AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಿರಂಗವಾಗಿ ಇಂಗ್ಲೆಂಡ್‌ ತಂಡದ ಮಾನ ಕಳೆದ ರೋಹಿತ್ ಶರ್ಮಾ

ಬಹಿರಂಗವಾಗಿ ಇಂಗ್ಲೆಂಡ್‌ ತಂಡದ ಮಾನ ಕಳೆದ ರೋಹಿತ್ ಶರ್ಮಾ

ಪೃಥ್ವಿಶಂಕರ
|

Updated on:Dec 22, 2025 | 4:09 PM

Share

Rohit Sharma Mocks England's Ashes Failure: ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ 0-3 ಹಿನ್ನಡೆ ಅನುಭವಿಸಿದೆ. ಆಸೀಸ್ ನೆಲದಲ್ಲಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಸೋಲುಗಳನ್ನು ಕಂಡಿದ್ದು, ಅವರ 'ಬಾಜ್‌ಬಾಲ್' ತಂತ್ರ ವಿಫಲವಾಗಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್‌ನ ಕಳಪೆ ಪ್ರದರ್ಶನವನ್ನು ಬಹಿರಂಗವಾಗಿ ಅಣಕಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಆಡುವುದು ಕಷ್ಟ, ಬೇಕಿದ್ದರೆ ಈ ಬಗ್ಗೆ ಇಂಗ್ಲೆಂಡ್ ಬಳಿ ಕೇಳಿ ತಿಳಿದುಕೊಳ್ಳಿ ಎಂದು ರೋಹಿತ್ ಹೇಳಿದ್ದು, ಇಂಗ್ಲೆಂಡ್‌ನ ದುಸ್ಥಿತಿಯನ್ನು ಎತ್ತಿ ತೋರಿಸಿದೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ ತಂಡ 3-0 ಅಂತರದ ಹಿನ್ನಡೆ ಅನುಭವಿಸಿದೆ. ಆಸೀಸ್ ನೆಲದಲ್ಲಿ ಆತಿಥೇಯರ ದಾಳಿಗೆ ನಲುಗಿ ಹೋಗಿರುವ ಇಂಗ್ಲೆಂಡ್‌ ಆಡಿರುವ 3 ಪಂದ್ಯಗಳಲ್ಲೂ ಏಕಪಕ್ಷೀಯ ಸೋಲು ಅನುಭವಿಸಿದೆ. ಹೀಗಾಗಿ ಟೆಸ್ಟ್ ಕ್ರಿಕೆಟ್ ದಿಕ್ಕು ಬದಲಿಸಲು ಹೊರಟಿದ್ದ ಇಂಗ್ಲೆಂಡ್‌ ದಿಕ್ಕಾಪಾಲಾಗಿರುವುದು ವಿಶ್ವ ಕ್ರಿಕೆಟ್ ಮುಂದೆ ನಗೆಪಾಟಲಿಗೀಡಾಗಿದೆ. ಇದೀಗ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೂಡ ಇಂಗ್ಲೆಂಡ್‌ ತಂಡವನ್ನು ಬಹಿರಂಗವಾಗಯೇ ಅಣಕಿಸಿದ್ದಾರೆ.

ರೋಹಿತ್ ಶರ್ಮಾ ಇತ್ತೀಚೆಗೆ ಗುರುಗ್ರಾಮದಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರೋಹಿತ್, ತಮ್ಮ ಅನುಭವಗಳು ಮತ್ತು ತಮ್ಮ ವೃತ್ತಿಜೀವನದುದ್ದಕ್ಕೂ ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು. ಹಾಗೆಯೇ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವದ ಬಗ್ಗೆಯೂ ಮಾತನಾಡಿದ ರೋಹಿತ್, ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಅಣಕಿಸಿದರು.

ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವಗಳ ಮಾತನಾಡಿದ ರೋಹಿತ್ ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾದ ಟೆಸ್ಟ್ ಗೆಲುವಿನ ಬಗ್ಗೆ ಉಲ್ಲೇಖಿಸುತ್ತಾ, ‘ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುವುದು, ವಿಶೇಷವಾಗಿ ಟೆಸ್ಟ್ ಕ್ರಿಕೆಟ್ ಆಡುವುದು ತುಂಬಾ ಕಷ್ಟ. ಟೆಸ್ಟ್ ಕ್ರಿಕೆಟ್ ಸ್ವತಃ ತುಂಬಾ ಸವಾಲಿನದ್ದಾಗಿದೆ, ಏಕೆಂದರೆ ನೀವು ಐದು ದಿನವೂ ಗಮನಹರಿಸಬೇಕು. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಆಡುವುದು ಅತ್ಯಂತ ಕಷ್ಟ. ನೀವು ಬೇಕಿದ್ದರೆ ಈ ಬಗ್ಗೆ ಇಂಗ್ಲೆಂಡ್ ಬಳಿ ಕೇಳಿ ತಿಳಿದುಕೊಳ್ಳಬಹುದು. ಆದ್ದರಿಂದ, ಆ ಪಂದ್ಯ ಮತ್ತು ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆಲ್ಲುವುದು ನಮಗೆಲ್ಲರಿಗೂ ದೊಡ್ಡ ಸಾಧನೆಯಾಗಿದೆ. ಅದರಿಂದ ನಾವು ಬಹಳಷ್ಟು ಕಲಿತಿದ್ದೇವೆ’ ಎಂದಿದ್ದಾರೆ.

ವಾಸ್ತವವಾಗಿ ರೋಹಿತ್ ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎನ್ನಬಹುದು. ಏಕೆಂದರೆ ತನ್ನ ಬಾಝ್ ಬಾಲ್ ಕ್ರಿಕೆಟ್ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಸಂಚಲನ ಮೂಡಿಸಿದ್ದ ಇಂಗ್ಲೆಂಡ್‌, ಟೆಸ್ಟ್ ಮಾದರಿಯಲ್ಲಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿದೆ. ಬಲಿಷ್ಠ ತಂಡಗಳೆದುರು ಇಂಗ್ಲೆಂಡ್‌ ಆಟ ನಡೆಯುತ್ತಿಲ್ಲ. ಅದರಲ್ಲೂ ಪ್ರತಿಷ್ಠಿತ ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ ಪ್ರದರ್ಶನವೂ ವಿಶೇಷವಾಗಿಲ್ಲ.
ಕಳೆದ ಏಳೆಂಟು ವರ್ಷಗಳಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಐದು ಟೆಸ್ಟ್ ಪಂದ್ಯಗಳು ಮತ್ತು ಎರಡು ಸರಣಿಗಳನ್ನು ಗೆದ್ದಿದ್ದರೂ, 2010-11 ರಿಂದ ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಈ ಅವಧಿಯಲ್ಲಿ ಇಂಗ್ಲೆಂಡ್‌ ತಂಡ ಸತತ 17 ಟೆಸ್ಟ್ ಸೋಲುಗಳನ್ನು ಅನುಭವಿಸಿರುವುದು ಅವರ ಕಳಪೆ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 22, 2025 04:09 PM