ಹುಷಾರು! ಈ ರೋಗ ಲಕ್ಷಣಗಳು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ..
ವಾಷಿಂಗ್ಟನ್: ಕಿಲ್ಲರ್ ಕೊರೊನಾ ಆರ್ಭಟಕ್ಕೆ ಸಿಲುಕಿ ಇಡೀ ಜಗತ್ತೇ ನಡುಗಿ ಹೋಗಿದೆ. ಚೀನಾದಲ್ಲಿ ಜನಿಸಿದ ಕೊರೊನಾಗೆ 2 ಲಕ್ಷಕ್ಕೂ ಹೆಚ್ಚು ಮಂದಿ ವಿಶ್ವದಾದ್ಯಂತ ಬಲಿಯಾಗಿದ್ದಾರೆ. ಇನ್ನೂ ಈ ಮಹಾಮಾರಿಗೆ ಈವರೆಗೆ ಯಾರೂ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಹಿಂದೆ ಅಮೆರಿಕದ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ನ ಕೇವಲ 3 ಲಕ್ಷಣಗಳನ್ನು ಮಾತ್ರ ಪಟ್ಟಿಮಾಡಿತ್ತು. ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಗಳನ್ನು ತಿಳಿಸಿತ್ತು. ಆದ್ರೆ ಇದೀಗ ಮಹಾಮಾರಿ ಕೊವಿಡ್ 19 ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಇದೀಗ ಅಮೆರಿಕದ ಆರೋಗ್ಯ […]
ವಾಷಿಂಗ್ಟನ್: ಕಿಲ್ಲರ್ ಕೊರೊನಾ ಆರ್ಭಟಕ್ಕೆ ಸಿಲುಕಿ ಇಡೀ ಜಗತ್ತೇ ನಡುಗಿ ಹೋಗಿದೆ. ಚೀನಾದಲ್ಲಿ ಜನಿಸಿದ ಕೊರೊನಾಗೆ 2 ಲಕ್ಷಕ್ಕೂ ಹೆಚ್ಚು ಮಂದಿ ವಿಶ್ವದಾದ್ಯಂತ ಬಲಿಯಾಗಿದ್ದಾರೆ. ಇನ್ನೂ ಈ ಮಹಾಮಾರಿಗೆ ಈವರೆಗೆ ಯಾರೂ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಈ ಹಿಂದೆ ಅಮೆರಿಕದ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ನ ಕೇವಲ 3 ಲಕ್ಷಣಗಳನ್ನು ಮಾತ್ರ ಪಟ್ಟಿಮಾಡಿತ್ತು. ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಗಳನ್ನು ತಿಳಿಸಿತ್ತು. ಆದ್ರೆ ಇದೀಗ ಮಹಾಮಾರಿ ಕೊವಿಡ್ 19 ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಇದೀಗ ಅಮೆರಿಕದ ಆರೋಗ್ಯ ಸಂಸ್ಥೆ ಮತ್ತೆ ಹೊಸದಾಗಿ 6 ಕೊರೊನಾ ಲಕ್ಷಣಗಳನ್ನು ಕಂಡುಹಿಡಿದಿದೆ.
ಕೊರೊನಾ ವೈರಸ್ನ ಹೊಸ ರೋಗ ಲಕ್ಷಣಗಳು:
* ಶೀತ, * ಮೈ ನಡುಗುವಿಕೆ, * ಸ್ನಾಯು ಸೆಳೆತ, * ತಲೆನೋವು, * ಗಂಟಲು ನೋವು ಮತ್ತು * ರುಚಿ, ವಾಸನೆ ಕಂಡುಹಿಡಿಯುವ ಸಾಮರ್ಥ್ಯ ಕಳೆದುಕೊಳ್ಳುವುದು
Published On - 5:13 pm, Wed, 29 April 20