
ಬೆಂಗಳೂರು: ನಗರದ ಮಾಗಡಿ ರಸ್ತೆಯ ಮೆಟ್ರೋ ರೈಲು ನಿಲ್ದಾಣಕ್ಕೆ “ಡಾ. ರಾಜ್ ಕುಮಾರ್ ಮೆಟ್ರೋ ರೈಲು ನಿಲ್ದಾಣ ” ಎಂದು ನಾಮಕರಣ ಮಾಡುವ ಬಗ್ಗೆ ಅಗಸ್ಟ್ 4ರಂದು ನಡೆದ ಪಾಲಿಕೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ.
ಈ ವಿಷಯವಾಗಿ ಇಂದು ನಮ್ಮ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಸೇಥ್ ಅವರನ್ನು ಖುದ್ದಾಗಿ ಭೇಟಿ ಮಾಡಿದ ಮಹಾಪೌರ ಗೌತಮ್ ಕುಮಾರ್ ಅವರು ಪಾಲಿಕೆಯ ನಿರ್ಣಯದ ಪ್ರತಿಯನ್ನು ಮತ್ತು ಮನವಿ ಪತ್ರವನ್ನು ಅಜಯ್ ಸೇಥ್ರವರಿಗೆ ಸಲ್ಲಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾದ ಎನ್.ಆರ್. ರಮೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.