ಹುಬ್ಬಳ್ಳಿ ಮರ್ಯಾದೆ ಹತ್ಯೆ: ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಹುಬ್ಬಳ್ಳಿಯ (Hubballi) ಮಾನ್ಯ ಹಾಗೂ ವಿವೇಕಾನಂದ ಇವರಿಬ್ಬರು ಜಾತಿ ಗಡಿ ಮೀರಿ ಪ್ರೀತಿ ಮಾಡಿದ್ರು.. ಹೆತ್ತವರನ್ನ ಎದುರುಹಾಕಿಕೊಂಡು ಮದುವೆಯನ್ನೂ ಮಾಡಿಕೊಂಡಿದ್ರು. ಮದುವೆಯಾಗಿ 7 ತಿಂಗಳು ಕಳೆದಿತ್ತು. ಯುವತಿ ಸಹ 6 ತಿಂಗಳ ಗರ್ಭಿಣಿಯಾಗಿದ್ಳು. ಆದ್ರೆ ಜಾತಿ ಅಮಲು ತಲೆಗೇರಿಸಿಕೊಂಡಿದ್ದ ಯುವತಿ ತಂದೆ, ಗರ್ಭಿಣಿ ಮಗಳನ್ನೇ ಬಡಿದುಕೊಂದಿದ್ದಾನೆ. ಈ ಮರ್ಯಾದೆಗೇಡು ಹತ್ಯೆಗೆ ಹುಬ್ಬಳ್ಳಿ( Hubballi Honor Killing) ಬೆಚ್ಚಿಬಿದ್ದಿದೆ.
ಹುಬ್ಬಳ್ಳಿ, (ಡಿಸೆಂಬರ್ 22): ಹುಬ್ಬಳ್ಳಿ ನಡೆದ ಮರ್ಯಾದೆ ಹತ್ಯೆ (Hubballi Honor Killing) ಇಡೀ ರಾಜ್ಯವನ್ನೇ ಬಿಚ್ಚಿಬೀಳಿಸಿದೆ. 22 ವರ್ಷ ವಯಸ್ಸಿನ ಮಾನ್ಯ ಹಾಗೂ ವಿವೇಕಾನಂದ ಇಬ್ಬರೂ ಧಾರವಾಡ (Dharwad) ಜಿಲ್ಲೆಯ ಹುಬ್ಬಳ್ಳಿ (Hubballi) ತಾಲೂಕಿನ ಇನಾಂ ವೀರಾಪುರ ಗ್ರಾಮದವರು. ಯುವತಿ ಲಿಂಗಾಯತ ಸಮಾಜಕ್ಕೆ ಸೇರಿದ್ರೆ.. ಯುವಕ ದಲಿತನಾಗಿದ್ದ. ಡಿಗ್ರಿ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಮನೆಯವರ ಬೆದರಿಕೆಗೂ ಬಗ್ಗದಷ್ಟು ಆಳವಾಗಿ ಇಬ್ಬರ ನಡುವೆ ಪ್ರೀತಿ ಬೇರೂರಿತ್ತು. ಮಾನ್ಯ, ವಿವೇಕಾನಂದನ ಬಿಟ್ಟು ಬದುಕಲ್ಲ ಅಂತಾ ಹಠ ಹಿಡಿದ್ದಳು. ವಿವೇಕಾನಂದನಿಗೆ ನನ್ನ ನೀನು ಮದುವೆಯಾಗದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಹಠಕ್ಕೆ ಬಿದ್ದಾಗ, ವಿವೇಕಾನಂದ ಜುಲೈ 19ರಂದು ಹುಬ್ಬಳ್ಳಿಯಲ್ಲಿ ಮಾನ್ಯಳನ್ನ ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಆದ್ರೆ, ಇದೀಗ ಹೆತ್ತ ತಂದೆಯೇ ಮಗಳ ಬದುಕಿಗೆ ಮುಳ್ಳಾಗಿದ್ದಾನೆ.
ಹೌದು..ನಿನ್ನೆ(ಡಿಸೆಂಬರ್ 21) ಸಂಜೆ ಮಾನ್ಯಾಳ ತಂದೆ ಪ್ರಕಾಶ್ ಗೌಡ ಪಾಟೀಲ್ ಸಂಬಂಧಿಕರಾದ ವೀರನಗೌಡ ಪಾಟೀಲ್, ಮತ್ತು ಅರುಣ್ ಗೌಡ ಪಾಟೀಲ್ ಸೇರಿ, ವಿವೇಕಾನಂದನ ಮನೆ ಮೇಲೆ ದಾಳಿ ಮಾಡಿದ್ದು, ವಿವೇಕಾನಂದ ಹಾಗೂ ಅವನ ತಾಯಿ ಜಯಶ್ರೀ ಹಾಗೂ ತಂದೆ ಸುಭಾಷ್ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗೇ ಮಗಳು 6 ತಿಂಗಳ ಗರ್ಭಿಣಿ ಅನ್ನೋದನ್ನು ನೋಡದ ರಾಕ್ಷಸ ತಂದೆ ಪ್ರಕಾಶ್ ಗೌಡ, ಕಬ್ಬಿಣದ ಪೈಪ್ ಹಾಗೂ ಗುದ್ದಲಿಯಿಂದ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಮಾನ್ಯ ಸಾವನ್ನಪ್ಪಿದ್ದು, ಇಂದು (ಡಿಸೆಂಬರ್ 22) ಅಂತ್ಯಕ್ರಿಯೆ ಸಹ ನಡೆಯಿತು.
ಇದನ್ನೂ ನೋಡಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಕೊನೆ ಸಲ ಮಗಳ ಮುಖ ನೋಡಲು ಬಾರದ ಪೋಷಕರು, ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ
ಪತಿ ವಿವೇಕಾನಂದನೇ ಅಂತ್ಯಕ್ರಿಯೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿ ಅಂತಿಮವಾಗಿ ಪತ್ನಿ ಮಾನ್ಯಗಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾನೆ. ಬಳಿಕ ಟಿವಿ9ಗೆ ಜೊತೆ ಮಾತನಾಡಿರುವ ವಿವೇಕಾನಂದ, ಘಟನೆಯ ಭೀಕರತೆಯನ್ನು ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾನೆ. ಹಾಗಾದ್ರೆ, ಪ್ರೀತಿಸಿ ಮದುವೆ ಬಳಿಕ ಏನೆಲ್ಲಾ ಕಷ್ಟಗಳನ್ನ ಅನುವಿಸಿದ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
