ಕಂಟೈನ್ಮೆಂಟ್ ಜೋನ್ ಪಕ್ಕದಲ್ಲೇ ಇದೆ ಈ SSLC ಪರೀಕ್ಷಾ ಕೇಂದ್ರ
ಬಳ್ಳಾರಿ: ಕಂಟೈನ್ಮೆಂಟ್ ಜೋನ್ ಪಕ್ಕದಲ್ಲಿಯೇ SSLC ಪರೀಕ್ಷಾ ಕೇಂದ್ರವನ್ನು ನಿಗದಿ ಪಡಿಸಿ ಜಿಲ್ಲಾಡಳಿತ ಎಡವಟ್ಟು ಮಾಡಿರುವ ಘಟನೆ ನಗರದ ಸತ್ಯನಾರಾಯಣ ಪೇಟೆಯಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರವಾಗಿ ನಿಗದಿ ಪಡಿಸಲಾಗಿರುವ ನಗರದ ಶಾರದಾ ವಿದ್ಯಾಪೀಠ ಶಾಲೆಯ ಕೆಲವೇ ಕೆಲವು ಮೀಟರ್ಗಳ ಅಂತರದಲ್ಲಿ ಕಂಟೈನ್ಮೆಂಟ್ ಜೋನ್ ಒಂದು ಇದೆ. ಹೀಗಾಗಿ, ಪರೀಕ್ಷಾ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಲು ಪೋಷಕರು ಒತ್ತಾಯಿಸಿದ್ದಾರೆ. ಆದರೆ ಜಿಲ್ಲಾಡಳಿತವು ಅದೇ ಕೇಂದ್ರದಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದು ಇದರಿಂದ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಈ ಪರೀಕ್ಷಾ […]
ಬಳ್ಳಾರಿ: ಕಂಟೈನ್ಮೆಂಟ್ ಜೋನ್ ಪಕ್ಕದಲ್ಲಿಯೇ SSLC ಪರೀಕ್ಷಾ ಕೇಂದ್ರವನ್ನು ನಿಗದಿ ಪಡಿಸಿ ಜಿಲ್ಲಾಡಳಿತ ಎಡವಟ್ಟು ಮಾಡಿರುವ ಘಟನೆ ನಗರದ ಸತ್ಯನಾರಾಯಣ ಪೇಟೆಯಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರವಾಗಿ ನಿಗದಿ ಪಡಿಸಲಾಗಿರುವ ನಗರದ ಶಾರದಾ ವಿದ್ಯಾಪೀಠ ಶಾಲೆಯ ಕೆಲವೇ ಕೆಲವು ಮೀಟರ್ಗಳ ಅಂತರದಲ್ಲಿ ಕಂಟೈನ್ಮೆಂಟ್ ಜೋನ್ ಒಂದು ಇದೆ.
ಹೀಗಾಗಿ, ಪರೀಕ್ಷಾ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಲು ಪೋಷಕರು ಒತ್ತಾಯಿಸಿದ್ದಾರೆ. ಆದರೆ ಜಿಲ್ಲಾಡಳಿತವು ಅದೇ ಕೇಂದ್ರದಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದು ಇದರಿಂದ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಈ ಪರೀಕ್ಷಾ ಕೇಂದ್ರದಲ್ಲಿ ಸುಮಾರು 482 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
Published On - 8:38 am, Thu, 25 June 20