BBMP ವ್ಯಾಪ್ತಿಯಲ್ಲಿ ಜಾರಿಯಲ್ಲಿದೆ.. Mask ಹಾಕದಿದ್ದರೆ 1000 ರೂ ದಂಡ

ಬೆಂಗಳೂರು: ಆರೇಳು ತಿಂಗಳಿಂದ ಕೊರೊನಾ ಎಂಬ ಪಿಡುಗು ನಮ್ಮನ್ನ ಆವರಿಸಿದೆ. ಹೀಗಾಗಿ ಎಲ್ಲಾ ಕಡೆ ಮಾಸ್ಕ್ ಖಡ್ಡಾಯಗೊಳಿಸಲಾಗಿದೆ. ಆದರೂ ಕೂಡ ನಮ್ಮ ಜನ ಮಾಸ್ಕ್ ಹಾಕದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದಿದ್ದರೆ  1,000 ರೂ ದಂಡ ವಿಧಿಸಲಾಗುತ್ತಿದೆ ಎಂದು BBMP ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ಪ್ರತಿ ವಲಯಕ್ಕೆ ಒಂದರಂತೆ ಒಟ್ಟು 8 ವಾಹನಗಳನ್ನು ನೀಡಲಾಗಿದೆ. ಪ್ರತಿ ವಾಹನಕ್ಕೆ ಏಳೂವರೆ ಲಕ್ಷದಂತೆ ನೀಡಿ ಖರೀದಿಸಲಾಗಿದೆ. ಪ್ರತಿ ವಾಹನದಲ್ಲಿ 2 ಶಿಫ್ಟ್​ನಲ್ಲಿ ಐವರು ಕಾರ್ಯ‌ ನಿರ್ವಹಿಸ್ತಾರೆ. […]

BBMP ವ್ಯಾಪ್ತಿಯಲ್ಲಿ ಜಾರಿಯಲ್ಲಿದೆ.. Mask ಹಾಕದಿದ್ದರೆ 1000 ರೂ ದಂಡ
Updated By: ಸಾಧು ಶ್ರೀನಾಥ್​

Updated on: Oct 02, 2020 | 11:54 AM

ಬೆಂಗಳೂರು: ಆರೇಳು ತಿಂಗಳಿಂದ ಕೊರೊನಾ ಎಂಬ ಪಿಡುಗು ನಮ್ಮನ್ನ ಆವರಿಸಿದೆ. ಹೀಗಾಗಿ ಎಲ್ಲಾ ಕಡೆ ಮಾಸ್ಕ್ ಖಡ್ಡಾಯಗೊಳಿಸಲಾಗಿದೆ. ಆದರೂ ಕೂಡ ನಮ್ಮ ಜನ ಮಾಸ್ಕ್ ಹಾಕದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದಿದ್ದರೆ  1,000 ರೂ ದಂಡ ವಿಧಿಸಲಾಗುತ್ತಿದೆ ಎಂದು BBMP ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಪ್ರತಿ ವಲಯಕ್ಕೆ ಒಂದರಂತೆ ಒಟ್ಟು 8 ವಾಹನಗಳನ್ನು ನೀಡಲಾಗಿದೆ. ಪ್ರತಿ ವಾಹನಕ್ಕೆ ಏಳೂವರೆ ಲಕ್ಷದಂತೆ ನೀಡಿ ಖರೀದಿಸಲಾಗಿದೆ. ಪ್ರತಿ ವಾಹನದಲ್ಲಿ 2 ಶಿಫ್ಟ್​ನಲ್ಲಿ ಐವರು ಕಾರ್ಯ‌ ನಿರ್ವಹಿಸ್ತಾರೆ. ಮಾಸ್ಕ್ ದಂಡ, ದೈಹಿಕ ಅಂತರ, ತ್ಯಾಜ್ಯ ವಿಲೇವಾರಿ ಸರಿಯಾಗಿ ನಿರ್ವಹಿಸದವರ ವಿರುದ್ಧ ಕ್ರಮಕೈಗೊಳ್ಳಲು ಮಾರ್ಷಲ್​ಗಳನ್ನು ನೇಮಕ ಮಾಡಿದ್ದೇವೆ.

ದಂಡ ವಿಧಿಸಿದಾಗ ಸಾರ್ವಜನಿಕರು ಹಾಗೂ ಮಾರ್ಷಲ್​ಗಳ ನಡುವೆ ಗಲಾಟೆ ಗೊಂದಲಗಳು ಆಗುತ್ತಿವೆ. ಹೀಗಾಗಿ ಸಾಧ್ಯವಾದಷ್ಟು ಸಮಾಧಾನದಿಂದ ವರ್ತಿಸುವಂತೆ ಮಾರ್ಷಲ್‌ಗಳಿಗೆ ಹೇಳಲಾಗಿದೆ ಎಂದು ಮಂಜುನಾಥ ಪ್ರಸಾದ್ ಹೇಳಿದ್ದಾರೆ.