Viral: ಹಳೆ ಗಾಡಿಗಳ ಪಾರ್ಟ್ಸ್ ಬಳಸಿ ಕನಸಿನ ಮನೆ ನಿರ್ಮಿಸಿದ ವ್ಯಕ್ತಿ; ಹೇಗಿದೆ ನೋಡಿ ಕೇರಳದ ಡಿಫರೆಂಟ್ ಮನೆ
ಹೆಚ್ಚಿನವರು ತಮ್ಮ ಕನಸಿನ ಮನೆ ಹಾಗಿರ್ಬೇಕು, ಹೀಗಿರ್ಬೇಕು ಅಂತೆಲ್ಲಾ ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಖರ್ಚನ್ನು ಕೂಡಾ ಮಾಡ್ತಾರೆ. ಆದ್ರೆ ಇಲ್ಲೊಬ್ರು ವ್ಯಕ್ತಿ ಹಳೆಯ ಗಾಡಿಗಳ ಪಾರ್ಟ್ಸ್‌ಗಳನ್ನು ಬಳಸಿ ತಮ್ಮ ಕನಸಿನ ಮನೆಯನ್ನು ನಿರ್ಮಿಸಿದ್ದು, ಈ ವಿಶಿಷ್ಟ ಮನೆಯ ಹೋಮ್ ಟೂರ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೆಲವರು ಮನೆಗಳನ್ನು ಸಿಂಪಲ್ ಆಗಿ ನಿರ್ಮಾಣ ಮಾಡಿದ್ರೆ ಇನ್ನೂ ಕೆಲವರು ದುಬಾರಿ ಬೆಲೆಯ ಇಂಟಿರಿಯರ್ ಡಿಸೈನ್‌ಗಳನ್ನು ಮಾಡಿಸುವ ಮೂಲಕ ಐಷಾರಾಮಿ ಮನೆಗಳನ್ನು ನಿರ್ಮಾಣ ಮಾಡ್ತಾರೆ. ಇನ್ನೂ ಗಿಡ-ಮರಗಳನ್ನು ಇಷ್ಟಪಡುವವರು ತಮ್ಮ ಮನೆಯನ್ನೇ ಮಿನಿ ಗಾರ್ಡನ್ ಆಗಿ ಪರಿರ್ವತಿಸಿರುತ್ತಾರೆ. ಅದೇ ರೀತಿ ಇಲ್ಲೊಬ್ರು ಆಟೋಮೊಬೈಲ್ ಉತ್ಸಾಹಿ ಹಳೆ ಗಾಡಿಗಳ ಪಾರ್ಟ್ಸ್‌ಗಳನ್ನು ಬಳಸಿ ತಮ್ಮ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಹೌದು ಬಜಾಜ್ ಸ್ಕೂಟರ್-ಅಂಬಾಸಿಡರ್ ಕಾರ್ ಸೀಟಿನ ಸೋಫಾ, ನಟ್ ಬೋಲ್ಟ್‌ನ ಡೈನಿಂಗ್ ಟೇಬಲ್ ಹೀಗೆ ಗ್ಯಾರೇಜ್ ಸ್ಕ್ರ್ಯಾಪ್‌ಗಳನ್ನು ಬಳಸಿ ತಮ್ಮ ಮನೆಯನ್ನು ಡಿಸೈನ್ ಮಾಡಿದ್ದಾರೆ. ಈ ವಿಶಿಷ್ಟ ಮನೆಯ ಹೋಮ್ ಟೂರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೇರಳದ ಆಟೋಮೊಬೈಲ್ ಉತ್ಸಾಹಿಯೊಬ್ಬರು ಗ್ಯಾರೇಜ್ ಸ್ಕ್ರ್ಯಾಪ್‌ಗಳನ್ನೇ ಬಳಸಿ ತಮ್ಮ ಮನೆಯನ್ನು ವಿಶಿಷ್ಟ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಮನೆಯ ಮಿನಿ ಹೋಮ್ ಟೂರ್ ವಿಡಿಯೋವನ್ನು ಕಂಟೆಂಟ್ ಕ್ರಿಯೆಟರ್ ಪ್ರಿಯಮ್ ಸಾರಸ್ವತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹಳೆಯ ವಾಹನಗಳ ಬಿಡಿಭಾಗಗಳನ್ನು ಬಳಸಿಕೊಂಡು ವ್ಯಕ್ತಿಯೊಬ್ಬರು ತಮ್ಮ ಮನೆಯ ಪೀಠೋಪಕರಣಗಳನ್ನು ತಯಾರಿಸಿರುವ ದೃಶ್ಯವನ್ನು ಕಾಣಬಹುದು. ಅಂಬಾಸಿಡರ್ ಕಾರು ಹಾಗೂ ಬಜಾಜ್ ಸ್ಕೂಟರ್ ಸೀಟ್‌ಗಳನ್ನು ಬಳಸಿ ಸೋಫಾ ಸೆಟ್ ಆಗಿ ಪರಿವರ್ತಿಸಿರುವ, ಬಜಾಜ್ ಚೇತಕ್‌ನ ಹ್ಯಾಂಡಲ್ ಬಳಸಿ ಪ್ರವೇಶ ದ್ವಾರದ ಲೈಟ್ ವಿನ್ಯಾಸ ಮಾಡಿರುವ, ನಟ್ ಮತ್ತು ಬೋಲ್ಟ್‌ಗಳನ್ನು ಬಳಸಿ ಡೈನಿಂಗ್ ಟೇಬಲ್ ವಿನ್ಯಾಸ ಮಾಡಿರುವ, ಸ್ವಿಫ್ಟ್ ಕಾರಿನ ಪ್ರೆಶರ್ ಪ್ಲೇಟ್ ಅನ್ನು ಗಡಿಯಾರವನ್ನಾಗಿ ಪರಿವರ್ತಿಸರುವ ಹಾಗೂ ಪೆಟ್ರೋಲ್ ಪಂಪ್ ನಳಿಕೆಯನ್ನು ವಾಶ್ ಬೇಸಿನ್ ಆಗಿ ಪರಿವರ್ತಿಸಿ ಹೀಗೆ ಮನೆಯ ಪ್ರತಿಯೊಂದು ಪೀಠೋಪಕರಣ, ಡಿಸೈನ್‌ಗಳನ್ನೂ ಗ್ಯಾರೇಜ್ ಸ್ಕ್ರ್ಯಾಪ್‌ಗಳಿಂದ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಸ್ವಂತ ಅಣ್ಣನನ್ನೇ ಮದುವೆಯಾಗಿ ಗರ್ಭಿಣಿಯಾದ ತಂಗಿ?: ವೈರಲ್ ವಿಡಿಯೋದ ನಿಜಾಂಶ ಇಲ್ಲಿದೆ
priyamsaraswat ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 70.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಈ ಮನೆಯಂತೂ ತುಂಬಾ ಅದ್ಭುತವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂಟಿರಿಯರ್ ಡಿಸೈನರ್‌ಗಳಿಗಿಂತ ಇವರೇ ಅದ್ಭುತವಾಗಿ ಮನೆಯನ್ನು ಡಿಸೈನ್ ಮಾಡಿದ್ದಾರೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿಶಿಷ್ಟ ಮನೆಯನ್ನು ಕಂಡು ಫುಲ್ ಬೋಲ್ಡ್ ಆಗಿದ್ದಾರೆ.
ವೈರಲ್ ಸುಸ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ