ಬೆಂಗಳೂರಲ್ಲಿ ಆ್ಯಂಟಿಜೆನ್ ಟೆಸ್ಟ್ ಹೆಚ್ಚಿಸಲು ನಿರ್ಧಾರ, ದಿನಾ 20 ಸಾವಿರ ಪರೀಕ್ಷೆಗೆ ಸಿದ್ಧತೆ
ಬೆಂಗಳೂರು: ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ನಗರದಲ್ಲಿ ಸೋಂಕಿತರನ್ನ ಮತ್ತಷ್ಟು ಬೇಗ ಪತ್ತೆ ಹಚ್ಚಲು ಆ್ಯಂಟಿಜೆನ್ ಟೆಸ್ಟ್ ನಡೆಸಲಾಗುತ್ತಿದೆ. ಪ್ರತಿನಿತ್ಯ 20 ಸಾವಿರ ಆ್ಯಂಟಿಜೆನ್ ಟೆಸ್ಟ್ ಮಾಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಮುಂದಿನ 2 ತಿಂಗಳು ನಿತ್ಯ 20 ಸಾವಿರ ಮಂದಿಗೆ ಆ್ಯಂಟಿಜೆನ್ ಟೆಸ್ಟ್ ಮಾಡುವ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ. ನಗರದಲ್ಲಿ ಈವರೆಗೆ 23,640 ಜನರಿಗೆ ಆ್ಯಂಟಿಜೆನ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ 5,186 ಸೋಂಕಿತರು ಪತ್ತೆಯಾಗಿದ್ದಾರೆ. ಆ್ಯಂಟಿಜೆನ್ ಟೆಸ್ಟ್ ಬಳಿಕ ಸೋಂಕಿತರನ್ನು […]
ಬೆಂಗಳೂರು: ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ನಗರದಲ್ಲಿ ಸೋಂಕಿತರನ್ನ ಮತ್ತಷ್ಟು ಬೇಗ ಪತ್ತೆ ಹಚ್ಚಲು ಆ್ಯಂಟಿಜೆನ್ ಟೆಸ್ಟ್ ನಡೆಸಲಾಗುತ್ತಿದೆ. ಪ್ರತಿನಿತ್ಯ 20 ಸಾವಿರ ಆ್ಯಂಟಿಜೆನ್ ಟೆಸ್ಟ್ ಮಾಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ.
ಮುಂದಿನ 2 ತಿಂಗಳು ನಿತ್ಯ 20 ಸಾವಿರ ಮಂದಿಗೆ ಆ್ಯಂಟಿಜೆನ್ ಟೆಸ್ಟ್ ಮಾಡುವ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ. ನಗರದಲ್ಲಿ ಈವರೆಗೆ 23,640 ಜನರಿಗೆ ಆ್ಯಂಟಿಜೆನ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ 5,186 ಸೋಂಕಿತರು ಪತ್ತೆಯಾಗಿದ್ದಾರೆ. ಆ್ಯಂಟಿಜೆನ್ ಟೆಸ್ಟ್ ಬಳಿಕ ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವುದು ವಿಳಂಬವಾಗುತ್ತಿದೆ.
ಆ್ಯಂಟಿಜೆನ್ ಟೆಸ್ಟ್ನಲ್ಲಿ ಕೇವಲ 20 ನಿಮಿಷದಲ್ಲಿ ವರದಿ ಬರುತ್ತಿದೆ. ತಕ್ಷಣವೇ ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲು ಆಗ್ತಿಲ್ಲ. ಹೀಗಾಗಿ ಸೋಂಕಿತರನ್ನ ಮನೆಗೆ ಕಳುಹಿಸಲಾಗುತ್ತಿದ್ದು, ಸೋಂಕು ಪತ್ತೆಯಾದ ನಾಲ್ಕೈದು ಗಂಟೆ ಬಳಿಕ ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
Published On - 8:36 am, Mon, 27 July 20