ಇದೆಂಥಾ ವಿಪರ್ಯಾಸ: ಹೆರಿಗೆಯಾಗುವ ದಿನದವರೆಗೂ ಮಹಿಳೆಗೆ ತಾನು ಗರ್ಭಿಣಿ ಎಂಬುದೇ ತಿಳಿದಿರಲಿಲ್ಲ
ಎಷ್ಟೋ ಆಸ್ಪತ್ರೆಗಳನ್ನು ಸುತ್ತಿದ್ದರು, ಎಷ್ಟೋ ಚಿಕಿತ್ಸೆ ಮಾಡಿಸಿದ್ದರು ಆದರೆ ಆಕೆಗೆ 36 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ದಂಪತಿ ಬಹುತೇಕ ಕನಸನ್ನೇ ಕೈಬಿಟ್ಟಿದ್ದರು. ಆದರೆ ಅವರ ಬದುಕು ಒಂದೇ ದಿನದಲ್ಲಿ ಅನಿರೀಕ್ಷಿತ ತಿರುವು ಪಡೆಯಿತು. ಆಕೆಗೆ ರಕ್ತದೊತ್ತಡ ಪರೀಕ್ಷಿಸಲು ಆಸ್ಪತ್ರೆಗೆ ಹೋದಾಗ ಆಕೆ ಗರ್ಭಿಣಿ ಎಂಬುದು ತಿಳಿದು ಅಚ್ಚರಿಯಾಗಿದೆ, ಅದೇ ದಿನ ಹೆರಿಗೆಯೂ ಆಗಿದೆ.
ಮಹಿಳೆಗೆ ಹೆರಿಗೆಯಾಗುವ 4 ಗಂಟೆಗಳ ಮೊದಲು ತಾನು ಗರ್ಭಿಣಿ ಎನ್ನುವ ವಿಚಾರ ತಿಳಿದು ಅಚ್ಚರಿಪಟ್ಟಿದ್ದಾರೆ. ಈ ಘಟನೆ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಮಹಿಳೆಗೆ ಈಗ 36 ವರ್ಷ, ಆಕೆ ಮದುವೆಯಾಗಿ ಕೆಲವು ವರ್ಷಗಳಾಗಿದ್ದರೂ ಮಕ್ಕಳಾಗದೆ ಪರಿತಪಿಸುತ್ತಿದ್ದರು.
ಮಹಿಳೆ ಪತಿ ಜತೆಗೆ ಸೇರಿ ಐಪಿಎಫ್ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಸಮಾಲೋಚನೆ ನಡೆಸಿದ್ದರು. ಹಲವು ಚಿಕಿತ್ಸೆಗಳನ್ನು ಕೂಡ ಪಡೆದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ವೈದ್ಯರು ತೂಕ ನಷ್ಟ ಮಾಡುವುದೊಂದೇ ದಾರಿ ಎಂದಿದ್ದರು. ಗರ್ಭಿಣಿಯಾಗಲು ತಾನು ಅಸಮರ್ಥಳು ಎಂದು ಮಹಿಳೆ ತಿಳಿದಿದ್ದಳು, ಮಗುವನ್ನು ಹೊಂದುವ ಕನಸನ್ನೂ ಬಿಟ್ಟಿದ್ದರು.
ಕಳೆದ ಡಿಸೆಂಬರ್ನಲ್ಲಿ ಕೈಯಲ್ಲಿ ಮರಗಟ್ಟುವಿಕೆ ಅನುಭವಿಸಿದ್ದಳು. ರಕ್ತದೊತ್ತಡ ಪರೀಕ್ಷಿಸಲು ಸಣ್ಣ ಕ್ಲಿನಿಕ್ಗೆ ಹೋಗಿದ್ದಳು. ವೈದ್ಯರೊಂದಿಗೆ ಸಮಾಲೋಚನೆ ಸಂದರ್ಭದಲ್ಲಿ ತೂಕ ಹೆಚ್ಚಾಗಿದೆ ಎಂದು ಅಲ್ಟ್ರಾಸೌಂಡ್ ಮಾಡಿಸಲು ಹೇಳಿದಾಗ ಗರ್ಭದೊಳಗೆ 2 ಕೆಜಿಯಷ್ಟು ತೂಕದ 8.5 ತಿಂಗಳ ಭ್ರೂ ಇರುವುದು ಪತ್ತೆಯಾಗಿದೆ.
ಮತ್ತಷ್ಟು ಓದಿ: ಪಾಕಿಸ್ತಾನ: ಆರು ಸಹೋದರಿಯರನ್ನು ವರಿಸಿದ ಆರು ಸಹೋದರರು, ಮದುವೆಗಾದ ಖರ್ಚೆಷ್ಟು?
ಆಕೆಯ ಅಧಿಕ ರಕ್ತದೊತ್ತಡದ ಕಾರಣ, ವೈದ್ಯರು ಮಗುವನ್ನು ಸುರಕ್ಷಿತವಾಗಿ ಹೆರಿಗೆ ಮಾಡಲು ನಾಲ್ಕು ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು, ಈಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ