Fact Check: ಮಹಾಕುಂಭದಲ್ಲಿ ಬೆಂಕಿಯೊಂದಿಗೆ ಅದ್ಭುತ ಸಾಹಸ ಎಂದು ಚೀನಾದ ವಿಡಿಯೋ ವೈರಲ್

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಭಾರತದ್ದು ಅಥವಾ ಪ್ರಯಾಗ್ರಾಜ್​ದು ಅಲ್ಲ, ಈ ವಿಡಿಯೋ ಚೀನಾದಿಂದ ಬಂದಿದೆ. ವೈರಲ್ ವಿಡಿಯೋದಲ್ಲಿ ಕೆಲವು ಬೋರ್ಡ್‌ಗಳು ಚೀನೀ ಭಾಷೆಯಲ್ಲಿ ಬರೆಯಲ್ಪಟ್ಟಿರುವುದನ್ನು ನಾವು ನೋಡಿದ್ದೇವೆ.

Fact Check: ಮಹಾಕುಂಭದಲ್ಲಿ ಬೆಂಕಿಯೊಂದಿಗೆ ಅದ್ಭುತ ಸಾಹಸ ಎಂದು ಚೀನಾದ ವಿಡಿಯೋ ವೈರಲ್
ವೈರಲ್​ ವಿಡಿಯೋ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 09, 2025 | 10:09 AM

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭದ ಸಿದ್ಧತೆ ಭರ್ಜರಿ ಆಗಿ ನಡೆಯುತ್ತಿದೆ. 144 ವರ್ಷಗಳಿಗೊಮ್ಮೆ ಮಹಾಕುಂಭಮೇಳ ಆಯೋಜಿಸಲಾಗುತ್ತದೆ. ಪ್ರಯಾಗ್‌ರಾಜ್‌ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಜನವರಿ 13 ರಿಂದ ಆರಂಭವಾಗಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕೋಟ್ಯಂತರ ಮಂದಿ ಪಾಲ್ಗೊಳ್ಳಲಿದ್ದಾರೆ. ಇದರ ನಡುವೆ, ವ್ಯಕ್ತಿಯೊಬ್ಬರು ಬೆಂಕಿಯಲ್ಲಿ ಭಯಾನಕ ಆಟವನ್ನು ಆಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಬಳಕೆದಾರರು ಇದನ್ನು ಪ್ರಯಾಗ್‌ರಾಜ್‌ನಿಂದ ಎಂದು ಹೇಳುತ್ತಿದ್ದಾರೆ.

ಬೆಂಕಿಯೊಂದಿಗಿನ ಆಟದ ಈ ವೀಡಿಯೊದಲ್ಲಿ ಕಪ್ಪು ಬಟ್ಟೆ ಮತ್ತು ಕೆಂಪು ನಿಲುವಂಗಿಯನ್ನು ಧರಿಸಿದ ವ್ಯಕ್ತಿ ಖಾಲಿ ರಸ್ತೆಯಲ್ಲಿ ನಿಂತಿರುವುದು ಕಂಡುಬರುತ್ತದೆ. ಸುತ್ತಲೂ ಜನಸಂದಣಿ ಕಾಣಿಸುತ್ತಿದೆ. ಇದರ ನಂತರ ವ್ಯಕ್ತಿ ಇದ್ದಕ್ಕಿದ್ದಂತೆ ರಾಡ್ ತರಹದ ವಸ್ತುವನ್ನು ಎತ್ತಿಕೊಳ್ಳುತ್ತಾನೆ. ಈ ರಾಡ್‌ನ ಎರಡೂ ತುದಿಗಳಲ್ಲಿ ಅಳವಡಿಸಲಾದ ಕಬ್ಬಿಣದ ಬಲೆಗಳಲ್ಲಿ ಎಂಬರ್‌ಗಳು ಗೋಚರಿಸುತ್ತವೆ. ರಾಡ್ ಅನ್ನು ಇದ್ದಕ್ಕಿದ್ದಂತೆ ಎತ್ತಿದಾಗ, ಪ್ರಕಾಶಮಾನವಾದ ಬೆಂಕಿಯು ಹೊರಹೊಮ್ಮುತ್ತದೆ. ಆತ ನಡೆಯುವಾಗ ರಾಡ್ ಅನ್ನು ಅಲುಗಾಡಿಸುತ್ತಲೇ ಇರುತ್ತಾನೆ, ಇದರಿಂದಾಗಿ ಬೆಂಕಿ ಮತ್ತಷ್ಟು ಉರಿಯುತ್ತದೆ.

ಎಕ್ಸ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಹಾ ಕುಂಭ 2025 ನಿಮ್ಮ ಪ್ರಯಾಗರಾಜ್‌ನಲ್ಲಿ. ಪ್ರಯಾಗ್‌ರಾಜ್‌ನಲ್ಲಿ ಈ ಬಾರಿಯ ಕುಂಭವು ಐತಿಹಾಸಿಕವಾಗಿದೆ. ಆದ್ದರಿಂದ ಈ ಮಹಾಕುಂಭದಲ್ಲಿ ಭಾಗವಹಿಸಲು ಪ್ರಯತ್ನಿಸಿ ಮತ್ತು ಕೆಲವು ಅನನ್ಯ ನೆನಪುಗಳನ್ನು ನಿಮ್ಮದಾಗಿಸಿ’’ ಎಂದು ಬರೆದಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಭಾರತದ್ದು ಅಥವಾ ಪ್ರಯಾಗ್ರಾಜ್​ದು ಅಲ್ಲ, ಈ ವಿಡಿಯೋ ಚೀನಾದಿಂದ ಬಂದಿದೆ. ವೈರಲ್ ವಿಡಿಯೋದಲ್ಲಿ ಕೆಲವು ಬೋರ್ಡ್‌ಗಳು ಚೀನೀ ಭಾಷೆಯಲ್ಲಿ ಬರೆಯಲ್ಪಟ್ಟಿರುವುದನ್ನು ನಾವು ನೋಡಿದ್ದೇವೆ. ಇದನ್ನು ನೋಡಿದ ನಮಗೆ ಈ ವಿಡಿಯೋ ಚೀನಾದೊಂದಿಗೆ ಏನಾದರೂ ಸಂಪರ್ಕ ಹೊಂದಿರಬಹುದೆಂದು ಅನಿಸಿತು. ಹೀಗಾಗಿ ವಿಡಿಯೋದಲ್ಲಿ ಕಂಡುಬರುವ ಕೆಂಪು ಬಣ್ಣದ ಬೋರ್ಡ್‌ನಲ್ಲಿ ಬರೆದ ಪಠ್ಯವನ್ನು ನಾವು ಗೂಗಲ್ ಟ್ರಾನ್ಸ್​ಲೇಟರ್ ಸಹಾಯದಿಂದ ಅನುವಾದಿಸಿದ್ದೇವೆ. “ಯುವಾನ್ ಗುವಾನ್ ಆಫ್ ಜಿಯುಚೆಂಗ್” ಎಂದು ಇದರಲ್ಲಿ ಬರೆಯಲಾಗಿದೆ. ಇನ್ನು ವಿಡಿಯೋದಲ್ಲಿ ಕಂಡುಬರುವ ಹೋರ್ಡಿಂಗ್‌ನಲ್ಲಿ, ಅದನ್ನು ಚೈನೀಸ್ ಭಾಷೆಯಲ್ಲಿ ಬರೆಯಲಾಗಿದೆ ಇದು “ಹ್ಯಾಪಿ ಮಾರ್ಕೆಟ್” ಎಂದಾಗಿದೆ.

ವಿಡಿಯೋದಲ್ಲಿ ತುಂಬಾ ಎತ್ತರದ ಕಟ್ಟಡಗಳು ಎಲ್ಲೂ ಗೋಚರಿಸುವುದಿಲ್ಲ. ಅಲ್ಲದೇ ಈ ಸ್ಟಂಟ್ ನಡೆಸುತ್ತಿರುವ ರಸ್ತೆ ಸಾಕಷ್ಟು ಅಗಲವಾಗಿದೆ. ಇದನ್ನು ನೋಡಿದರೆ ಇದು ಜನಸಾಂದ್ರತೆಯ ಪ್ರದೇಶವಲ್ಲ, ನಗರದ ಅಥವಾ ಪಟ್ಟಣದ ಹೊರ ಭಾಗ ಎಂದು ತೋರುತ್ತದೆ. ಈ ಎಲ್ಲಾ ವಿಷಯಗಳನ್ನು ಆಧರಿಸಿ, ಈ ವಿಡಿಯೋ ಚೀನಾದ್ದು ಆಗಿರುವ ಸಾಧ್ಯತೆಯಿದೆ ಎಂದು ನಾವು ಹೇಳಬಹುದು. ಆದಾಗ್ಯೂ, ಈ ವಿಡಿಯೋ ಚೀನಾದ ಯಾವ ಸ್ಥಳದಿಂದ ಬಂದಿದೆ ಎಂಬುದನ್ನು ನಾವು ಖಚಿತಪಡಿಸಲು ಸಾಧ್ಯವಾಗಲಿಲ್ಲ.

ಚೀನಾದಲ್ಲಿ ಈ ಪದ್ದತಿ ರೂಢಿಯಲ್ಲಿದೆ:

ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕುವ ಮೂಲಕ, ಇದನ್ನು ಸೆಪ್ಟೆಂಬರ್ ತ್ತು ಅಕ್ಟೋಬರ್ 2024 ರಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಅಲ್ಲದೆ, ಇದು ಚೀನಾದ ಸಾಂಸ್ಕೃತಿಕ ಪದ್ಧತಿಯಾಗಿದೆ ಎಂದು ಈ ಪೋಸ್ಟ್‌ಗಳಲ್ಲಿ ಹೇಳಲಾಗಿದೆ. ಇದನ್ನು ಹುವೋಹು ಅಥವಾ ಫೈರ್ ಪಾಟ್ ಪ್ರದರ್ಶನ ಎಂದು ಕರೆಯಲಾಗುತ್ತದೆ.

‘ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್’ (ಸಿಜಿಟಿಎನ್) ವರದಿಯ ಪ್ರಕಾರ, ಬೆಂಕಿ ಪಾತ್ರೆ (ಫೈರ್ ಪಾಟ್) ಪ್ರದರ್ಶನವನ್ನು ಪ್ರದರ್ಶಿಸುವ ಕಲಾವಿದರು ಬೆಂಕಿ ನಿರೋಧಕ ಬಟ್ಟೆಗಳನ್ನು ಧರಿಸುತ್ತಾರೆ, ಅಂದರೆ ಬೆಂಕಿಗೆ ತುತ್ತಾಗದ ಬಟ್ಟೆಗಳನ್ನು ಧರಿಸುತ್ತಾರೆ. ಅವರು ಕಬ್ಬಿಣದ ಬಲೆಗಳಲ್ಲಿ ಸುತ್ತುವರಿದ ಸುಡುವ ಕಲ್ಲಿದ್ದಲಿನ ತುಂಡುಗಳನ್ನು ಅಲುಗಾಡಿಸುತ್ತಾರೆ, ಇದರಿಂದಾಗಿ ಕಿಡಿಗಳು ಹೊರಹೊಮ್ಮುತ್ತವೆ. ಈ ಸಂಪ್ರದಾಯವು ಚೀನಾದಲ್ಲಿ ಬಹಳ ಹಿಂದಿನಿಂದಲೂ ಇದೆ. ಇದು ಚಿಂಗ್ ರಾಜವಂಶದ (1644-1911) ಕಾಲದಿಂದಲೂ ನಡೆದುಕೊಂಡು ಬಂದಿದೆ. ಆ ಸಮಯದಲ್ಲಿ, ಹೊಸ ವರ್ಷದ ಸಂದರ್ಭದಲ್ಲಿ, ಗ್ರಾಮಸ್ಥರು ಬೆಂಕಿ ಡ್ರ್ಯಾಗನ್ ನೃತ್ಯ ಮತ್ತು ಪ್ರಾಣಿಗಳನ್ನು ಬಲಿ ನೀಡುತ್ತಿದ್ದರು. ಸಮಯ ಕಳೆದಂತೆ, ಈ ಸಂಪ್ರದಾಯದಲ್ಲಿ ಬದಲಾವಣೆಗಳು ಬಂದವು. ಫೈರ್ ಪಾಟ್ ಪ್ರದರ್ಶನ ಈ ಸಂಪ್ರದಾಯದ ಆಧುನಿಕ ರೂಪವಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವ್ಯಕ್ತಿಯೊಬ್ಬರು ಬೆಂಕಿಯಲ್ಲಿ ಭಯಾನಕ ಆಟವನ್ನು ಆಡುತ್ತಿರುವ ವಿಡಿಯೋ ಪ್ರಯಾಗ್ರಾಜ್​ದು ಅಲ್ಲ. ಇದು ಚೀನಾಕ್ಕೆ ಸಂಬಂಧ ಪಟ್ಟ ವಿಡಿಯೋ ಆಗಿದೆ.

ಫ್ಯಾಕ್ಟ್ ಚೆಕ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್