Viral: ಮಾರುಕಟ್ಟೆಗೆ ಬಂತು ರಾಮ ಮಂದಿರ ವಿನ್ಯಾಸದ ಸ್ಪೆಷಲ್ ವಾಚ್‌; ಈ ವಿಶೇಷ ಆವೃತ್ತಿ ವಾಚ್‌ ಬೆಲೆ ಎಷ್ಟು ಗೊತ್ತಾ?

ವಾಚ್‌ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕಾಲಕಾಲಕ್ಕೆ ವಿವಿಧ ವಿನ್ಯಾಸಗಳ, ಆವೃತ್ತಿಗಳ ವಾಚ್‌ಗಳನ್ನು ಪರಿಚಯಿಸುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ವಿಶಿಷ್ಟ ವಾಚ್‌ ಒಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೌದು ಜಾಕೋಬ್‌ ಆಂಡ್‌ ಕೋ ಕಂಪೆನಿ ಶ್ರೀರಾಮ, ಆಂಜನೇಯ ಮತ್ತು ರಾಮ ಮಂದಿರದ ವಿನ್ಯಾಸವಿರುವ ಈ ವಿಶಿಷ್ಟ ವಾಚ್‌ ತಯಾರಿಸಿದೆ. ಈ ವಿಶಿಷ್ಟ ಹಾಗೇನೇ ದುಬಾರಿ ವಾಚ್‌ ಬೆಲೆ ಎಷ್ಟು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Viral: ಮಾರುಕಟ್ಟೆಗೆ ಬಂತು ರಾಮ ಮಂದಿರ ವಿನ್ಯಾಸದ ಸ್ಪೆಷಲ್ ವಾಚ್‌; ಈ ವಿಶೇಷ ಆವೃತ್ತಿ ವಾಚ್‌ ಬೆಲೆ ಎಷ್ಟು ಗೊತ್ತಾ?
ರಾಮ ಮಂದಿರ ವಿನ್ಯಾಸದ ಸ್ಪೆಷಲ್ ವಾಚ್‌
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 08, 2025 | 5:21 PM

ಕಳೆದ ವರ್ಷ ಆಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯಾದಂತಹ ಸಂದರ್ಭದಲ್ಲಿ ರಾಮ ಮಂದಿರ ಥೀಮ್‌ನಲ್ಲಿ ಕೇಕ್‌ ತಯಾರಿಸಿದಂತಹ, ರಾಮ ಮಂದಿರ ಥೀಮ್‌ನ ವಜ್ರದ ಹಾರ ತಯಾರಿಸಿದ್ದಂತ ಸುದ್ದಿಗಳು ಬಹಳನೇ ವೈರಲ್‌ ಆಗಿದ್ದವು. ಇದೀಗ ಇಲ್ಲೊಂದು ವಾಚ್‌ ಕಂಪೆನಿ ಕೂಡಾ ರಾಮ ಮಂದಿರ ವಿನ್ಯಾಸದ ವಾಚ್‌ ಪರಿಚಯಿಸಿದೆ. ತನ್ನ ವಿಭಿನ್ನ ವಿನ್ಯಾಸಗಳಿಂದಲೇ ಸಾಕಷ್ಟು ಹೆಸರುವಾಸಿಯಾಗಿರುವ ಜಾಕೋಬ್‌ & ಕೋ ಕಂಪೆನಿ ಶ್ರೀರಾಮ, ಆಂಜನೇಯ ಮತ್ತು ರಾಮ ಮಂದಿರದ ವಿನ್ಯಾಸವಿರುವ ಈ ವಿಶಿಷ್ಟ ವಾಚ್‌ ತಯಾರಿಸಿದೆ. ಈ ವಿಶಿಷ್ಟ ಹಾಗೇನೇ ದುಬಾರಿ ವಾಚ್‌ ಬೆಲೆ ಎಷ್ಟು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ತನ್ನ ವಿಶಿಷ್ಟ ವಿನ್ಯಾಸಗಳಿಗೆ ಹೆಸರುವಾಸಿಯಾದ ವಾಚ್‌ ಬ್ರಾಂಡ್‌ ಜಾಕೋಬ್‌ & ಕೋ ಈ ವಿಶೇಷ ಆವೃತ್ತಿಯ ವಾಚ್‌ ಬಿಡುಗಡೆ ಮಾಡಿದೆ. ಈ ಆವೃತ್ತಿಯ ಸುಮಾರು 49 ವಾಚ್‌ಗಳನ್ನು ತಯಾರಿಸಲಾಗಿದ್ದು, ಇದಾಗಲೇ 35 ವಾಚ್‌ ಮಾರಾಟವಾಗಿದೆ.

Limited Edition Ram Mandir Watch

Limited Edition Ram Mandir Watch

ಜಾಕೋಬ್‌ & ಕೋ ಭಾರತೀಯ ಮೂಲಕ ವಾಚ್‌ ಕಂಪೆನಿಯಾದ ಎಥೋಸ್‌ ಸಹಯೋಗದೊಂದಿಗೆ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಈ ವಿಶೇಷ ವಾಚ್‌ ತಯಾರಿಸಿದೆ. ಈ ವಾಚ್‌ನಲ್ಲಿ ಶ್ರೀರಾಮ, ಆಂಜನೇಯ ಮತ್ತು ರಾಮಮಂದಿರ ವಿಶೇಷ ವಿನ್ಯಾಸವಿದೆ. ಇದು 44 ಎಂಎಂ ರೋಸ್‌ ಗೋಲ್ಡ್‌ನಿಂದ ಆವೃತವಾಗಿದೆ. ಈ ವಿಶೇಷ ಆವೃತ್ತಿಯ ವಾಚ್‌ನ ಬೆಲೆ ಬರೋಬ್ಬರಿ 34 ಲಕ್ಷ ರೂಪಾಯಿಗಳು.

ಇದನ್ನೂ ಓದಿ: ಕೆ-ಪಾಪ್‌ ಹಾಡಿಗೆ ಹೆಜ್ಜೆ ಹಾಕಿದ ಭರತನಾಟ್ಯ ಕಲಾವಿದೆಯರು; ವಿಡಿಯೋ ವೈರಲ್‌

ಈ ವಾಚ್‌ನ ಪ್ರಮುಖ ಲಕ್ಷಣಗಳು:

ಈ ಸೀಮಿತ ಆವೃತ್ತಿಯ ವಾಚ್‌ ಮೇಲೆ ಶ್ರೀ ರಾಮ, ಆಂಜನೇಯ ಮತ್ತು ರಾಮಮಂದಿರದ ವಿನ್ಯಾಸವನ್ನು ರಚಿಸಲಾಗಿದೆ. ಇದು ರಾಮಜನ್ಮ ಭೂಮಿಯ ಐತಿಹಾಸಿಕ ಪ್ರಾಮುಖ್ಯತೆಯನ್ನು ಸಂಕೇತಿಸುತ್ತದೆ. ಇನ್ನೂ ಈ ವಾಚ್‌ ಕೇಸರಿ ಬಣ್ಣದ ರಬ್ಬರ್‌ ಪಟ್ಟಿಯನ್ನು ಹೊಂದಿದ್ದು, ಇದು ಆಧ್ಯಾತ್ಮಿಕತೆ ಮತ್ತು ಶುದ್ಧತೆಯನ್ನು ಸಂಕೇತಿಸುತ್ತದೆ. ಮತ್ತು ಹಿಂದೂ ಧರ್ಮದ ಮೌಲ್ಯಗಳನ್ನು ಪ್ರತಿಧ್ವನಿಸುತ್ತದೆ. ಈ ವಿಶೇಷ ಆವೃತ್ತಿಯ ಸುಮಾರು 49 ವಾಚ್‌ಗಳನ್ನು ತಯಾರಿಸಲಾಗಿದ್ದು, ಇದಾಗಲೇ 35 ವಾಚ್‌ ಮಾರಾಟವಾಗಿದೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?