ಕೊರೊನಾ ಕ್ರಿಮಿ ಮಟ್ಟ ಹಾಕಲು ಹಾಂಗ್‌ಕಾಂಗ್‌ ಮಾದರಿ ಜಾರಿ ಆಗುತ್ತದಾ?

ಕೊರೊನಾ ಕ್ರಿಮಿ ಮಟ್ಟ ಹಾಕಲು ಹಾಂಗ್‌ಕಾಂಗ್‌ ಮಾದರಿ ಜಾರಿ ಆಗುತ್ತದಾ?

ಬೆಂಗಳೂರು: ಕೊರೊನಾ ಕ್ರಿಮಿ ಮಟ್ಟ ಹಾಕಲು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಎರಡನೆಯ ಹಂತ ಕೊನೆಗೊಳ್ಳಲು ಇನ್ನು ಮೂರೇ ದಿನ ಬಾಕಿಯಿದೆ. ಈ ಹಂತದಲ್ಲಿ ತೆರವು ಮಾಡಬೇಕೆ, ಬೇಡವೇ ಎಂಬ ಬಗ್ಗೆ ತಜ್ಞರ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.

ವಿವಿಧ ದೇಶಗಳ ಲಾಕ್ ಡೌನ್ ಎಕ್ಸಿಟ್​ ಪ್ಲಾನ್​ಗಳ ಅಧ್ಯಯನ ನಡೆಸುತ್ತಿರುವ ತಜ್ಞರು, ಮೇ 3 ರ ಬಳಿಕ ಹಾಂಕ್ ಕಾಂಗ್ ಮಾದರಿ ಅನುಸರಿಸುವಂತೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.

ಏನಿದು ಹಾಂಗ್‌ಕಾಂಗ್‌ ಮಾದರಿ? ಹಾಗಾಗಿ ಕೊರೊನಾ ಕಟ್ಟಿಹಾಕಲು,ಲಾಕ್‌ಡೌನ್‌ನಿಂದ ಹೊರಬರಲು ಹಾಂಗ್‌ಕಾಂಗ್‌ ಮಾಡೆಲ್ ಸಾಧ್ಯತೆಯಿದೆ. ಹಾಗಾದರೆ ಏನಿದು ಹಾಂಗ್‌ಕಾಂಗ್‌ ಮಾದರಿ? ಲಾಕ್‌ಡೌನ್‌ ಮುಂದುವರಿಸದೆ, ಕೋವಿಡ್ ಸೋಂಕಿತರನ್ನು ಪರಿಣಾಮಕಾರಿಯಾಗಿ ಪತ್ತೆ ಹಚ್ಚುವುದು. ಸೋಂಕಿತರ ಸಂಪರ್ಕಕ್ಕೆ ಒಳಗಾದವರನ್ನು ಕಟ್ಟುನಿಟ್ಟಿನಲ್ಲಿ ಕ್ವಾರೆಂಟೈನ್​ಗೆ ಒಳಪಡಿಸುವುದು. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ನಿಯಮದ ಶಿಸ್ತಿನ ಪಾಲನೆ ಮಾಡುವುದು.. ಈ ಮಾದರಿ ಅಂಶಗಳೇ ಹಾಂಗ್‌ಕಾಂಗ್‌ ಪಾಲಿಸುತ್ತಿರುವ ಸೂತ್ರವಾಗಿದೆ.

Click on your DTH Provider to Add TV9 Kannada