ಸೋಂಕಿತರ ಮನೆ gate​ಗೆ ಕಬ್ಬಿಣದ ಸಲಾಕೆ ಜಡಿದು ಸೀಲ್​ ಮಾಡಿದ BBMP

|

Updated on: Aug 09, 2020 | 3:43 PM

ಬೆಂಗಳೂರು: ಸೋಂಕಿತನ ಮನೆಯ ಗೇಟ್​ಗೆ ಕಬ್ಬಿಣದ ಸಲಾಕೆ ಜಡಿದು BBMP ಅಧಿಕಾರಿಗಳು ಸೀಲ್​ ಮಾಡಿದ್ದಾರೆ. ಹೀಗಾಗಿ, ಮನೆಯ ಮುಂಗಟ್ಟು ಜೈಲ್​ ಬಾಗಿಲಂತೆ ಹೋಲುತ್ತಿದೆ. ಇಷ್ಟು ದಿನ ಸೋಂಕಿತರ ಮನೆ ಬಾಗಿಲಿಗೆ ತಗಡು ಶೀಟು ಹಾಕುತ್ತಿದ್ದ BBMP ಅಧಿಕಾರಿಗಳು ಇದೀಗ ಈ ಕೆಲಸಕ್ಕೆ ಕೈಹಾಕಿದ್ದಾರೆ. ಅಂದ ಹಾಗೆ, ಈ ದೃಶ್ಯ ಕಂಡುಬಂದಿದ್ದು ಫ್ರೇಜರ್‌ ಟೌನ್​ನಲ್ಲಿ. ಸುಮಾರು 12 ಅಡಿ ಎತ್ತರದ ಕಬ್ಬಿಣದ ಸಲಾಕೆಗಳನ್ನ ಜೈಲಿನ ಸೆಲ್​ ಮಾದರಿಯಲ್ಲಿ ಹಾಕಿರುವ ಪಾಲಿಕೆ ಸಿಬ್ಬಂದಿ ಮನೆಯಿಂದ ಯಾರೂ ಹೊರ ಬರದಂತೆ ಮಾಡಿಬಿಟ್ಟಿದ್ದಾರೆ. […]

ಸೋಂಕಿತರ ಮನೆ gate​ಗೆ ಕಬ್ಬಿಣದ ಸಲಾಕೆ ಜಡಿದು ಸೀಲ್​ ಮಾಡಿದ BBMP
Follow us on

ಬೆಂಗಳೂರು: ಸೋಂಕಿತನ ಮನೆಯ ಗೇಟ್​ಗೆ ಕಬ್ಬಿಣದ ಸಲಾಕೆ ಜಡಿದು BBMP ಅಧಿಕಾರಿಗಳು ಸೀಲ್​ ಮಾಡಿದ್ದಾರೆ. ಹೀಗಾಗಿ, ಮನೆಯ ಮುಂಗಟ್ಟು ಜೈಲ್​ ಬಾಗಿಲಂತೆ ಹೋಲುತ್ತಿದೆ. ಇಷ್ಟು ದಿನ ಸೋಂಕಿತರ ಮನೆ ಬಾಗಿಲಿಗೆ ತಗಡು ಶೀಟು ಹಾಕುತ್ತಿದ್ದ BBMP ಅಧಿಕಾರಿಗಳು ಇದೀಗ ಈ ಕೆಲಸಕ್ಕೆ ಕೈಹಾಕಿದ್ದಾರೆ. ಅಂದ ಹಾಗೆ, ಈ ದೃಶ್ಯ ಕಂಡುಬಂದಿದ್ದು ಫ್ರೇಜರ್‌ ಟೌನ್​ನಲ್ಲಿ.

ಸುಮಾರು 12 ಅಡಿ ಎತ್ತರದ ಕಬ್ಬಿಣದ ಸಲಾಕೆಗಳನ್ನ ಜೈಲಿನ ಸೆಲ್​ ಮಾದರಿಯಲ್ಲಿ ಹಾಕಿರುವ ಪಾಲಿಕೆ ಸಿಬ್ಬಂದಿ ಮನೆಯಿಂದ ಯಾರೂ ಹೊರ ಬರದಂತೆ ಮಾಡಿಬಿಟ್ಟಿದ್ದಾರೆ. ಇದರಿಂದ, ಸೋಂಕಿತನ ಕುಟುಂಬಸ್ಥರಿಗೆ ತೀವ್ರ ಮುಜುಗರ ಉಂಟಾಗಿದೆ.