ಬಿಬಿಎಂಪಿ ಮಹತ್ವದ ನಿರ್ಧಾರ, ನಗರದ 8 ಕಡೆ ಹೆಲ್ತ್‌ ಕೇರ್ ಸೆಂಟರ್ ನಿರ್ಮಾಣ

|

Updated on: Jun 25, 2020 | 7:48 AM

ಬೆಂಗಳೂರು: ನಗರದಲ್ಲಿ ಕೊರೊನಾ ನರ್ತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಬಿಬಿಎಂಪಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೊರೊನಾ ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಹೆಲ್ತ್‌ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲು ಬಿಬಿಎಂಪಿ ಆದೇಶಿಸಿದೆ. ಬೆಂಗಳೂರಿನ 8 ಕಡೆ ಹೆಲ್ತ್‌ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ. ಐಬಿಸಿ ಬೆಂಗಳೂರು ಸಿಟಿ ಸೆಂಟರ್‌ನಲ್ಲಿ 100 ಹಾಸಿಗೆ, ಕಂಠೀರವ ಸ್ಟೇಡಿಯಂನ ಯೂತ್ ಹಾಸ್ಟೆಲ್‌ನಲ್ಲಿ 200, ಫಿನಿಕ್ಸ್ ಹೋಟೆಲ್‌ನಲ್ಲಿ 140, ರಮಡ ಹೋಟೆಲ್‌ನಲ್ಲಿ 140, ರೆಜೆಂಟ್ ಪ್ಯಾಲೇಸ್‌ನಲ್ಲಿ 140 […]

ಬಿಬಿಎಂಪಿ ಮಹತ್ವದ ನಿರ್ಧಾರ, ನಗರದ 8 ಕಡೆ ಹೆಲ್ತ್‌ ಕೇರ್ ಸೆಂಟರ್ ನಿರ್ಮಾಣ
ಬಿಬಿಎಂಪಿ ಮುಖ್ಯ ಕಚೇರಿ
Follow us on

ಬೆಂಗಳೂರು: ನಗರದಲ್ಲಿ ಕೊರೊನಾ ನರ್ತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಬಿಬಿಎಂಪಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೊರೊನಾ ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಹೆಲ್ತ್‌ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲು ಬಿಬಿಎಂಪಿ ಆದೇಶಿಸಿದೆ. ಬೆಂಗಳೂರಿನ 8 ಕಡೆ ಹೆಲ್ತ್‌ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ.

ಐಬಿಸಿ ಬೆಂಗಳೂರು ಸಿಟಿ ಸೆಂಟರ್‌ನಲ್ಲಿ 100 ಹಾಸಿಗೆ, ಕಂಠೀರವ ಸ್ಟೇಡಿಯಂನ ಯೂತ್ ಹಾಸ್ಟೆಲ್‌ನಲ್ಲಿ 200, ಫಿನಿಕ್ಸ್ ಹೋಟೆಲ್‌ನಲ್ಲಿ 140, ರಮಡ ಹೋಟೆಲ್‌ನಲ್ಲಿ 140, ರೆಜೆಂಟ್ ಪ್ಯಾಲೇಸ್‌ನಲ್ಲಿ 140 ಹಾಸಿಗೆಗಳ ವ್ಯವಸ್ಥೆ ಮಾಡಿದೆ. ನಗರದ ಒಟ್ಟು 8 ಕಡೆ ಹೆಲ್ತ್‌ ಕೇರ್ ಸೆಂಟರ್ ನಿರ್ಮಾಣ ಮಾಡಿ ಅದಕ್ಕೆ ಬೇಕಾದ ಅಗತ್ಯ ಆರೋಗ್ಯ ಸಿಬ್ಬಂದಿ ನೇಮಕ ಮಾಡುವ ಬಗ್ಗೆ ಬಿಬಿಎಂಪಿ ಆಯುಕ್ತರಿಂದ ಅಧಿಕೃತವಾದ ಆದೇಶ ಹೊರಡಿದೆ.

Published On - 7:34 am, Thu, 25 June 20