ಪಾಕಿಸ್ತಾನ: ಆರು ಸಹೋದರಿಯರನ್ನು ವರಿಸಿದ ಆರು ಸಹೋದರರು, ಮದುವೆಗಾದ ಖರ್ಚೆಷ್ಟು?
ಆರು ಹೆಣ್ಣುಮಕ್ಕಳ ಮದುವೆ ಮಾಡುವುದೆಂದರೆ ಸುಲಭದ ಮಾತಲ್ಲ, ಕೆಲವರುತಮ್ಮ ಮಕ್ಕಳು ಚೆನ್ನಾಗಿರಲಿ ಎಂದು ಆಸ್ತಿಪಾಸ್ತಿಯನ್ನೇ ಮಾರಾಟ ಮಾಡುವ ಈ ಕಾಲದಲ್ಲಿ 6 ಹೆಣ್ಣುಮಕ್ಕಳ ಮದುವೆ ಕೇವಲ 30 ಸಾವಿರ ರೂ. ಖರ್ಚಿನಲ್ಲಿ ನಡೆದಿದೆ. ಆರು ಸಹೋದರರು ಮತ್ತು ಆರು ಸಹೋದರಿಯರು ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾದರು, ಇದು ಸರಳತೆ ಮತ್ತು ಏಕತೆಗೆ ಅದ್ಭುತ ಉದಾಹರಣೆಯಾಗಿದೆ. 100 ಕ್ಕೂ ಹೆಚ್ಚು ಅತಿಥಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ದುಬಾರಿ ಸಂಪ್ರದಾಯಗಳನ್ನು ತ್ಯಜಿಸಿ ಸರಳತೆ ಒತ್ತು ನೀಡಲಾಯಿತು.
ಇದು ಡಿಜಿಟಲ್ ಯುಗ, ಎಲ್ಲಿ ಯಾವ ಘಟನೆ ನಡೆದರೂ ಕ್ಷಣಮಾತ್ರದಲ್ಲಿ ನಮ್ಮನ್ನು ತಲುಪಿಬಿಡುತ್ತದೆ. ಹಾಗೆಯೇ ಪಾಕಿಸ್ತಾನದಲ್ಲಿ 6 ಸಹೋದರರು 6 ಸಹೋದರಿಯರನ್ನು ಮದುವೆಯಾಗಿರುವ ಘಟನೆ ವರದಿಯಾಗಿದೆ. ಎಷ್ಟೇ ಸಾಧಾರಣ ಮದುವೆ ಎನಿಸಿಕೊಂಡರೂ ಒಂದು ಮದುವೆ ಕನಿಷ್ಠವೆಂದರೂ 6-7 ಲಕ್ಷ ರೂ. ಬೇಕೇ ಬೇಕು, ಅಂಥಾ ಸಮಯದಲ್ಲಿ ಕೇವಲ 30 ಸಾವಿರ ರೂ,ನಲ್ಲಿ 6 ಮದುವೆಗಳು ನಡೆದಿವೆ.
ಮದುವೆಯಲ್ಲಿ ಸುಮಾರು 100 ಮಂದಿ ಭಾಗವಹಿಸಿದ್ದರು. ಒಟ್ಟಿಗೆ ಮದುವೆಯಾಗುವುದರಿಂದ ಖರ್ಚು ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಸಹೋದರಿಗೆ 18 ವರ್ಷ ತುಂಬುವವರೆಗೂ ಕಾದು ಎಲ್ಲರೂ ಒಟ್ಟಿಗೆ ವಿವಾಹವಾಗಿದ್ದಾರೆ.
ಈ ಮದುವೆಗೆ ಯಾರೂ ವರದಕ್ಷಿಣೆ ತೆಗೆದುಕೊಂಡಿಲ್ಲ, ಪಾಕಿಸ್ತಾನದ ಮುಲ್ತಾನ್ನಲ್ಲಿ ಈ ಘಟನೆ ನಡೆದಿದೆ. ವಧು-ವರರು ಸೋದರ ಸಂಬಂಧಿಗಳು ಎಂದು ಹೇಳಲಾಗುತ್ತಿದೆ. ಇದೀಗ ಈ ಸಾಮೂಹಿಕ ವಿವಾಹ ಚರ್ಚೆಗೆ ಗ್ರಾಸವಾಗಿದೆ.
ಮತ್ತಷ್ಟು ಓದಿ: Viral: ಪತಿ ಹಾಗೂ ತನ್ನ ಆರು ಮಂದಿ ಮಕ್ಕಳನ್ನು ತೊರೆದು ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ
ಈ ಸಾಮೂಹಿಕ ವಿವಾಹಕ್ಕೆ ಕೇವಲ 1 ಲಕ್ಷ ಪಾಕಿಸ್ತಾನಿ ರೂಪಾಯಿ ಖರ್ಚಾಗಿದೆ. ಭಾರತೀಯ ಕರೆನ್ಸಿಯಲ್ಲಿ ನೋಡಿದರೆ ಈ ಮೊತ್ತ ಕೇವಲ 30,000 ರೂ. ಆಗಿದೆ.
ಯಾರೂ ವರದಕ್ಷಿಣೆ ತೆಗೆದುಕೊಂಡಿಲ್ಲ, ಅನಗತ್ಯ ಖರ್ಚು ಮಾಡಿಲ್ಲ, ಸರಳವಾಗಿ ಮದುವೆಯಾಗಿದ್ದಾರೆ. ಇದೇ ವೇಳೆ ವರನ ತಂದೆಯನ್ನು ಈ ವಿಚಾರವಾಗಿ ಮಾತನಾಡಿಸಿದಾಗ, ಕೆಲವು ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಇಂತಹ ಘಟನೆಗಳು ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ