ಅತಿಥಿಗಳಾಗಿ ತೆರಳಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ಹೊರಗೆ ಬಂದಿದ್ದಾರೆ. ಗಿಲ್ಲಿ ನಟ (Gilli Nata) ಅವರೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ಜೋರಾಗಿದೆ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಮುಂತಾದವರು ಕೂಡ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ಡಿಸೆಂಬರ್ 22ರ ಬಿಗ್ ಬಾಸ್ ಸಂಚಿಕೆಯ ಪ್ರೋಮೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

